ಡಿಸೆಂಬರ್ 27 ಸಿಂಧನೂರು. ಅತಿಥಿ ಉಪನ್ಯಾಸಕರನ್ನು ಸೇವಾ ಖಾಯಂಮಾತಿಗಾಗಿ ಸರ್ಕಾರವನ್ನು ಒತ್ತಾಯಿಸಿ ದಿನಾಂಕ 23/11/2023 ರಿಂದ ರಾಜ್ಯಾಧ್ಯoತ ತರಗತಿ ಭಹಿಸ್ಕರಿಸಿ ಹೋರಾಟ ನಡೆಸುತ್ತಿದ್ದು, ಅದರ ಭಾಗವಾಗಿ ಸಿಂಧನೂರು ಘಟಕವು ಈ ಕೆಳಗಿನ ರೀತಿಯ ಹೋರಾಟಗಳನ್ನು ಹಮ್ಮಿಕೊಂಡಿರುತ್ತದೆ.
27/12/2023 ರಂದು ತಸಿಲ್ ಕಚೇರಿ ಮುಂದೆ ಟೆಂಟ್ ಹಾಕಿ ಹೋರಾಟ ಮಾಡುವುದು.
29/12/2023 ರಂದು ಎಲ್ಲರೂ ಕಪ್ಪುಪಟ್ಟಿ ಧರಿಸಿ ಟೆಂಟ್ ಅಲ್ಲಿ ಕೂಡುವುದು. ಅಂದು ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆ ಮಾಡುವುದು.
28/12/2023 ರಂದು ಎಪಿಎಂಸಿ ಗಣೇಶ್ ದೇವಸ್ಥಾನದಿಂದ ಹಲಗಿ ಬಾರಿಸುವುದರ ಮೂಲಕ ಶವ ಯಾತ್ರೆ ಮಾಡುವುದು. ನಂತರ ಮಾನ್ಯತಸಿಲ್ದಾರ್ ಅವರಿಗೆ ಮನವಿಪತ್ರ ನೀಡಿ ಪುನಃ ಟೆಂಟಲ್ಲಿ ಕೂಡುವುದು.
30/12/2023 ರಂದು ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಉಪ ಮುಖ್ಯಮಂತ್ರಿಗಳು, ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಇನ್ನಿತರ ಮಾನ್ಯ ಸಚಿವರುಗಳು ಹಾಗೂ ಮಾನ್ಯ ಶಾಸಕರುಗಳು ಪಾಲ್ಗೊಳ್ಳುವಂಥ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ಭಾಗದಿಂದ ಸಾವಿರಾರು ಸಂಖ್ಯೆಯ ಉಪನ್ಯಾಸಕರು ಸೇರಿಕೊಂಡು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡುವುದು. ಹಾಗೂ ನಮ್ಮ ಸಮಸ್ಯೆ ಬಗ್ಗೆ ಸಮಗ್ರವಾಗಿ ಚರ್ಚಿಸುವುದು.
01/01/2024 ರಿಂದ ತುಮಕೂರಿಂದ ಬೆಂಗಳೂರು ಫ್ರಿಡಂ ಪಾರ್ಕ್ ವರೆಗೆ ನಡೆಯುವ ಪಾದಯಾತ್ರೆಯಲ್ಲಿ ತಾಲ್ಲೂಕು ಘಟಕವು ಪಾಲ್ಗೊಳ್ಳುವುದು ಎಂದು ವಿಶ್ವನಾಥ ಪಾಟೀಲ್ ಗೋನಾಳ ಅಧ್ಯಕ್ಷರು ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ (ರಿ) ಬೆಂಗಳೂರು ತಾಲೂಕ ಘಟಕ ಸಿಂಧನೂರು ಹೇಳಿದ್ದಾರೆ.