ಮಸ್ಕಿ ಜನವರಿ 7:-ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಭಾಂಗಣದಲ್ಲಿ ನಡೆದ
*ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ* ವತಿಯಿಂದ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನ ಹಾಗೂ *ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು* ಉದ್ದೇಶಿಸಿ ಜಿಲ್ಲಾಧಿಕಾರಿಗಳಾದ ಶ್ರೀ ಗೋಪಾಲ ಲಮಾಣಿ ಅವರು ಮಾತನಾಡಿ ಮಸ್ಕಿ ಅಭಿನಂದನ್ ಸಂಸ್ಧೆಯ ಆಡಳಿತಾಧಿಕಾರಿ ಶೃತಿ ಹಂಪರಗುಂದಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಏಕೆಂದರೆ ಇವರು
ಹಲವು ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ಹಲವಾರು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ಕೊರೋನ ಸಂದರ್ಭದಲ್ಲಿ ಜೀವನದ ಹಂಗು ತೊರೆದು ನೂರಾರು ಕುಟುಂಬಗಳಿಗೆ ಆಸರೆಯಾಗಿ ನಿಂತು ಅವರ ಜೀವನೋಪಾಯಕ್ಕೆ ನೆರವಾಗಿದ್ದಾರೆ ಹಾಗೂ ನೂರಾರು ಬಡ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಾ ಬರುತ್ತಿದ್ದಾರೆ ಹಾಗೂ ಅಭಿನಂದನ್ ಸ್ಪೂರ್ತಿ ಧಾಮವನ್ನು ಸ್ಥಾಪಿಸಿ ರಾಯಚೂರು ಜಿಲ್ಲೆಯ ಸುತ್ತ ಮುತ್ತಲಿನ ಅನಾಥ ಮಕ್ಕಳಿಗೆ ಆಸರೆಯಾಗಿ ಊಟ ವಸತಿ ಸಹಿತ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ ಇಂತಹ ಸೇವೆಯನ್ನು ಗುರುತಿಸಿ ಶೃತಿ ಹಂಪರಗುಂದಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.ಇದೇ ಸಂದರ್ಭದ
ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು ದೇವರಹಿಪ್ಪರಗಿ,
ಪೂಜ್ಯ ಶ್ರೀ ಬಸವಗೀತಾ ತಾಯಿಯವರು ರಾಮದುರ್ಗ, ಗೋಪಾಲ ಲಮಾಣಿ ಜಿಲ್ಲಾಧಿಕಾರಿಗಳು ಅಲ್ಫಾ ಸಂಖ್ಯಾತರ ಇಲಾಖೆ ಧಾರವಾಡ, ಲಿಂಗರಾಜ ಅಂಗಡಿ , ರಮೇಶ್ ನಾಯಕ್ ಸಂಸ್ಥಾಪಕರು ಮಹಿಳಾ ಸಾಹಿತ್ಯ ವೇದಿಕೆ, ಶ್ರೀ ಮತಿ ಶಾಲಿನಿ ರುದ್ರಮುನಿ, ಚಂದ್ರಕಲಾ ಎಂ ಇಟಗಿ , ಡಾ. ಲತಾ ಎಸ್ ಮುಳ್ಳೂರು ಹಾಗೂ ಇತರರು ಉಪಸ್ಥಿತರಿದ್ದರು.
ಹನುಮಂತಪ್ಪ ಚಿಕ್ಕಕಡಬೂರು.