ಸಿಂಧನೂರು 19 ಡಿಸೆಂಬರ್. ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಕಾರ್ಯಕ್ರಮದ ಉದ್ಘಾಟನೆಗಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರು ಉನ್ನತ ಶಿಕ್ಷಣ ಸಚಿವರು ಕಂದಾಯ ಸಚಿವರು ಬರುತ್ತಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಸಿಂಧನೂರಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಕೇಳಿ ಬಂದಿದೆ ಅದೇನಂದರೆ ಸಿಂಧನೂರನ್ನು ಜಿಲ್ಲೆಯನ್ನಾಗಿ ಘೋಷಿಸಲಿದ್ದಾರೆ ಎಂದು ಸಾರ್ವಜನಿಕ ಅಂಗಳದಲ್ಲಿ ವದಂತಿ ಕೇಳಿಬರುತ್ತಿದೆ ಹಾಗಾದ್ರೆ ಇದು ನಿಜಾನಾ…?
ಹೌದು ಇದು ನಿಜವಾಗಲೂ ಮಾನ್ಯ ಮುಖ್ಯಮಂತ್ರಿಗಳು ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಸಿಂಧನೂರು ಜಿಲ್ಲೆಯನ್ನಾಗಿ ಘೋಷಿಸಿದರೆ ತಪ್ಪೇನಿಲ್ಲ ನಮ್ಮ ಭತ್ತದ ನಾಡು ಸಿಂಧನೂರು ಯಾವುದರಲ್ಲಿ ಕಡಿಮೆ ಇದೆ ಸಿಂಧನೂರು ಜಿಲ್ಲೆಯನ್ನಾಗಿ ಘೋಷಿಸಲೇಬೇಕು ಇಲ್ಲದಿದ್ದರೆ ಸ್ಥಳೀಯ ಶಾಸಕರು ಜನಪ್ರತಿನಿಧಿಗಳು ರಾಜೀನಾಮೆ ಕೊಟ್ಟು ಮನೆಗೆ ಬರಬೇಕು ಮುಖ್ಯಮಂತ್ರಿಗಳು ಹಾಗೂ ಸರ್ಕಾರ ತಾವಾಗಿಯೇ ಸಿಂಧನೂರು ಜಿಲ್ಲೆಯಾಗಿ ಘೋಷಿಸುತ್ತಾರೆ.
ಸಿಂಧನೂರು ತಾಲೂಕನ್ನು ಆರ್ಥಿಕವಾಗಿ ಪರಗಣಿಸಿದರೆ, ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಿಂಧನೂರು ತಾಲೂಕು ಜಿಲ್ಲಾ ಕೇಂದ್ರ ಯಾಕಾಗಬಾರದು, ಎಲ್ಲಾ ಅರ್ಹತೆಯನ್ನು ಹೊಂದಿದ ಈ ತಾಲೂಕು ಜಿಲ್ಲಾ ಕೇಂದ್ರ ಆಗಲೇಬೇಕು
ಒಂದು ಜಿಲ್ಲಾ ಕೇಂದ್ರವನ್ನು ಮಾಡಬೇಕಾದರೆ, ಭೌಗೋಳಿಕ, ಆರ್ಥಿಕ, ಕೃಷಿ, ವಾಣಿಜ್ಯ, ಹಾಗೂ ಇನ್ನಿತರ ವಿಷಯಗಳನ್ನು ಅರಿತುಕೊಂಡು ಅದನ್ನು ಜಿಲ್ಲಾ ಕೇಂದ್ರವಾನ್ನಾಗಿ ಮಾಡಬೇಕು ಎಂಬುದು ಸರಕಾರದ ನಿಯಮವಾಗಿದೆ. ಈ ಎಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡಿರುವ ಸಿಂಧನೂರು ತಾಲೂಕು ಜಿಲ್ಲಾ ಕೇಂದ್ರವಾಗಿ ಹೊರ ಹೊಮ್ಮಬೇಕು ಎಂಬುದು ಈ ತಾಲೂಕಿನ ಸಾರ್ವಜನಿಕರ ಅಭಿಪ್ರಾಯವಾಗಿದೆ, ಅದು ಸತ್ಯವೂ ಹೌದು. ಸಿಂಧನೂರು ತಾಲೂಕು ಜಿಲ್ಲಾ ಕೇಂದ್ರವಾಗಲೇಬೇಕು.
