ರಾಯಚೂರು.ಅ.೦೪ ಒಂದು ತಿಂಗಳವರೆಗೆ ಜಿಲ್ಲಾದ್ಯಂತ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲು ಜಿಲ್ಲಾ ಪಂಚಾಯತ್ ಸಿದ್ಧವಾಗಿದ್ದು, ಇನ್ನೂ ನರೇಗಾ ಯೋಜನೆಯ ಮುಂದಿನ ಆರ್ಥಿಕ ವರ್ಷದ ಕಾರ್ಮಿಕ ಪೂರ್ಣಗೊಳಿಸುವಂತೆ ವೇಳಾಪಟ್ಟಿ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಿAದ ಸೂಚನೆ ಬಂದಿದೆ. ಅದರಂತೆ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ನರೇಗಾ ಯೋಜನೆಯ ೨೦೨೪-೨೫ನೇ ಸಾಲಿನ ಕಾರ್ಮಿಕ ಉದ್ದೇಶದಿಂದ ಕಾರ್ಯಕ್ರಮಗಳಾದ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಐಇಸಿ ಚಟುವಟಿಕೆಯಡಿ ಯೋಜನೆಯಡಿ ದೊರೆಯುವ ಕೂಲಿಯ ಮೊತ್ತ, ಗಂಡು ಹೆಣ್ಣಿಗೆ ಸಮಾನ ಕೂಲಿ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪುಮಾಣ ಮತ್ತು ಕೆಲಸದ ಅವಧಿ. ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು. ಕಾಮಗಾರಿ ಪುಮಾಣದಲ್ಲಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷÀ ಚೇತನರಿಗೆ ಶೇ.೫೦ರಷ್ಟು ರಿಯಾಯಿತಿ. ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು ಮತ್ತು ಲಿಂಗತ್ಯ ಅಲ್ಪಸಂಖ್ಯಾತರುಗಳಿಗೆ ನಿರ್ವಹಿಸುವ ಕೆಲಸಕ್ಕೆ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ.೨೦ ರಷ್ಟ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವ ಮೂಲಕ ಮಹಿಳಾ ಭಾಗವಹಿಸಿಕೆಯನ್ನು ಕನಿಷ್ಠ ಶೇ.೬೦ ಪ್ರತಿಶತಕ್ಕೆ ಹೆಚ್ಚಿಸುವುದು. ಜಲ ಸಂಜೀವಿನಿ ಕಾರ್ಯಕ್ರಮದಡಿ ವೈಜ್ಞಾನಿಕ ಯೋಜನಾ ವರದಿ ತಯಾರಿಕೆ ಮತ್ತು ಅನುಷ್ಠ್ಠಾನದ ಮಹತ್ವ ಹಾಗೂ ಅಗತ್ಯತೆ ಬಗ್ಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರತಿ ಮನೆಗೂ ಭೇಟಿ ನೀಡುವುದರ ಜೊತೆಗೆ ಅ.೦೨ರಿಂದ ಅ.೩೧ರವರೆಗೆ ಒಂದು ತಿಂಗಳುಗಳ ಕಾಲ ನಿರಂತರವಾಗಿ ಜಾಗೃತಿ ವಾಹನದ (ಧ್ವನಿವರ್ಧಕ) ಮೂಲಕ ಗ್ರಾಮಸ್ಥರಿಗೆ (ಹಿರಿಯ ನಾಗರಿಕರು, ಮಹಿಳೆಯರು, ದುರ್ಬಲ ವರ್ಗದವರು, ಲಿಂಗತ್ಯ, ಅಲ್ಪಸಂಖ್ಯಾತರು, ಸ್ವ-ಸಹಾಯ ಸಂಘಗಳು) ಹಾಗೂ ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯ “ಜಲ ಸಂಜೀವಿನಿ” ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಚಾರ ಆಂದೋಲನ ಕೈಗೊಳ್ಳುವುದು.
ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ “ಕಾಮಗಾರಿ ಬೇಡಿಕೆ ಪೆಟ್ಟಿಗೆ” ಯನ್ನು ಇಡುವುದು. ದಿನಾಂಕ:೩೧-೧೦-೨೦೨೩ರ ವರೆಗೆ ಅರ್ಜಿಗಳನ್ನು ಸ್ವೀಕರಿಸುವುದು. ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇಡಲಾಗುತ್ತಿದ್ದು, ಅ.೩೧ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಇದರ ಜತೆಗೆ ಜಲಸಂಜೀವಿನಿ ವಾರ್ಷಿಕ ಕ್ರಿಯಾ ಯೋಜನೆ ಕೂಡ ತಯಾರಿಸಲಾಗುತ್ತಿದೆ. ಕನಿಷ್ಠ ಶೇ.೧೫ರಷ್ಟನ್ನು ನರೇಗಾದಡಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿ ಅನುಷ್ಠ್ಠಾನಗೊಳಿಸಿ, ಅಂತರ್ಜಲ ಮಟ್ಟ ಹೆಚ್ಚಿಸುವುದು ಮತ್ತು ಪರಿಸರ ಸಮತೋಲನ ಕಾಪಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಜನರಿಂದ ಹಾಗೂ ಕಾಮಗಾರಿ ಬೇಡಿಕೆ ಪೆಟ್ಟಿಗೆ ಮೂಲಕ ಸ್ವೀಕರಿಸಲಾದ ಅರ್ಜಿ ಪರಿಶೀಲಿಸಿ, ನಿಯಮಾನುಸಾರ ವಾರ್ಡ್ ಸಭೆಗಳಲ್ಲಿ ಕಾಮಗಾರಿ ಪಟ್ಟಿ ತಯಾರಿಸಿ ಅನುಮೋದಿಸಿ ಗ್ರಾಮ ಸಭೆಗೆ ಸಲ್ಲಿಸುವಂತೆ ಮಾಡಲಾಗುತ್ತದೆ.
ಕೂಲಿ ಸಾಮಗ್ರಿ ಅನುಪಾತ: ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಕೂಲಿ ಸಾಮಗಿ ಅನುಪಾತವನ್ನು ಲೆಕ್ಕ ಹಾಕುವಾಗ ಕಡ್ಡಾಯವಾಗಿ ಮಾಡಲ ಪತ್ರಿಕೆಗಳಲ್ಲಿ ನೀಡಲಾಗಿರುವ ಕೂಲಿ ಸಾಮಗ್ರಿ ಪರಿಗಣಿಸತಕ್ಕದ್ದು, ಜಿಲ್ಲಾ ಪೂರ್ಣಗೊಳಿಸಲು ಪಂಚಾಯಿತಿಯು ಅನುಪಾತವನ್ನು ವಾರ್ಷಿಕ ಕ್ರಿಯಾಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಸಾಮಗ್ರಿ ಪರಿಗಣಿಸತಕ್ಕದ್ದು, ಜಿಲ್ಲಾ ಪಂಚಾಯತಿಯ ಅನುಪಾತವನ್ನು ವಾರ್ಷಿಕ ಕ್ರಿಯಾಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಸಾಮಾಗ್ರಿ ಅನುಪಾತವು ಶೇ.೪೦ರಷ್ಟನ್ನು ಮೀರತಕ್ಕದಲ್ಲ. ಯೋಜನೆಯಡಿ ಕಾಮಗಾರಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸ್ಥಳದ ಲಭ್ಯತೆ, ಸೂಕ್ತತೆ ಖಚಿತಪಡಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಬೇಕು ಹಾಗೂ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಭಿಯಾನ ಮೂಲಕ ಕೈಗೊಳ್ಳಲು ಸೂಚಿಸಿದೆ.
