ಬಡವರ ಬಾರಕೋಲು ಸುದ್ದಿ
ಮಸ್ಕಿ : ಮಸ್ಕಿ ವಿಧಾನಸಭಾ ಕ್ಷೇತ್ರದ ಬಳಗಾನೂರು ಪಟ್ಟಣದಲ್ಲಿ ಹರಿಯಾಣ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿದ್ದು,ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರು ಅವರ ನಾಯಕತ್ವ,ಪಕ್ಷದ ಅಭಿವೃದ್ಧಿ ರಾಜಕಾರಣ, ಉತ್ತಮ ಆಡಳಿತ ಹಾಗೂ ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತೊಮ್ಮೆ ಸುಸ್ಪಷ್ಟ ಜನಾದೇಶ ದೊರಕಿದೆ. ಜಮ್ಮು ಕಾಶ್ಮೀರದಲ್ಲಿ ಗಣನೀಯ ಸ್ಥಾನಗಳನ್ನು ಪಡೆದು ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಹಾಗೂ ಈ ಐತಿಹಾಸಿಕ ವಿಜಯೋತ್ಸವ ಸಂಭ್ರಮಾಚರಣೆಯನ್ನು ಬಳಗಾನೂರು ಪಟ್ಟಣದಲ್ಲಿ
ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಸಂಭ್ರಮಾಚರಣೆ ಮಾಡಿ ಬಿಜೆಪಿ ಮಸ್ಕಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಕೋಶ ಅಧ್ಯಕ್ಷರಾದ ಮಲ್ಲಿಕಾರ್ಜುನ ಬ್ಯಾಳಿ,ಬಿಜೆಪಿಯ ಎಸ್ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮೌನೇಶ ನಾಯಕ ಬಳಗಾನೂರು,ಪಟ್ಟಣದ ಪಕ್ಷದ ಹಿರಿಯ ಮುಖಂಡರು ಬಿ.ತಿಕ್ಕಯ್ಯ,ಮಹಾಬಲೇಶಪ್ಪ,ಮುದಕಪ್ಪ,ವಿಶ್ವನಾಥ ಗೌಡ ಹಳ್ಳಳ್ಳಿ,ಸಂತೋಷ ಅಂಬ್ಲಿ,ಶಿವಮೂರ್ತಿ ಗದ್ಗಿಮಠ,ಪಟ್ಟಣ ಪಂಚಾಯಿತಿಯ ಸದಸ್ಯರಾದ ಹನುಮೇಶ್ ಹೂಗಾರ್,ಗಣೇಶ ಡಿಶ್,ವೀರೇಶ್ ಸ್ವಾಮಿ,ಬಸವರಾಜ ಸ್ವಾಮಿ,ವೀರೇಶ ತಾಳಿಕೋಟಿ,ರಂಗನಾಥ ಪೂಜಾರಿ,ಶರಣ್ಣಪ್ಪ ಮಾರೆಡ್ಡಿ,ಮೌನೇಶ್ ಬನೂರ್,ಚಂದಬಾಷಾ, ಶರಣ್ಣಪ ಬಡಿಗೇರ,ಮಲ್ಲಯ್ಯ ಸ್ವಾಮಿ,ದೇವರಾಜ್, ಯಂಕಪ್ಪ,ಹಾಗೂ ಬಳಗನೂರು ಪಟ್ಟಣ ಪಂಚಾಯಿತಿಯ ಸದಸ್ಯರು ಪಕ್ಷದ ಪದಾಧಿಕಾರಿಗಳು ವೀರೇಶ್ ಗಾಳಿಪೂಜೆ ರಾಜಶೇಖರ,ಶಿವು ಮಾಕಾಪುರು ಅಮರೇಶ ಕುಂಬಾರ್,ಹಾಗೂ ಕಾರ್ಯಕರ್ತರು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..
ವರದಿ : ಎಚ್.ಕೆ.ಬಡಿಗೇರ್