ರಾಯಚೂರು.ಅ.೦೧(ಕ.ವಾ):- ೨೦೨೩-೨೪ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಎಕರಿಗೆ ೩.೦೦ ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ ೧೫ ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ಗೆ ರೂ.೬೭೬೦/- ರಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
ಸೆ.೦೬ರಿಂದ ರೈತರ ನೊಂದಣಿ ಕಾಲಾವಧಿಯನ್ನು ೪೫ ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು ೯೦ ದಿನಗಳವರೆಗೆ ನಿಗಧಿಪಡಿಸಿದೆ. ರೈತರಿಂದ ಸೂರ್ಯಕಾಂತಿಯನ್ನು ಖರೀದಿಸುವ ಸಂಬಂಧ ಖರಿದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ಬಾಂಧವರು ಫ್ರೂಟ್ಸ್ ಐ.ಡಿ ಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿ ಸೂರ್ಯಕಾಂತಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪರಿಡಿಸಕೊಳ್ಳುವಂತೆ ರೈತ ಬಾಂಧವರಲ್ಲಿ ಕೋರಲಾಗಿದೆ ಹಾಗೂ ರೈತರ ಬಾಂಧವರು ಕೋವಿಡ್-೧೯ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ನಿಯಮಗಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖರಿದಿ ಕೇಂದ್ರಗಳ ವಿವಿರ: ರಾಯಚೂರು ತಾಲೂಕಿನ )ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ, ಹೈದ್ರಬಾದ್ ರಸ್ತೆ, ರಾಯಚೂರು(೯೯೮೬೯೨೦೩೧೩). ಹಾಗೂ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಹುಣಸಿಹಾಳಹುಡಾ(೯೭೩೧೩೬೨೦೫೦), ದೇವದುರ್ಗ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಜಾಲಹಳ್ಳಿ(೭೮೯೯೩೧೨೯೮೯), ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಗಬ್ಬೂರು(೯೯೭೨೦೭೫೦೦೭), ಲಿಂಗಸುಗೂರು ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಮಟ್ಟೂರು(೯೧೧೩೬೪೯೮೩೬), ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ನಾಗರಹಾಳ(೭೪೮೩೬೮೫೭೨೦), ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಮೆದಿಕನಹಾಳ(೯೬೬೩೭೦೪೯೨೧), ಸಿಂಧನೂರು ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಜವಳಗೇರಾ(೯೮೮೦೯೬೩೧೮೬), ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಹುಡಾ(೯೯೬೪೩೧೫೮೬೮), ಮಾನವಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ತೋರಣದಿನ್ನಿ(೯೯೦೨೩೮೭೩೧೬), ಹಾಗೂ ಸಿರವಾರ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಸಿರವಾರ(೯೮೮೦೮೯೧೯೧೯)ಖರೀದಿ ಕೇಂದ್ರಗಳನ್ನು ಸಂಪರ್ಕಿಸಬಹುದೆಂದು ಅವರು ಪ್ರಕಟೆಣೆಯಲ್ಲಿ ತಿಳಿಸಿದ್ದಾರೆ.