ಸಿಂಧನೂರು ಸೇ 29.ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ಪಾಲಿಸಿ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಂತೆಯೇ ರಾಜ್ಯದ ದಕ್ಷಿಣ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ ಅದೇ ರೀತಿ ಸಿಂಧನೂರುನಲ್ಲಿ ಕೂಡ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ಬಂದಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದಿಂದ ಬಂದ್ ಗೆ ಬೆಂಬಲಿಸಿ, ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ ಅವರ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್ ಗೆ ಬೆಂಕಿ ಹಚ್ಚಿ , ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು.
ನಂತರ ಮಾತನಾಡಿದ ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ನಿಲ್ಲಿಸಬೇಕು, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಮುಖಂಡ ಬುದೇಶ ಮರಾಠ, ಸದಸ್ಯರಾದ ಅವಿನಾಶ್ ದೇಶಪಾಂಡೆ, ರಾಘು ಅಲ್ಲುರಕರ, ಶಿವು kgf, ಓಬಳೇಶ್ ನಾಯಕ, ಮಂಜು ಪಾಟೀಲ್, ಅಶೋಕ ಉಪ್ಪಾರ, ಪ್ರಶಾಂತ್ ಲಾರೆನ್ಸ, ಗೋಪಾಲ್, ಪ್ರಭು, ಸುರೇಶ್, ಪಾಟೀಲ್, ರಮೇಶ್ ಕೆಮ್ಮರೆಡ್ಡಿ, ಅಕ್ಷಯಗೌಡ, ಮೌನೇಶ್ ಕೊಲ್ಮೀ, ಅಲ್ಲಮಪ್ರಭು, ಮಲ್ಲಿಕಾರ್ಜುನ, ವೆಂಕಟೇಶ್ ನಾಯಕ್, ಹಾವುಪ್ಪ, ಶಾಂತಪ್ಪ, ಸಂತೋಷ ಶಾಸ್ತ್ರೀ ಮಠ ಸೇರಿದಂತೆ ಹಲವರಿದ್ದರು.