ಹತ್ತು ಹಲವು ನಿಯಮಗಳಡಿಯಲ್ಲಿ ಸರಕಾರ ತಾಲೂಕು ಕೇಂದ್ರಗಳನ್ನು ಪುನರಚನೆ ಮಾಡಿದ್ದು, ಅದರಲ್ಲಿ ಮಸ್ಕಿ ತಾಲೂಕು ಕೂಡಾ ಒಂದಾಗಿದ್ದು, ಸಿಂಧನೂರು ತಾಲೂಕಿನ ಗುಡದೂರು ಹೋಬಳಿ, ಸೇರದಿಂತೆ, ತುರುವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳನ್ನು ವಿಂಗಡಿಸಿ, ಮಸ್ಕಿ ತಾಲೂಕಿಗೆ ಸೇರ್ಪಡೆ ಮಾಡಿದ್ದು, ಸಾರ್ವಜನಿಕರು ಮರೆತಿಲ್ಲ. ಇನ್ನು ಭೌಗೋಳಿಕವಾಗಿ ಈ ತಾಲೂಕನ್ನು ನೋಡಿದರೆ, ಪೂರ್ವಕ್ಕೆ ತುಂಗಭಧ್ರಾ ನದಿ, ನದಿ ಆಚೆಗೆ ಆಂದ್ರ ಪ್ರದೇಶದ ಗಡಿ, ಮತ್ತು ಅದಕ್ಕೆ ಹೊಂದಿಕೊಂಡು ಬಳ್ಳಾರಿ ಜಿಲ್ಲಾ ಗಡಿ, ಇನ್ನು ಪಶ್ಚಿಮಕ್ಕೆ ಹೋದರೆ ತುರುವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಉಮಲೂಟಿ ಗ್ರಾಮದ ಆಚೆ ಕೊಪ್ಪಳ ಜಿಲ್ಲೆ ಪ್ರಾರಂಭ, ಹಾಗೇ ಉತ್ತರಕ್ಕೆ ಬಂದರೆ ಜವಳಗೇರಾ ಆದ ಮೇಲೆ ಪೋತ್ನಾಳದಿಂದ ರಾಯಚೂರು ಜಿಲ್ಲೆ. ಅದರಂತೆ ಇದೇ ಭಾಗದಲ್ಲಿ ಉತ್ತರ-ಪಶ್ಚಿಮವಾಗಿ ಮಸ್ಕಿ ತಾಲೂಕು ಪ್ರಾರಂಭ, ಅದರಂತೆ ದಕ್ಷಿಣಕ್ಕೆ ಬಂದರೆ ಶಾಂತಿನಗರ ಆದ ಕೂಡಲೇ ಪುನಃ ಕಾರಟಗಿ ತಾಲೂಕು ಅಂದರೆ ಕೊಪ್ಪಳ ಜಿಲ್ಲೆ ಗಡಿ ಪ್ರಾರಂಭವಾಗುತ್ತದೆಆದಾಯ ಹೊಂದಿದ್ದು, ಅತಿ ಹೆಚ್ಚು ಎಲ್ಲಾ ರೀತಿಯ ತೆರಿಗೆಯನ್ನು ಹೆಚ್ಚಾಗಿ ಪಾವತಿಸುವದು ಸಿಂಧನೂರು ತಾಲೂಕು, ತುಂಗಭದ್ರಾ ವರದಾನದಿಂದ ಸಮಗ್ರ ನೀರಾವರಿಗೆ ಒಳಪಟ್ಟಿರುವ ಈ ತಾಲೂಕು ಭತ್ತದ ನಾಡು, ಎಡತೊರೆ ನಾಡು ಎಂಬ ಖ್ಯಾತಿಯನ್ನು ಹೊಂದಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಟ್ರಾö್ಯಕ್ಟರ್ ಮಾರಾಟ ಸಿಂಧನೂರು ನಗರ ಒಂದರಲ್ಲಿ ಎಂಬುದು ಈಗಾಗಲೇ ದಾಖಲೆಗಳು ಸಹಿತ ಹೇಳುತ್ತವೆ. ಅದರಂತೆ ತುರುವಿಹಾಳ ಹೋಬಳಿ ಆದ ನಂತರ ಬರುವ ಕೆಲವು ಗ್ರಾಮಗಳು ಒಣ ಬೇಸಾಯವಿದ್ದರೂ, ವಿವಿಧ ಮೂಲಗಳಿಂದ ನೀರಾವರಿ ಅಂದರೆ ಹನಿ ನೀರಾವರಿ, ಜಿನಗು ಕೆರೆ ನೀರಾವರಿ ಪದ್ದತಿ, ಏತ ನೀರಾವರಿ ಇನ್ನಿತರ ನೀರಿನ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮವಾದ ಬೇಳೆ, ತೋಟಗಾರಿಕೆ ಮಾಡಿಕೊಂಡು ಬಂದಿರುವ ಈ ಭಾಗದ ರೈತರು ನಮ್ಮ ಗ್ರಾಮಗಳನ್ನು ಪುನಃ ಸಿಂಧನೂರು ತಾಲೂಕಿಗೆ ಸೇರ್ಪಡೆ ಮಾಡಿ ಸಿಂಧನೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವದು ಅವಶ್ಯವಾಗಿದೆ ಎಂದು ಹೇಳುವದು ಕೂಡಾ ಸತ್ಯವಾದ ಮಾತಾಗಿದೆ.
ಸಿಂಧನೂರು ನಗರ ಸೇರಿದಂತೆ ಹೋಬಳಿ, ಮತ್ತು ದೊಡ್ಡ ದೊಡ್ಡ ಗ್ರಾಮಗಳಲ್ಲಿ ಕೃಷಿ ಕೇಂದ್ರ, ವಾಣಿಜ್ಯ ಬ್ಯಾಂಕುಗಳು, ಕೃಷಿ ಪತ್ತಿನ ಸಂಘಗಳು, ಹಣಕಾಸು ಸಂಸ್ಥೆಗಳು ಮತ್ತು ಎಲ್ಲ ರೀತಿಯ ವ್ಯವಹಾರಗಳು ನಡೆಯುತ್ತಿದ್ದು, ಅಲ್ಲದೆ ಬೇರೆ ಬೇರೆ ಜಿಲ್ಲೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಇಂತಹ ಗ್ರಾಮಗಳಿಗೆ ಬಂದು ತಮ್ಮ ವ್ಯಾಪಾರ ಮಾಡುತ್ತಿರುವದು, ಆರ್ಥಿಕತೆಯ ಸಬಲತೆಗೆ ಕಾರಣವಾಗಿದೆ. ಅದರಂತೆ ಈ ತಾಲೂಕಿನ ೫ ಪುನರವಸತಿ ಕೇಂದ್ರಗಳು ಇದ್ದು, ಅದರಲ್ಲಿ ಪುನರವಸತಿ ಕೇಂದ್ರ ೧ ರಲ್ಲಿ ಗ್ರಾಮ ಪಂಚಾಯತಿ ಕೂಡಾ ಕಾರ್ಯನಿರ್ವಹಿಸುತ್ತಿದ್ದು, ದೇಶದ ಬೇರೆ ಬೇರೆ ಭಾಗಗಳಿಂದ ಬಂದಿರುವ ನಿರಾಶ್ರಿತರು ಸಹಿತ ಇಂದು ತಮ್ಮ ವ್ಯಾಪಾರ, ಕೃಷಿ, ತೋಟಗಾರಿಕೆ, ಮೀನು ಸಾಕಾಣಿಕೆ ಸೇರಿದಂತೆ ಇನ್ನಿತರ ಕಸಬುಗಳನ್ನು ಮಡಿಕೊಂಡು ಆರ್ಥಿಕತೆಯಲ್ಲಿ ಮುಂದು ವರೆದಿದ್ದು, ಈ ಪುನರವಸತಿ ಕೇಂದ್ರಗಳಲ್ಲಿಯೂ ಸಹಿತ ವಾಣಿಜ್ಯ ಬ್ಯಾಂಕುಗಳು, ಕೃಷಿ ಉತ್ಪನ್ ಕೇಂದ್ರಗಳು, ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಕೂಡಾ ಆರ್ಥಿಕತೆಯ ಸಬಲತೆಗೆ ಕಾರಣವಾಗುತ್ತದೆ. ಅಲ್ಲದೆ ಜವಳಗೇರಾ ಗ್ರಾಮಕ್ಕೆ ಹೊಂದಿಕೊಂಡು ೭೦೦೦ ಎಕರೆಯಷ್ಟು ಜಮೀನನಲ್ಲಿ ಸೆಂಟ್ರಲ್ ಸ್ಠೇಟ್ ಫಾರಂ ಇದ್ದು, ಅದರಂತೆ ಧಡೇಸ್ಗೂರಿನಲ್ಲಿ ರೈತರ ಸಲುವಾಗಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಈ ತಾಲೂಕಿನಲ್ಲಿ ೩೦ ಗ್ರಾಮ ಪಂಚಾಯತಿಗಳು, ೧೧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಅದರಂತೆ ಸಿಂಧನೂರು ನಗರದಲ್ಲಿ ಎಲ್ಲಾ ರೀತಿಯ ವಾಣಿಜ್ಯ ವಹಿವಾಟು, ಯಂತ್ರೋಪಕರಣಗಳ ವ್ಯವಹಾರ, ದೊಡ್ಡ ದೊಡ್ಡ ಮಾಲಗಳು, ಬಟ್ಟೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಹೋಟೆಲ್ ಗಳು ಸುಸಜ್ಜಿತ ವಸತಿ ಗೃಹಗಳು, ಸರಕಾರದ ಎಲ್ಲಾ ಕಚೇರಿಗಳು, ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಸೇರಿದಂತೆ ಎಲ್ಲಾ ಸ್ವಾಮ್ಯದ ಕಚೇರಿಗಳು ಕಾರ್ಯನಿರ್ವಹಿಸುತ್ತವೆ, ಅಲ್ಲದೆ ದೇಶದ ಪ್ರಮುಖ ರಾಷ್ಟಿಕೃತ ಬ್ಯಾಂಕುಗಳು ಇಲ್ಲಿ ಕಾರ್ಯನಿರ್ವಹಿಸುತ್ತಿರುವದು ಶ್ಲಾಘನೀಯವಾಗಿದೆ.
ಈಗಾಗಲೇ ಪಕ್ಕದ ಕಾರಟಗಿವರೆಗೆ ರೈಲು ಸೇವೆ ಪ್ರಾರಂಭವಾಗಿದ್ದು, ನಮ್ಮ ತಾಲೂಕಿನಲ್ಲಿ ರೇಲ್ವೆ ಟ್ರಾö್ಯಕ್ ಕೆಲಸ, ಸ್ಟೇಷನ್, ಮೇಲು ಸೇತುವೆಗಳ ಕಾಮಗಾರಿ ಜೋರಾಗಿ ನಡೆದಿದ್ದು, ಈ ವರ್ಷದ ಅಂತ್ಯದ ವೇಳೆಗೆ ರೈಲು ಓಡಾಟ ಪ್ರಾರಂಭವಾದಲ್ಲಿ ಸಿಂಧನೂರು ರಾಜ್ಯದಲ್ಲಿಯೇ ಪ್ರಮುಖವಾದ ವಾಣಿಜ್ಯ ಕೇಂದ್ರವಾಗುತ್ತದೆ. ಇನ್ನು ರಾಯಚೂರನಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ತೀವ್ರಗತಿಯಲ್ಲಿ ನಡೆದಿದ್ದು, ವಿಮಾನ ಯಾನ ಪ್ರಾರಂಭವಾದಲ್ಲಿ ಸಿಂಧನೂರಿನಿಂದ ಹೆಚ್ಚಿನ ಜನರು ಈ ವಿಮಾಣ ಯಾನದ ಮೂಲಕ ಪ್ರಯಾಣ ಮಾಡುವದು ಸಾಮಾನ್ಯವಾದ ವಿಷಯವಾಗಿದೆ. ಇನ್ನು ಸಾರಿಗೆ ವಿಷಯಕ್ಕೆ ಬಂದರೆ ಸಿಂಧನೂರು ನಗರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಬಸ್ ನಿಲ್ದಾಣ ತಂಗುದಾಣಗಳು ಇದ್ದು, ಸಿಂಧನೂರು ನಗರದ ಬಸ್ ನಿಲ್ದಾಣ ರಾಯಚೂರು ಬಿಟ್ಟರೆ ದೊಡ್ಡ ನಿಲ್ದಾಣವಾಗಿದ್ದು, ರಾಜ್ಯದ ಹೊರಗೂ, ಒಳಗೂ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಇದ್ದು, ಸದಾ ಪ್ರಯಾಣಿಕರ ದಟ್ಟಣೆಯಿಂದ ಕೂಡಿದ ಈ ಕೇಂದ್ರ ನಿಲ್ದಾಣದಿಂದ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಿರುವದು ಕೂಡಾ ಸರ್ವೆ ಸಾಮಾನ್ಯವಾಗಿದೆ. ಹಾಗೇ ಶೈಕ್ಷಣಿಕವಾಗಿ ಹೇಳುವದಾದರೆ, ಮಹಿಳಾ ವಿಶ್ವ ವಿದ್ಯಾಲಯ, ಸರಕಾರಿ ಪದವಿ ಮತ್ತು ಸ್ನಾತಕೊತ್ತರ ಕಾಲೇಜು, ಖಾಸಗಿ ವಿದ್ಯಾ ಸಂಸ್ಥೆಗಳು, ಐ.ಟಿ.ಐ. ಡಿಪ್ಲೋಮಾ ಕೋರ್ಸ, ಶಿಕ್ಷಕರ ತರಬೇತಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸಿಂಧನೂರು ನಗರ ೩೧ ವಾರ್ಡುಗಳನ್ನು ಹೊಂದಿದ್ದು, ಈಗಾಗಲೇ ಸಿಂಧನೂರು ನಗರಸಭೆಯಾಗಿ ಒಂದು ದಶಕಕ್ಕೂ ಹೆಚ್ಚು ಕಾಲವಾಗಿದೆ. ಉತ್ತಮವಾದ ಹೆದ್ದಾರಿ ಇದ್ದು, ಇಷ್ಟರಲ್ಲಿಯೇ ಚತುಷ್ಪಥ ರಸ್ತೆಯ ಕಾಮಗಾರಿ ಕೂಡಾ ಪ್ರಾರಂಭವಾಗುವದು ಎಂದು ಇಲ್ಲಿಯ ಶಾಸಕರಾದ ಹಂಪನಗೌಡ ಬಾದರ್ಲಿಯವರು ಪತ್ರಿಕಾ ಗೊಷ್ಟಿಯಲ್ಲಿ ತಿಳಿಸಿದ್ದು, ನಗರಕ್ಕೆ ಇಷ್ರಲ್ಲಿಯೇ ೨೪ ತಾಸು ಕುಡಿಯುವ ನೀರಿನ ಪೂರೈಕೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಅದು ಕೂಡಾ ಕಾರ್ಯ ಪ್ರಾರಂಭಿಸುವದು ಎಂದವರು ತಿಳಿಸಿದ್ದಾರೆ.