ಮಹಿಳಾ/ಮಕ್ಕಳ ಅಭಿಯಾನ: ಶೋಷಿತ ಮಹಿಳೆಯರು, ಅಬಲೆಯರು, ಗ್ರಾಮೀಣ ಮಹಿಳೆಯರ ಸಮಸ್ಯೆಗಳನ್ನು ಗುರುತಿಸಿ, ವಿಶ್ಲೇಷಿಸಿ ಸ್ಥಳೀಯ ಮಟ್ಟದ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಗ್ರಾಮಸಭೆಯು ನೆರವಾಗುವುದು. ಸಾಧನೆಗೈದ ಮಹಿಳೆಯರನ್ನು ಪ್ರೋತ್ಸಾಹಿಸುವುದು, ಅಭಿವೃದ್ಧಿ ಚಟುವಟಿಕೆಗಳ ಕುರಿತು ಜಾಗೃತಿ ಮೂದಿಸುವುದು ಸೇರಿದಂತೆ, ಅಹವಾಲುಗಳನ್ನು ಆಲಿಸಲು ಅರ್ಹ ಮಹಿಳಾ ಫಲಾನುಭವಿಗಳನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಆಯೋಜನೆಯಿಂದ ಸಾಧ್ಯವಾಗುತ್ತದೆ.
ಕೋಟ್…೧
ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದ ಜನರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಸಾಮಾಜಿಕ ರಕ್ಷಣೆಯನ್ನು ನೀಡುವುದು ಯೋಜನೆಯ ಮುಖಾಂತರ ನಿಗದಿತ ಹಕ್ಕುಗಳನ್ನು ನೀಡುವುದರೊಂದಿಗೆ ಸಮಾಜದಲ್ಲಿ ದುರ್ಬಲ ವರ್ಗದವರು, ವಿಶೇಷÀವಾಗಿ ಹಿರಿಯ ನಾಗರೀಕರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಯನ್ನು ಸಾಧಿಸುವುದು. ಈ ಕಾರ್ಯ ಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ರಾಹುಲ್ ತುಕಾರಾಮ ಪಾಂಡ್ವೆ ಸಿಇಒ, ಜಿಪಂ, ರಾಯಚೂರು.
ಕೋಟ್…೨
ಜಿಲ್ಲೆಯ ೧೭೯ ಗ್ರಾಪಂಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ ನರೇಗಾ ಯೋಜನೆ ಕುರಿತು ಜನರಿಗೆ ತಿಳಿಸಲಾಗುತ್ತಿದೆ. ಕೆಲಸ ಮತ್ತು ಕಾಮಗಾರಿಗಳ ಬೇಡಿಕೆಯನ್ನು ಜನರಿಂದ ಸಂಗ್ರಹಿಸಿಕೊಳ್ಳಲಾಗುತ್ತದೆ. ಈ ಅಭಿಯಾನದಲ್ಲಿ ಗ್ರಾಪಂನ ಎಲ್ಲ ಸಿಬ್ಬಂದಿ ಪಾಲ್ಗೊಂಡು ವಾರ್ಡ್ಗಳ ಪ್ರತಿ ಮನೆಗೂ ಭೇಟಿ ನೀಡಿ ಯೋಜನೆಯ ಹಾಗೂ ಇತರ ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ. ಜಾಗೃತಿ ಮೂಲಕ ಗ್ರಾಮಸ್ಥರಿಗೆ, ಸಂಘಗಳಡಿ ಸಿಗುವ ಸೌಲಭ್ಯ ಹಾಗೂ ಜಲ ಸಂಜೀವಿನ ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಚಾರ ಆಂದೋಲನ ಕೈಗೊಳ್ಳಲಾಗುತ್ತದೆ.
.ಪ್ರಕಾಶ .ವಿ. ಯೋಜನಾ ನಿರ್ದೇಶಕರು ಜಿ.ಪಂ ರಾಯಚೂರು.