ಬಡವರ ಬಾರುಕೋಲು ಸುದ್ದಿ
ಮಸ್ಕಿ : ತಾಲೂಕಿನ ಮೆದಿಕಿನಾಳ ಗ್ರಾಮದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಆರೋಗ್ಯ ಮತ್ತು ಸ್ವಚ್ಛತೆ ಕಾರ್ಯಕ್ರಮದ ಅಡಿಯಲ್ಲಿ ಕ್ಯಾನ್ಸರ್ ರೋಗದ ಮಾಹಿತಿ ಕುರಿತು ಬಳ್ಳಾರಿ ಧರ್ಮ ಪ್ರಾಂತ ಅಭಿವೃದ್ಧಿ ಸಂಸ್ಥೆಯ ಸ್ಪರ್ಶ ಯೋಜನಾ ಸಂಯೋಜಕರಾದ MD ಅರಳಪ್ಪ ನವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿಕೊಳ್ಳಬೇಕು ಎಂದು ಕರೆ ನೀಡಿದರು ಹಾಗೂ ಪ್ರತಿಯೊಬ್ಬರು ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಕ್ಯಾನ್ಸರ್ ರೋಗದಿಂದ ದೂರವಿರಿ ಎಂದು ನುಡಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಾವಯವ ಕೃಷಿಯ ಉಜ್ಜೀವನ ಯೋಜನೆಯ ಸಂಯೋಜಕರಾದ ಶಾಂತಪ್ಪ ಸೋಮನಮರಡಿ ಯವರು ಮಾತನಾಡಿ ಕ್ಯಾನ್ಸರ್ ರೋಗದ ಉಗಮ,ಲಕ್ಷಣಗಳು,ಇದರಿಂದ ನಮ್ಮ ಕುಟುಂಬದ ಮೇಲಾಗುವ ಆರ್ಥಿಕ ಸಮಸ್ಯೆಯ ಬಗ್ಗೆ,ಹಾಗೂ ಇದನ್ನು ತಡೆಗಟ್ಟುವ ಕಾರ್ಯತಂತ್ರಗಳು ಹೇಗೆ ಎನ್ನುವುದರ ಕುರಿತು ಮಾಹಿತಿ ನೀಡಿ ನಾವು ಪ್ರತಿದಿನ ಬೇಳೆ ಕಾಳುಗಳು,ತರಕಾರಿ ಸೇವನೆಯ ಆಹಾರ ಮಾಡಿದರೆ ಒಳ್ಳೆಯದು ಎಂದು ಮಾಹಿತಿ ನೀಡಿದರು.
ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ನಿಲಯದ ಮೇಲ್ವಿಚಾರಕರಾದ ಉದಯಕುಮಾರ ರವರು ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಮಾತನಾಡಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಉತ್ತಮವಾದ ಆಹಾರವನ್ನು ಸೇವಿಸಿದಾಗ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರಲು ಸಾಧ್ಯ ಹಾಗೂ ಇದರಿಂದ ನಮ್ಮ ಕುಟುಂಬ ಎಲ್ಲ ರಂಗಗಳಲ್ಲಿ ಮುಂದೆ ಬರಲು ಸಾಧ್ಯ ಎಂದು ಸಲಹೆ ನೀಡಿದರು.
ಇದೇ ಸಂದರ್ಭದ ಈ ಕಾರ್ಯಕ್ರಮದಲ್ಲಿ ವಸತಿ ನಿಲಯದ ಸಿಬ್ಬಂದಿಗಳಾದ ಚನ್ನಪ್ಪ,ಮಹಾಂತೇಶ,ಶಿವಶರಣ,ರೇಣುಕಮ್ಮ,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಎಚ್.ಕೆ.ಬಡಿಗೇರ್