ದಾಸವರೇಣ್ಯರು ನಡೆದಾಡಿದ ಈ ಪುಣ್ಯ ಭೂಮಿಗೆ ಹತ್ತಿರವಾಗಿ ಶ್ರೀ ಅಂಬಾಮಠ ಸುಕ್ಷೇತ್ರವಿದ್ದು, ಪ್ರತಿ ವರುಷ ಇಲ್ಲಿ ನಡೆಯುವ ಜಾತ್ರೆ ಜಿಲ್ಲೆಯಲ್ಲಿಯೇ ದೊಡ್ಡ ಜಾತ್ರೆಯಾಗಿದೆ. ಮುಂದೆ ಮುಕ್ಕುಂದಾ ಗ್ರಾಮದಲ್ಲಿ ಮುರಹರಿ ದೇವಸ್ಥಾನವಿದ್ದು, ಮತ್ತು ಗಾಂಧಿನರದಲ್ಲಿ ಅಗಾಧವಾಗ ಸ್ಪಟಕ ಶಿವಲಿಂಗ ದೇವಸ್ಥಾನವಿದ್ದು, ಎಲ್ಲ ಕಡೆಯಿಂದಲೂ ಇಲ್ಲಿಗೆ ಭಕ್ತರು ಆಗಮಿಸುವದು ವಿಶೇಷವಾಗಿದೆ. ಇನ್ನು ಸಿಂಧನೂರು ನಗರ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೇ ಕೇಂದ್ರಗಳಿAದ ೧೦೦ ಕಿ.ಮಿ ಅಂತರದಲ್ಲಿದ್ದು, ಇಲ್ಲಿಂದ ಜಿಲ್ಲಾ ಕೇಂದ್ರಗಳಿಗೆ ಹೋಗಿ ಕೆಲಸ ಮಾಡಿಕೊಂಡು ಬರಲು ಒಂದು ದಿನ ಬೇಕಾಗುತ್ತದೆ. ಅದಕ್ಕಾಗಿ ಸಿಂದನೂರು ಜಿಲ್ಲಾ ಕೇಂದ್ರವಾಗುವದು ಅವಶ್ಯವಾಗಿದೆ ಎಂಬುದು ಈ ಭಾಗದ ಜನರ ಆಶಯವಾಗಿದೆ.
ಅಲ್ಲದೆ ಇತ್ತೀಚೆಗೆ ಸ್ವತಃ ಶಾಸಕರೇ ಸಿಂಧನೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಕುರಿತು ಸಾರ್ವಜನಿಕರ, ವಿವಿಧ ಸಂಘಟನೆಗಳ, ಸಂಶೋಧಕರ, ಬುದ್ದಿ ಜೀವಿಗಳ ಸಭೆಯನ್ನು ಕರೆದು ಅಲ್ಲಿ ಎಲ್ಲರ ಅಭಿಪ್ರಾಯವನ್ನು ಕೂಡಾ ಸಂಗ್ರಹಿಸಿದ್ದು, ಎಲ್ಲಾರು ಒಟ್ಟಾಗಿ ಸಿಂಧನೂರು ಜಿಲ್ಲಾ ಕೇಂದ್ರವಾಗಿ ಪರವರ್ತನೆಯಾಗುವದು ಅವಶ್ಯ ಎಂದು ಪ್ರತಿಪಾದಿಸಿದ್ದು, ಈ ನಿಟ್ಟಿನಲ್ಲಿ ಶಾಸಕರು ಕೂಡಾ ಪ್ರಯತ್ನದಲ್ಲಿದ್ದು, ಯಾಕೆಂದರೆ ಆಳುವ ಸಕರಾರ ಮತ್ತು ಇಲ್ಲಿ ಶಾಸಕರು ಒಂದೇ ಪಕ್ಷದವರಾಗಿದ್ದು, ನಮ್ಮ ಸಿಂಧನೂರು ಜಿಲ್ಲಾ ಕೇಂದ್ರವಾಗಿ ಪರಿವರ್ತನೆಯಾಗಲು ಹೆಚ್ಚಿನ ಕಾಲ ಬೇಕಾಗಿಲ್ಲ ಎಂದು ಇಲ್ಲಿಯ ಸಾರ್ವಜನಿಕರ ಅಂಬೋಣವಾಗಿದ್ದು. ಅಲ್ಲದೆ ಜಿಲ್ಲಾ ಸತ್ರ ನ್ಯಾಯಾಲಯ ಕೂಡಾ ಈಗಾಗಲೇ ಇಲ್ಲಿ ಕಾರ್ಯ ಪ್ರಾರಂಭಿಸಿರುವದು ಇದಕ್ಕೆ ಪೂರಕ ವಾದ ವಿಷಯವಾಗಿದೆ ಎನ್ನಬಹುದಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ತಾಲೂಕ ಅಧ್ಯಕ್ಷರಾದ ವಿರೇಶ ಭಾವಿಮನಿಯವರು ಖುದ್ದಾಗಿ ಈ ಪತ್ರಿಕೆಗೆ ತಮ್ಮ ಹೇಳಿಕೆ ನೀಡಿದ್ದು, ಎಲ್ಲಾ ಅರ್ಹತೆಗಳನ್ನು ಸೌಲಭ್ಯಗಳನ್ನು ಹೊಂದಿದ ಈ ಸಿಂಧನೂರು ಜಿಲ್ಲಾ ಕೇಂದ್ರವಾಗಲೇ ಬೇಕು, ಅದಕ್ಕಾಗಿ ನಾವುಗಳು ಎಂತಹದೇ ಹೋರಾಟಕ್ಕೂ ಸಿದ್ದ, ಪಕ್ಕದ ಕಾರಟಗಿ, ತಾವರಗೇರಾ, ಮಸ್ಕಿ, ಸೇರಿಸಿಕೊಂಡು ಈ ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಸರಕಾರ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅದರಂತೆ ಸಿಂಧನೂರಿನ ಇನ್ನೋರ್ವ ಸಾಹಿತಿ ಶಂಕರ ದೇವರು ಇವರು ಕೂಡಾ ಸಿಂಧನೂರು ಜಿಲ್ಲಾ ಕೇಂದ್ರವಾಗಬೇಕು ಎಂದು ಒತ್ತಾಯಿಸಿದ್ದಾರೆ. ಹೀಗೆ ಅನೇಕ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ವ್ಯಾಪಾರಸ್ಥರು, ಸಾರ್ವಜನಿಕರು ಸಿಂಧನೂರು ಜಿಲ್ಲಾ ಕೇಂದ್ರವಾಗಲೇ ಬೇಕು ಎಂಬ ಆಶಯವನ್ನು ಹೊಂದಿರುವದು ಒಪ್ಪಲೇ ಬೇಕಾದ ಸಂಗತಿಯಾಗಿದೆ.
ನಮ್ಮ ಸರಕಾರ ಸಾರ್ವಜನಿಕರ, ಚುನಾಯಿತ ಪ್ರತಿನಿಧಿಗಳ, ಮತ್ತು ಎಲ್ಲ ಸ್ಥರದ ಜನರ ಅನಿಸಿಕೆಗಳಿಗೆ ಮಾನ್ಯ ಮಾಡಿ ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಪರಿವರ್ತನೆ ಮಾಡುಲು ಅಗತ್ಯವಿರುವ ಎಲ್ಲಾ ಕ್ರಮ ಜರುಗಿಸಲು ಒತ್ತಾಯಿಸಿದ್ದು, ಈ ಪತ್ರಿಕೆ ಆಶಯವೂ ಕೂಡಾ ಇದೇ ಆಗಿದೆ. ಮತ್ತೊಂದು ಮಾತು ನಮ್ಮ ಶಾಸಕರಾದ ಹಂಪನಗೌಡರು ಬಾದರ್ಲಿ ಇವರು ಈ ಕಾರ್ಯಕ್ಕೆ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳಿಗೆ ಕೆಲವು ಸಂಘಟನೆಗಳು ಕೈ ಜೋಡಿಸುವದಾಗಿ ಪತ್ರಿಕೆಗೆ ತಿಳಿಸಿರುವದು ಕೂಡಾ ಉತ್ತಮ ಬೆಳವಣಿಗೆೆ ಎಂದು ಹೇಳಲೇಬೇಕು ಅಲ್ಲವೆ ?.
ಈ ಎಲ್ಲಾ ಒದಂತಿಗಳಿಗೆ ಉತ್ತರ ನೀಡಲಿದ್ದಾರೆ ಸಿಎಂ ಕಾದು ನೋಡೋಣ