ಜೂನ್ 05. ಮಸ್ಕಿ ತಾಲೂಕಿನ ಗೌಡನಭಾವಿ ಶ್ರೀ ಕಟ್ಟೆ ಬಸವಲಿಂಗೇಶವರ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು. ನಂತರ ಮಾತನಾಡಿದ ಶ್ರೀ ಮಠದ ಅಧಿಪತಿಗಳಾದ ಶ್ರೀ ಅಮರೇಶ ಶರಣರು ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛ ವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆಹೋಗುತ್ತಿರುವುದು ಒಂದು ಶೋಚನೀಯ ಸಂಗತಿ. ಇಂದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಮೂರು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ.
ಇವೆಲ್ಲವುಗಳಿಗೂ ಮುಖ್ಯ ಕಾರಣವೆಂದರೆ ಹೆಚ್ಚಾಗುತ್ತಿರುವ ಜನಸಂಖ್ಯೆ. ಜನರು ಬಳಸುವ ವಾಹನಗಳಿಂದ ಕೆಟ್ಟ ಹೊಗೆ ಹೊರಬರುತ್ತದೆ.ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಹೊಗೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ.ಮಾನವನ ಇಂದಿನ ದಿನನಿತ್ಯ ಜೀವನಪದ್ಧತಿಯಿಂದ ಹಾಗೂ ಹೆಚ್ಚು ತ್ತಿರುವ ಕಾರ್ಖಾನೆಗಳಿಂದ ಹೊರಬಿಡುವ ಕಸ ಹಾಗೂ ತ್ಯಾಜ್ಯ ನೀರು ಇವುಗಳಿಂದ ವಾತಾವರಣವು ಮಾಲಿನ್ಯಗೊಳ್ಳುತ್ತದೆ.
ವಾಹನಗಳಿಂದ, ಮದುವೆ ಸಮಾರಂಭಗಳಲ್ಲಿ ಹಾಗೂ ದೀಪಾವಳಿಯ ಸಮಯದಲ್ಲಿ ಉಪಯೋಗಿಸುವ ಪಟಾಕಿಯಿಂದ ಶಬ್ದ ಮಾಲಿನ್ಯವಾಗುತ್ತದೆ.ಇದೆಲ್ಲವು ನಮ್ಮ ನಿತ್ಯ ಜೀವನದ ಮೇಲೆಯೇ ಪ್ರಭಾವ ಬೀರುತ್ತದೆ. ಮಾಲಿನ್ಯ ಮಿತಿಮೀರಿದರೆ ಮಾನವನಿಗೆ ಈ ಪರಿಸರದಲ್ಲಿ ಜೀವಿಸುವುದೇ ಅಸಾಧ್ಯವಾಗುತ್ತದೆ. ಆದುದರಿಂದ ಈ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜವಬ್ದಾರಿ ನಮ್ಮದಾಗಿದೆ. ಮುಂದಿನ ಪೀಳಿಗೆಗೆ ಈ ಪರಿಸರವು ಉಳಿಯಬೇಕಾದರೆ ಇಂದಿನಿಂದಲೇ ಒಳ್ಳೆಯ ಬದಲಾವಣೆಯನ್ನು ಮಾಡಬೇಕಾಗಿದೆ.
ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗುರುರಾಜ ಹೆರಕಲ್ ಮಾತನಾಡಿ ಪ್ರತಿಯೊಬ್ಬ ನಾಗರಿಕರು ಮಳೆಗಾಲ ಆರಂಭವಾಗುತ್ತದೆ ಪ್ರತಿಯೊಂದು ಮನೆಯಲ್ಲಿ ಗಿಡ ಮರ ಬೇಳೆಸಿ ನಾಡನ್ನು ಉಳಿಸಿ ಕರೆ ಕೊಟ್ಟರು ಅದೆರಿತಿ ಶ್ರೀ ಮಠದ ಅಧಿಪತಿಗಳಾದ ಶ್ರೀ ಆಮರೇಶ ಶರಣರು ಕೂಡಾ ಮಾತಾನಾಡಿ ಪರಿಸರರ ಉಳಿಸುವುಕೆ ನಮ್ಮೇಲ್ಲರ ಕರ್ತವ್ಯ ಎಂದು ತಿಳಿಸಿದರು ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಸಿ.ಎಸ್.ಸಿ ಪ್ರದಾನ ಕಾರ್ಯದರ್ಶಿ ಶ್ರೀ ಗುರುರಾಜ ಹೆರಕಲ್ ಹಾಗೂ ಶ್ರೀ ಮಠದ ಅಧಿಪತಿಗಳಾದ ಶ್ರೀ ಅಮರೇಶ ಶರಣರು ಮತ್ತು ಗೌಟನಭಾವಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಶಿವಮೂರ್ತಿ ಉಟಗನೂರು ಹಾಗೂ ಶ್ರೀ ಮಠದ ಸರ್ವ ಸದ್ಬಕ್ತರು ಪಾಲಗೂಂಡಿದ್ದರು.