ಸಿಂಧನೂರು ಜುಲೈ 6. ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ನಂತರದ ದಿನಗಳಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ರಾಜ್ಯದ ಎಲ್ಲಾ ನಾಯಕರ ಜೊತೆ ಬೆರೆತು ನೆಚ್ಚಿನ ಯುವ ನಾಯಕನಾಗಿ ಭೇಷ್ ಅನ್ನಿಸಿಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕೊನೆಯ ಹಂತದವರೆಗೂ ಟಿಕೆಟ್ ಭರವಸೆಯಲ್ಲಿದ್ದರೂ ಆದರೆ ಕಾರಣಾಂತರಗಳಿಂದ ಟಿಕೆಟ್ ಸಿಗದಿದ್ದರೂ ಕೂಡ ನಿರಾಶಗೊಳ್ಳದೆ ಕ್ಷೇತ್ರದ ಜನತೆಗಾಗಿ ರಾಜ್ಯದ ಎಲ್ಲಾ ನಾಯಕರು ಜೊತೆಗೆ ಓಡಾಡುತ್ತಾ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಆದಂತ ಚಾಪನ್ನು ಮೂಡಿಸಿದ್ದರು.
ಹಲವಾರು ಹೇಳು ಬೀಳುಗಳನ್ನು ಕಂಡಂತ ಯುವ ನಾಯಕನಿಗೆ ಕಾಂಗ್ರೆಸ್ಸಿನ ಹಲವಾರು ನಾಯಕರು ಹಾಗೂ ಹಿರಿಯರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾತು ಕೊಟ್ಟಂತೆ ವಿಧಾನ ಪರಿಷತ್ ಸದಸ್ಯನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಶ್ರೀ ಬಸನಗೌಡ ಬಾದರ್ಲಿ ಅವರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ.
ಕಾರ್ಯಕರ್ತರ ಶುಭ ಹಾರೈಕೆಯ ಸರಮಾಲೆ.ಹಲವಾರು ವರ್ಷಗಳಿಂದ ಕೂಡ ಕ್ಷೇತ್ರದ ಜನತೆಗಾಗಿ ಹಲವು ರೀತಿ ಸೇವೆಯನ್ನು ನೀಡುತ್ತಾ ಬಂದಿರುವ ಬಸನಗೌಡ ಬಾದರ್ಲಿಗೆ ಯಾವುದಾದರು ಒಂದು ಸ್ಥಾನಮಾನ ನೀಡಬೇಕು ಎಂದು ಕಾದು ಕುಳಿತಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್ ಹೈಕಮಾಂಡ್ ಇಂದು ಬಸನಗೌಡ ಬಾದರ್ಲಿ ಅವರನ್ನು ಅವಿರೋಧವಾಗಿ ವಿಧಾನಪರಿಷತ್ ಸದಸ್ಯನಾಗಿ ಮಾಡಿರೋದಕ್ಕಾಗಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತೋಷವನ್ನು ಹಚ್ಚಿಕೊಂಡಿದ್ದಾರೆ ಜೊತೆಗೆ ಸಿಂಧನೂರಿನಿಂದ ಹಲವು ನೂರಾರು ಯುವಕರು ರಾಜಧಾನಿ ಬೆಂಗಳೂರಿಗೆ ತೆರಳಿ ನೂತನ ವಿಧಾನ ಪರಿಷತ್ ಸದಸ್ಯ ಶ್ರೀ ಬಸವನಗೌಡ ಬಾದರ್ಲಿಗೆ ಶುಭ ಹಾರೈಸಿದ್ದಾರೆ.