ಬಡವರ ಬಾರುಕೋಲು ಸುದ್ದಿ
ಮಸ್ಕಿ : ಮಸ್ಕಿ ವಿಧಾನ ಸಭಾ ಕ್ಷೇತ್ರದ ಮಹದ್ ಹುಸೇನ್ ಸಾಬ ಪರಾಪೂರು ಅವರನ್ನು ನವ ಕರ್ನಾಟಕ ಎಂಆರ್ ಡಬ್ಲ್ಯೂ,ಯುಅರ್ಡಬ್ಲ್ಯೂ ವಿಕಲಚೇತನರ ಗೌರವಧನ ಮತ್ತು ಕಾರ್ಯಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಅಂಭೋಜಿ ಮೇಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಸರ್ವಾನುಮತದಿಂದ ಜಿಲ್ಲಾ ಅಧ್ಯಕ್ಷರನ್ನು ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಹಾಗೂ ಈ ಸಮಿತಿಯ ಗೌರವಾಧ್ಯಕ್ಷರಾಗಿ ರಾಘವೇಂದ್ರ ಮಾನ್ವಿ,ಪ್ರಧಾನ ಕಾರ್ಯದರ್ಶಿಯಾಗಿ ವಿರುಪಾಕ್ಷಸ್ವಾಮಿ ಕಾಳಾಪುರು,ಖಜಾಂಚಿಯಾಗಿ ಅಮರೇಶ ಪಾಟೀಲ್ ಐದಭಾವಿ,ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಗೊರೇಬಾಳ,ಕಲುಬುರಗಿ ವಿಭಾಗದ ಅಧ್ಯಕ್ಷರಾಗಿ ಸಣ್ಣರಾಮಣ್ಣ ಗುಂಡಾ,ಜಿಲ್ಲಾ ಸಂಚಾಲಕರಾಗಿಬಸವರಾಜ ಸಾಸಲಮರಿ,ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಕೆ.ಬೀರಪ್ಪ ಗೊರೇಬಾಳ,ಸಿಂಧನೂರು ನಗರ ಘಟಕ ಅಧ್ಯಕ್ಷರಾಗಿ ಭೀಮರಾಯ,ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಮಹ್ಮದ್ ಅಲಿ ಮಟಮಾರಿ,ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಸಾಹೇಬಿ ಜವಳಗೇರಾ ಅವರುಗಳು ಆಯ್ಕೆ ಆಗಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಪ್ರವೀಣ ನಾಯ್ಕ್,ದತ್ತಾತ್ರೇಯ ಕುಡಿಕಿ,ಸಿದ್ಧಾರೂಢ ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಎಚ್.ಕೆ.ಬಡಿಗೇರ್
ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಹೋರಾಟ ; ಸಹಾಯಕ ಆಯುಕ್ತರ ಭೇಟಿ