ಜನವರಿ.04 ಬುಧುವಾರ ಸಂಜೆ ಬುಕ್ಕನಟ್ಟಿ ಗ್ರಾಮದಲ್ಲಿ ದಲಿತ ಸಾಹಿತ್ಯ ಪರಿಷತ್ತು ಮತ್ತು ಯುವ ಘಟಕದ ವತಿಯಿಂದ ಪರಿಷತ್ತಿನ ನಡೆಯ ಭಾವೈಕ್ಯತೆಯ ಕಡೆ ಎಂಬ ಘೋಷವಾಕ್ಯದಡಿ ಜಾಲಿಹಾಳ ಮತ್ತು ತುರುವೆಹಾಳ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾದ ಶ್ರೀಮತಿ ಯಮನಮ್ಮ ಮತ್ತು ವೆಂಕಟೇಶ್ ಬುಕ್ಕನಟ್ಟಿ ಅವರ ಮಗಳ ವಿಭ ಹಾಗೂ ಕುಶಾಲ್ ಗೌಡ ಅವರ ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಅಕ್ಷರದ ಸಾವಿತ್ರಿಬಾಪುಲೆಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ವಿರುಪಣ್ಣ ಅವರು ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಮಾತೆ ಸಾವಿತ್ರಿ ಬಾಪುಲೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರದವ್ವ ಮಾತೆ ಸಾವಿತ್ರಿ ಬಾಪುಲೆ ಅವರ ಶಿಕ್ಷಣ ಮತ್ತು ಸಹಕಾರದ ವಿಷಯದ ಕುರಿತಾಗಿ ಸಿಂಧನೂರಿನ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಗುರಿಕಾರ್ ಅವರು ಮಾತನಾಡಿ ಭಾರತದಲ್ಲಿ ಮಹಿಳೆಯರು ತಲೆಯೆತ್ತಿ ನಿಂತು ಪುರುಷನ ಸರಿ ಸಮಾನವಾದ ಸ್ಥಾನಮಾನವನ್ನು ಪಡೆದುಕೊಂಡಿದ್ದಾಳೆ ಎಂದರೆ ಅದು ಸಾವಿತ್ರಿ ಬಾಪುಲೆಯವರ ಕೊಡುಗೆಯಾಗಿದೆ. ಅಸಮಾನತೆಯ ಜೊತೆಗಿದ್ದ ಸಮಾನತೆಯನ್ನು ಸಾರಿದ ಸತ್ಯಶೋಧಕಿ ಸಾವಿತ್ರಿಬಾಯಿ ಫುಲೆ ಅವರಾಗಿದ್ದಾರೆ. ಜೊತೆಗೆ ಮಹಿಳೆಯರಿಗೆ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ಆದರ್ಶಣಿ ಅವರಾಗಿದ್ದಾರೆ. ಅಂತಹ ಆದರ್ಶಗಳನ್ನು ಸಾರುತ್ತಿರುವ ಸಾರಿದ ಸಾವಿತ್ರಿ ಬಾಪುಲೆ ಅವರು ಅಸ್ಪೃಶ್ಯರಿಗಾಗಿ, ನೊಂದವರಿಗಾಗಿ ಮಿಡಿಯುವ ಸಂದರ್ಭದಲ್ಲಿ ಸವರ್ಣಿಯರು ನೀಡಿದ ಕಿರುಕುಳ, ಅಪಮಾನ ಮತ್ತು ಅವಮಾನಗಳಿಗೆ ಹೆದರದೆ ಹಾಗೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ದಲಿತರ ಊರು ಮತ್ತು ಕೇರಿಗಳಿಗೆ ಹೋಗಿ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಆತ್ಮ ವಿಶ್ವಾಸವನ್ನು ತುಂಬಿರುವ ಭಾರತದ ಏಕೈಕ ಮಹಿಳೆಯಾಗಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ ಶರಣಪ್ಪ ಹೊಸಳ್ಳಿ ಅವರು ಸಿಂಧನೂರಿನ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸುಮಾರು ದಶಕಗಳಿಂದ ತನ್ನದೇ ಆದ ಜನ ಪರ ಮತ್ತು ಜೀವ ಪರವಾದ ಆಶಯಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ದಲಿತರ ನೊಂದವರ ಪರವಾಗಿ ವಿಚಾರಗೋಷ್ಠಿ ಕವಿಗೋಷ್ಠಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ನಾಟಕ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ತನ್ನ ಜೀವಂತಿಕೆಯನ್ನು ಸೇರಿಸಿಕೊಂಡು ಬಂದಿದೆ ಎಂದರು. ಮತ್ತು ಕಳೆದ ನಾಲ್ಕಾರು ತಿಂಗಳಿಂದ ದಲಿತ ಸಾಹಿತ್ಯ ಪರಿಷತ್ತಿನ ಯುವ ಘಟಕವನ್ನು ರಚಿಸಿಕೊಂಡು ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಆಯಸ್ಸುತ್ತ ಮುಂದುವರೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಲಿತ ಸಾಹಿತ್ಯ ಪರಿಷತ್ತಿನ ಯುವ ಘಟಕದ ಖಜಾಂಚಿಗಳಾದ ಮಲ್ಲಿಕಾರ್ಜುನ ಕಾಮತಗಿ ಅವರು ಮಾತನಾಡಿ ಮೌಡ್ಯತೆಯು ಬಡತನವನ್ನು ಘೋಷಿಸುವ ಸಂಸ್ಕೃತಿಯಾಗಿದೆ ಅಂತಹ ಮೌಢ್ಯತೆಯ ವಿರುದ್ಧ ಹೋರಾಡಿ ಶಿಕ್ಷಣ ಸಂಘಟನೆಯ ಮಹತ್ವವನ್ನು ತಿಳಿಸಿದ ಫುಲೆ ದಂಪತಿಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದರು.
ಕಾರ್ಯಕ್ರಮವನ್ನು ಆಯೋಜಿಸಿದ್ದ ದಲಿತ ಸಾಹಿತ್ಯ ಪರಿಷತ್ತು ಯುವ ಘಟಕದ ನಿರ್ದೇಶಕರಾದ ವೆಂಕಟೇಶ್ ಬುಕ್ಕನಟ್ಟಿ ಮಾತನಾಡಿ ನಮ್ಮ ಮಕ್ಕಳ ಹುಟ್ಟು ಹಬ್ಬ ಆಚರಣೆ ಸಾರ್ಥಕವಾಗಬೇಕೆಂದರೆ ಹಳ್ಳಿಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸಿ ಬೆನ್ನು ತಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಆ ಒಂದು ದೃಷ್ಟಿಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಂತೋಷವೆನಿಸುತ್ತದೆ ಎಂದರು.
ವೇದಿಕೆಯ ಮೇಲೆ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿಗಳಾದ ಈಶ್ವರ್ ಹಲಗಿ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹುಸೇನಪ್ಪ ಅಮರಾಪುರ, ಗೌರವ ಸಲಹೆಗಾರರಾದ ಮಂಜುನಾಥ ಗಾಂಧಿನಗರ ಯುವ ಘಟಕದ ಅಧ್ಯಕ್ಷರಾದ ತಿಮ್ಮಪ್ಪ ಕಲ್ಮಂಗಿ, ಬುಕ್ಕನಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸಂಗಪ್ಪ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಹುದ್ದೆಗೆ ಆಯ್ಕೆಯಾದ ಯುವಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ಪ್ರೊ. ಆಂಜನೇಯ ರಾಮತ್ನಾಳ, ಬಿ. ರವಿಕುಮಾರ ಸಾಸಲಮರಿ, ಶಿವರಾಜ ಗುಡದಮ್ಮ ಕ್ಯಾಂಪ್, ಶಿವರಾಜ ಅಡಗಲ್ ಸಾಸಲಮರಿ, ಅಯ್ಯಪ್ಪ ಹರೇಟನೂರು ಮೊದಲಾದವರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಬಲುಗೊಡ್ಡ ಶಿಕ್ಷಕರು ನೆರವೇರಿಸಿದರೆ ದಲಿತ ಸಾಹಿತ್ಯ ಪರಿಷತ್ತಿನ ಘಟಕದ ಅಧ್ಯಕ್ಷರಾದ ತಿಮ್ಮಪ್ಪ ಕಲ್ಮಂಗಿ ಅವರು ಸ್ವಾಗತಿಸಿ, ಮಲ್ಲಿಕಾರ್ಜುನ ಅವರು ವಂದಿಸಿದರು.