ಸಿಂಧನೂರು ಅ 02.ನಗರದ ಗಂಗಾವತಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕಘಟಕ,ನಗರ ಘಟಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆ ಇವರ ಅಧ್ಯಕ್ಷತೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆರವರು ಮಾತನಾಡಿ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗೆ ಧಕ್ಕೆ ಆದಲ್ಲಿ ಅನ್ಯಾಯದ ವಿರುದ್ಧ ನಮ್ಮ ಕರ್ನಾಟಕ ಸೇನೆಯು ದಿಟ್ಟತನದಿಂದ ವಿರೋಧಿಸುತ್ತಿದೆ. ಉತ್ತರ ಕರ್ನಾಟಕದವರೆ ಆಗಿರುವ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆರವರ ಕೈ ಬಲ ಪಡಿಸಲು ಈ ಭಾಗದಲ್ಲಿ ಸಂಘಟನೆ ಹೆಚ್ಚು ಒತ್ತು ಕೊಡಬೇಕು. ಆದ್ದರಿಂದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸುವ ಮನೋಭಾವ ಬೆಳೆಸಿಕೊಂಡು, ಕ್ರಿಯಾಶೀಲರಾಗಿ ಸಿಂಧನೂರು ತಾಲೂಕ ಅಧ್ಯಕ್ಷ ಮಂಜುನಾಥ ಗಾಣಿಗೇರರವರ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸುವಂತೆ ನೂತನ ಪದಾಧಿಕಾರಿಗಳಿಗೆ ಹೇಳಿದರು.
ಜಿಲ್ಲಾ ಪ್ರಧಾನ ಸಂಚಾಲಕ ಮಾಣಿಕ್ ಇಂಗಳೆ ಮಾತನಾಡಿ ಹುಟ್ಟು ಹೋರಾಟಗಾರರಾದ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆರವರ ಮಾರ್ಗದರ್ಶನ ಮತ್ತು ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆರವರ ಸಲಹೆಯಿಂದ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ ಜೊತೆಗೂಡಿ ತಾಲೂಕಿನಾದ್ಯಂತ ಕನ್ನಡ ಪರ ಹೋರಾಟಗಳನ್ನು ಮಾಡುವ ಜೊತೆ ಸ್ಥಳೀಯ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಸಂಘಟನೆಯು ಜನಸ್ನೇಹಿಯಾಗಿ ನಡೆಯುವಂತೆ ನೂತನ ಪದಾಧಿಕಾರಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ ನೂತನ ಪದಾಧಿಕಾರಿಗಳಿಗೆ ಪದನಾಮದ ಆದೇಶ ಪತ್ರ ನೀಡಿ ಮಾತನಾಡಿ, ನಮ್ಮ ಕರ್ನಾಟಕ ಸೇನೆಯು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಜೊತೆ ಅಖಂಡ ಕರ್ನಾಟಕಕ್ಕೆ ಧಕ್ಕೆ ತರುವ ಸಂದರ್ಭ ಬಂದಾಗ ನೇರವಾಗಿ ಖಂಡಿಸುತ್ತದೆ, ನಮ್ಮ ಸಂಘಟನೆ ಉದ್ದೇಶಗಳಿಗೆ ಪೂರಕವಾಗುವಂತೆ ಪದಾಧಿಕಾರಿಗಳು ನಡೆದುಕೊಳ್ಳಬೇಕು. ನಮ್ಮ ಕರ್ನಾಟಕ ಸೇನೆಯ ಸಂಘಟನೆಯನ್ನು ಈ ಭಾಗದಲ್ಲಿ ಬಲಪಡಿಸುವ ಮೂಲಕ ನಮ್ಮ ಸಂಘಟನೆ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ ಹಾಗೂ ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆರವರ ಶಕ್ತಿ ಹೆಚ್ಚಿಸುವ ಕಾರ್ಯ ಮಾಡೋಣ ಎಂದರು.
ಅದೇ ರೀತಿ ವೇದಿಕೆಯಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಮುಖಂಡ ಬೂದೇಶ ಮರಾಠ, ನಮ್ಮ ಕರ್ನಾಟಕ ಸೇನೆಯ ತಾಲೂಕಘಟಕ ಗೌರವಾಧ್ಯಕ್ಷ ಅವಿನಾಶ ದೇಶಪಾಂಡೆ, ಸೇರಿದಂತೆ ಹಲವರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಜಡಿಸ್ವಾಮಿ ಸಿಂಗಾಪುರ ಸ್ವಾಗತವನ್ನು ಪ್ರಶಾಂತ್ ಮಾಡಿದರು.
ಪದಾಧಿಕಾರಿಗಳು:
ತಾಲೂಕು ಘಟಕ ಗೌರವಾಧ್ಯಕ್ಷ: ಅವಿನಾಶ್ ದೇಶಪಾಂಡೆ
ತಾಲೂಕಾ ಉಪಾಧ್ಯಕ್ಷ: ಓಬಳೇಶ್ ನಾಯಕ್
ತಾಲೂಕಾ ಪ್ರಧಾನ ಕಾರ್ಯದರ್ಶಿ: ಜಡಿಸ್ವಾಮಿ ಸಿಂಗಾಪುರ
ತಾಲೂಕಾ ಸಂಘಟನಾ ಕಾರ್ಯದರ್ಶಿ:ರಘು ಅಲ್ಲೂರಕರ್
ತಾಲೂಕಾ ಕಾರ್ಯದರ್ಶಿ: ವೆಂಕಟೇಶ್ ನಾಯಕ್
ತಾಲೂಕಾ ಸಹಕಾರ್ಯದರ್ಶಿ: ಟಿ.ರಮೇಶ
ತಾಲೂಕಾ ಖಜಾಂಚಿ:ಗೋಪಾಲ ಶ್ರೇಷ್ಠಿ
ತಾಲೂಕಾ ಸಂಚಾಲಕ:ಮೌನೇಶ ಕೊಲಮಿ
ತಾಲೂಕಾ ಘಟಕದ ಸದಸ್ಯ: ಹುಲುಗಪ್ಪ
ನಗರ ಘಟಕ ಅಧ್ಯಕ್ಷ: ಶಿವರಾಜ್
ನಗರ ಘಟಕ ಪ್ರ.ಕಾರ್ಯದರ್ಶಿ: ಪ್ರಶಾಂತ್
ನಗರ ಘಟಕ ಕಾರ್ಯದರ್ಶಿ: ಮಂಜುನಾಥ
ಗ್ರಾಮೀಣ ಘಟಕ ಕಾರ್ಯಾದರ್ಶಿ:ಸಿದ್ದಪ್ಪ
ಸದಸ್ಯರು: ನಾಗರಾಜ್ ಖಂಡಿಮಠ,ಬಾಬ ಖಾನ್, ಸುರೇಶ್ ಪಾಟೀಲ್, ಸುರೇಶ್, ಯಮನೂರಗೌಡ