ಆಗಸ್ಟ್ 31 ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸ್ನಲ್ಲಿ ಸುಪ್ರೀಂ ಕೋರ್ಟ್ನ ಒಳ ಮೀಸಲಾತಿ ಪರವಾದ ತೀರ್ಪು ಸ್ವಾಗತಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನುಸಾರ ರಾಜ್ಯದಲ್ಲಿಯೂ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ದಿನಾಂಕ: 20-09-2024 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದರ ಪ್ರಯುಕ್ತ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಪ್ರಮುಖರ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಹಿರಿಯ ಮುಖಂಡರು ಪ್ರತಿಭಟನೆಯ ರೂಪುರೇಷೆಗಳನ್ನು ಕುರಿತು ವಿಸ್ತೃತವಾಗಿ ಚರ್ಚಿಸಿದರು.
ಈ ಸಭೆಯನ್ನು ಉದ್ದೇಶಿಸಿ ದಾನಪ್ಪ ನೀಲೋಗಲ್ ರವರು ಮಾತನಾಡಿ ಮೂರು ದಶಕಗಳಿಂದಲು ಹಕ್ಕು ವಂಚಿತ ಅಸ್ಪೃಶ್ಯರು ತಮಗೆ ಸಿಗಬೇಕಿರುವ ನ್ಯಾಯಬದ್ದ ಹಕ್ಕುಗಳಿಗಾಗಿ ಸುಪ್ರೀಂಕೋರ್ಟ್ ತನಕ, ಕೇಂದ್ರ ಸರಕಾರದ ತನಕ ಹೋಗಿ ಮೀಸಲಾತಿ ವರ್ಗೀಕರಣದ ಪರವಾಗಿ ಜಡ್ಜ್ ಮೆಂಟ್ ಗಳನ್ನು ಗಳಿಸಿಕೊಂಡರೂ ಮತ್ತೆ ಅದನ್ನು ಜಾರಿಗೊಳಿಸಲು ಮತ್ತೆ ಮತ್ತೆ ಬೀದಿ ಹೋರಾಟ ಮಾಡುವಂತೆ ಹೀನ ಸಂದರ್ಭಗಳನ್ನ ಸೃಷ್ಟಿ ಮಾಡುವ ಈ ಸಾಮಾಜಿಕ ನ್ಯಾಯ ವಿರೋಧಿ ಹಿತಾಸಕ್ತಿಗಳ ಮನಸು, ಶೋಷಿತರ ಮೇಲಿನ ಅಸೂಯೆ, ಅಸಹಿಷ್ಣುತೆಯ ರಾಜಕಾರಣಗಳು, ಕುಟಿಲ ನಡೆಗಳು ಇವೆಲ್ಲವು ನ್ಯಾಯ ಪ್ರಜ್ಞೆಯುಳ್ಳ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿವೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಪ್ಪ ಮುರಾರಿ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಹನುಮಂತಪ್ಪ ಪರಾಪೂರು, ಬಿ.ತಿಕ್ಕಯ್ಯ, ಮಲ್ಲಯ್ಯ ಬಳ್ಳಾ, ದುರ್ಗಾ ಪ್ರಸಾದ, ಸುರೇಶ ಅಂತರಗಂಗೆ, ಹನುಮಂತಪ್ಪ ವೆಂಕಟಾಪುರ ಹಾಗೂ ಇನ್ನಿತರ ಹಲವು ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.
ವರದಿ ಎಚ್. ಕೆ. ಬಡಿಗೇರ್