ನವೆಂಬರ್ 27.ಸಿಂಧನೂರ ತಾಲೂಕಿನ 19 ವರ್ಷದ ಯುವಕನೊಬ್ಬ ಕಾಣೆಯಾಗಿದ್ದು, ಯುವಕನ ತಂದೆ ಇತ್ತಿಚೆಗೆ ಸಿಂಧನೂರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ಯುವಕ ತಾಲೂಕಿನ ಗೋರೆಬಾಳ ಗ್ರಾಮದ ಬಾಲಪ್ಪ ತಂದೆ ಹುಸೆನಪ್ಪ ಎಂದು ತಿಳಿದುಬಂದಿದೆ. ಈತ ದ್ವಿತೀಯ ಪಿಯುಸಿ ಓದಿದ್ದು, ಇದ್ದಕ್ಕಿದ್ದಂತೆ ಕಾಣೆಯಾದ ಬಗ್ಗೆ ಯಾವುದೆ ಕಾರಣ ತಿಳಿದು ಬಂದಿಲ್ಲ ಎಂದು ತಂದೆ ಹೇಳಿದ್ದಾರೆ.
ಹೆಣ್ಣೆಗೆಂಪು , ಸಾಧಾರಣ ಮೈಕಟ್ಟು, ಹೊಂದಿದ್ದು, ಈತನ ಗುರುತು ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಸಿಂಧನೂರ ಗ್ರಾಮೀಣ ಪೊಲೀಸ್ ಠಾಣೆ 08535-223733 ಮಾಹಿತಿ ನೀಡುವಂತೆ ಕೋರಲಾಗಿದೆ ಪಾಲಕರ ನಂಬರ್ 6361874140.