ಬಡವರ ಬಾರಕೋಲು ಸುದ್ದಿ
ಮಸ್ಕಿ : ನವರಾತ್ರಿ ನಿಮಿತ್ತ ಭ್ರಮರಾಂಬ ದೇವಸ್ಥಾನದಲ್ಲಿ ನಡೆಯುತ್ತಿರುವ 54ನೇ ವರ್ಷದ ಮಹಾದೇವಿ ಪುರಾಣದ ಮಂಗಲೋತ್ಸವ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ಗಂಗಾಸ್ಥಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದು 8.30ಕ್ಕೆ ದೇವಿಯನ್ನು ಹೊತ್ತ ಅಂಬಾರಿ ಮೆರವಣಿಗೆಯಲ್ಲಿ ಸಾವಿರ ಮಹಿಳೆಯರು ಕುಂಭ ಹೊತ್ತು ಭಾಗಿಯಾಗಿದ್ದರು.
ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ ‘ಲಕ್ಷ್ಮೀ’ ಆನೆ ಹೊತ್ತುಕೊಂಡಿತ್ತು.
ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಅಂಬಾರಿಗೆ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ
ಸ್ವಾಮಿ ಶಾರದೇಶಾನಂದಜಿ ಮಹಾರಾಜ ರಾಮಕೃಷ್ಣ ವಿವೇಕಾನಂದಾಶ್ರಮ ಹರಿಹರ,ಶಾಸಕ ಆರ್.ಬಸವನಗೌಡ ತುರುವಿಹಾಳ,ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ,
ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ,ತಹಶೀಲ್ದಾರ್ ಡಾ.ಮಲ್ಲಪ್ಪ ಕೆ ಯರಗೋಳ
ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ,ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಉಪಾಧ್ಯಕ್ಷರಾದ ಗೀತಾ ಶಿವರಾಜ,ರವಿಗೌಡ ಪೊಲೀಸ್ ಪಾಟೀಲ,ಬಸವನಗೌಡ ಪೊಲೀಸ್ ಪಾಟೀಲ,ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ಡಿ.ಲಕ್ಕಂ,ಪಿ.ಎಸ್.ಐ.ತಾರಬಾಯಿ,ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕ ರಾದ ಸಿದ್ದಯ್ಯ ಹೆಸರೂರು ಹಿರೇಮಠ,ಸೇರಿದಂತೆ
ಪುರಸಭೆ ಸದಸ್ಯರು,ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಗಂಗಾಸ್ಥಳದಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹಾಗೂ ಕಳಸಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಅಶೋಕ ವೃತ್ತದಿಂದ ಆರಂಭವಾದ
ಜಂಬೂ ಸವಾರಿ ಹಾಗೂ ಪಲ್ಲಕ್ಕಿ ಮೆರವಣಿಗೆ ಅಗಸಿ,ಮುಖ್ಯ ಬಜಾರ,ದೈವದಕಟ್ಟೆ,ತೇರು ಬೀದಿ,ಕನಕವೃತ್ತದ ಮೂಲಕ ಸಾಗಿ ಭ್ರಮರಾಂಬಾ ದೇವಸ್ಥಾನಕ್ಕೆ ಆಗಮಿಸಿತ್ತು.ಸಂಡೂರಿನ ಚಂದ್ರಶೇಖರಯ್ಯ ಸ್ವಾಮಿಗಳ ವೀರಗಾಸೆ ನೃತ್ಯ,ಡೊಳ್ಳು ಕುಣಿತ,ನಂದಿ ಕೊಲು ಸರಿದಂತೆ ವಿವಿಧ ವಾದ್ಯಗಳು ಪಾಲ್ಗೊಂಡಿದ್ದವು. .
ಅಭಿಷೇಕ:-
ಭ್ರಮರಾಂಬಾದೇವಿಗೆ ಗಂಗಾಸ್ಥಳದಿಂದ ನೂರಾರು ಮಹಿಳೆಯರು ಹೊತ್ತು ತಂದ ಜಲದಿಂದ ಅಭಿಷೇಕ ಮಾಡಲಾಯಿತು
ದೇವಿಗೆ ವಿವಿಧ ಧಾರ್ಮಿಕ ಪೂಜಾ
ಕಾರ್ಯಕ್ರಮಗಳು ನಡೆದವು.
ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.