ಆಗಸ್ಟ್ 01. ಸಿಂಧನೂರು ತಾಲೂಕಿನ ಸೆಂಟ್ರಲ್ ಸ್ಟೇಟ್ ಫಾರ್ಮಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಇಂದು ನವ ದೆಹಲಿಯಲ್ಲಿ ಶ್ರೀ ಬಸನಗೌಡ ಬಾದರ್ಲಿ ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್ ಇವರು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಇವರಿಗೆ ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ರಾಜಶೇಖರ್ ಹಿಟ್ನಾಳ್ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀಕುಮಾರ್ ನಾಯಕ್ ರವರು ಉಪಸ್ಥಿತರಿದ್ದರು.
ನವ ಸಂಕಲ್ಪ ನವ ಸಿಂಧನೂರು ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ CSF ನಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಕೇಂದ್ರ ಕೃಷಿ ಸಚಿವರಿಗೆ ಮನವಿಯನ್ನು ಮಾಡಿದ್ದಾರೆ ಎಂದು ಸೋಮನಗೌಡ ಬಾದರ್ಲಿ ಅವರು ತಿಳಿಸಿದ್ದಾರೆ.