ಜನವರಿ 19 ಸಿಂಧನೂರು. ಯುವಕರ ಸಬಲೀಕರಣ, ಬಡತನ ಮುಕ್ತ,ಹಸಿವು ಮುಕ್ತ ಸಮಾಜ, ಜನ ಸೇವೆಯ ಹಿತ ದೃಷ್ಟಿಯಿಂದ ಯುವ ಶಕ್ತಿ ಜನಸೇವಾ ಟ್ರಸ್ಟ್ ಕಳೆದ ಒಂದು ವರ್ಷಗಳ ಹಿಂದೆ ಉದಯಿಸಿದ್ದು ಇಂದು ಟ್ರಸ್ಟ್ ನ ರಾಜ್ಯ ಸಮಿತಿ,ವಿವಿಧ ಜಿಲ್ಲಾ ಸಮಿತಿ, ತಾಲೂಕ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪ್ರತಿ ನೀಡಲಾಯಿತು ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸೇವಾ ಕಾರ್ಯಕರ್ತ ಯುವಕರ ನೇಮಕಾತಿಯನ್ನು ಮಾಡಲಾಗುತ್ತದೆ ಎಂದು ಟ್ರಸ್ಟ್ ನಾ ಸಂಸ್ಥಾಪಕ ಅಧ್ಯಕ್ಷ ಎಸ್ಪಿ ನಾಗರಾಜ ಅವರು ಸಿಂಧನೂರು ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.
ಇದೆ ಸಂದರ್ಭದಲ್ಲಿ ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡ ಅಭಿಷೇಕ್ ಆದಿಮನಿ ಮಾತಾಡಿ ರಾಜ್ಯದಾದ್ಯಂತ ಒಳ್ಳೆಯ ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಹಾಗೂ ಉನ್ನತಿಕರಣಕ್ಕೆ ನಮ್ಮ ಟ್ರಸ್ಟ್ ಶ್ರಮಿಸಲಿದೆ. ಹೀಗಾಗಲೇ ಕಳೆದ ಒಂದು ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಡವರ,ಮಹಿಳೆಯರ, ಮಕ್ಕಳ, ಹಿಂದುಳಿದವರ ಭವಿಷ್ಯದ ಬದಲಾವಣೆಗೆ ಶ್ರಮಿಸಿದ ಕೀರ್ತಿ ನಮ್ಮ ಯುವ ಶಕ್ತಿ ಜನ ಸೇವಾ ಟ್ರಸ್ಟ್ ಗೆ ಸಲ್ಲುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು
- ರಾಜ್ಯಧ್ಯಕ್ಷರನ್ನಾಗಿ ಅಭಿಷೇಕ್ ಆದಿಮನಿ,
- ರಾಜ್ಯ ಉಪಾಧ್ಯಕ್ಷರನ್ನಾಗಿ ಚನ್ನಬಸವ ಸೋಮಲಪುರ,
- ರಾಜ್ಯ ಗೌರವಾಧ್ಯಕ್ಷರನ್ನಾಗಿ ಸಿದ್ರಾಮಪ್ಪ ಜಾಜಿ, ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ.
- ನಿರುಪಾದಿ ಕೆ ಗೋಮರ್ಸಿ,ರಾಜ್ಯ ಕಾರ್ಯದರ್ಶಿಗಳನ್ನಾಗಿ ಹುಸೇನಪ್ಪ ನಾಯಕ್ ಬಾದರ್ಲಿ,ಪ್ರುತ್ವಿ ,ಸಿದ್ದಾರ್ಥ ಅವರನ್ನು ನೇಮಕ ಮಾಡಲಾಗಿದೆ.
ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ರುದ್ರಯ್ಯ ಹಿರೇಮಠ್,ಮಂಗಳೂರು ಜಿಲ್ಲಾಧ್ಯಕ್ಷರನ್ನಾಗಿ ಸ್ವಪ್ನ ಕಿರಣಗೌಡ,ಬಾಗಲಕೋಟೆ ಜಿಲ್ಲಾಧ್ಯಕ್ಷರನ್ನಾಗಿ ವಿದ್ಯಾ ,ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ಪ್ರದೀಪ್ ರಾಮಪ್ಪ,ಬೆಂಗಳೂರು ಜಿಲ್ಲಾಧ್ಯಕ್ಷರನ್ನಾಗಿ ಯಲ್ಲಾಲಿಂಗ ಎರಡಹಳ್ಳಿ,ಸಿಂಧನೂರು ತಾಲೂಕ ಅಧ್ಯಕ್ಷರನ್ನಾಗಿ ಹನುಮಂತ ಎಂ,ಉಪಾಧ್ಯಕ್ಷರನ್ನಾಗಿ ಶಿವರಾಜ್ ಸಿದ್ದಾಪುರ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿರಗುಪ್ಪ ಅವರು ನೇಮಕ ಮಾಡಿ ಇವರಿಗೆ ಆದೇಶ ಪ್ರತಿಯನ್ನು ನೀಡಲಾಯಿತು.
ಇದೆ ಸಂದರ್ಭದಲ್ಲಿ ಟ್ರಸ್ಟ್ ನ ವಿವಿಧ ಮುಖಂಡರು,ಸದಸ್ಯರು ಭಾಗವಹಿಸಿದ್ದರು.