ಜುಲೈ.31 ಸಿಂಧನೂರು. ವಿದ್ಯಾರ್ಥಿಗಳಲ್ಲಿ ಅಕ್ಷರದ ಜ್ಞಾನದಲ್ಲಿ ಕೊರತೆಯಿದ್ದರೂ ಚಿಂತೆ ಇಲ್ಲ ಸಂಸ್ಕಾರದಲ್ಲಿ ಕೊರತೆ ಬರಬಾರದು ಹೆತ್ತವರನ್ನು ಗುರು ಹಿರಿಯರನ್ನ ಗೌರವಿಸುವ ಶಿಸ್ತು ಬೆಳೆಸಿಕೊಂಡಾಗ ಮಾತ್ರ ಕಲಿತ ಶಿಕ್ಷಣಕ್ಕೆ ಮೌಲ್ಯ ಎಂದು ತಾಲೂಕ ದೈಹಿಕ ಶಿಕ್ಷಣ ವಿಷಯ ಪರೀವಿಕ್ಷಕರಾದ ಸೋಮಲಿಂಗಪ್ಪ ಅವರು ನಗರದ ಸತ್ಯ ಗಾರ್ಡನಲ್ಲಿ ನಡೆದ ಎಲ್ ಬಿ ಕೆ ಪದವಿ ಪೂರ್ವ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದ ಪಿಯುಸಿ ಬಿ.ಎ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅನುಭಾವಕರಾಗಿ ಮಾತನಾಡಿದರು.
ಮಕ್ಕಳು ವಿದ್ಯಾ,ಬುದ್ಧಿ, ಕಲಿತು ಸಂಸ್ಕಾರವಂತರಾಗಲೆಂದು ತಮ್ಮ ಹೆತ್ತವರು ಬೆಳಗಿನ ಜಾವದಿಂದ ಮಲಗುವವರೆಗೂ ನಿಮ್ಮ ಚಾಕರಿಕೆ ಮಾಡುತ್ತಲೇ ಇರುತ್ತಾರೆ ಕಾರಣ ತಮ್ಮ ಬಗ್ಗೆ ನೂರಾರು ಕನಸುಗಳನ್ನು ಹೊತ್ತಿದ್ದಾರೆ. ಅವರ ಕನಸುಗಳನ್ನು ನನಸು ಮಾಡಿ ಮುಂದಿನ ತಮ್ಮ ಭವಿಷ್ಯ ಉಜ್ವಲಾಗಿರುತ್ತದೆ ಎಂದರು ಅಲ್ಲದೆ ಸಂಸ್ಥೆಯು ಕೆಲವೇ ವರ್ಷಗಳಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದ್ದಕ್ಕಾಗಿ ಶ್ಲ್ಯಾಘನೀಯ ಎಂದರು. ಸಸಿಗೆ ನೀರೇರದು ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋಮನಗೌಡ ಬಾದರ್ಲಿ ಅವರು ಮಾತನಾಡುತ್ತಾ, ಆಡಳಿತ ಮಂಡಳಿಯವರು ಮತ್ತು ಉಪನ್ಯಾಸಕರು ಸಂಸ್ಥೆಯನ್ನ ಗುಣಾತ್ಮಕವಾಗಿಯೂ ಪರಿಮಣಾತ್ಮಕವಾಗಿಯೂ ಕಟ್ಟಿದ್ದಾರೆ ಇಂತಹ ಸಂಸ್ಥೆಯ ಉಪಯೋಗವನ್ನ ಮಕ್ಕಳು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಆದಿಕವಿ ಶ್ರೀ ಮಹರ್ಷಿ ವಿಶ್ವವಿದ್ಯಾಲಯ ರಾಯಚೂರ್ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾದ ಸತ್ಯನಾರಾಯಣ ಶ್ರೇಷ್ಠಿ ಮಾತನಾಡಿ, ಸಿಂಧನೂರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ ಶೈಕ್ಷಣಿಕವಾಗಿ ಸ್ಪರ್ಧೆ ಇದೆ ಇಂತಹ ಸ್ಪರ್ಧೆಯಲ್ಲಿಯೂ ಒಳ್ಳೆಯ ಪ್ರವೇಶಗಳನ್ನು ಪಡೆದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದ್ದು ಸಂತೋಷ ತಂದಿದೆ ಅಲ್ಲದೆ ಹೆಮ್ಮೆಯ ವಿಷಯ ಎಂದರು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ತಮ್ಮ ಸಂಸ್ಥೆಯಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುವಂಥ ಆಗಲಿ ಎಂದು ಹಾರೈಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಉಪನ್ಯಾಸಕರನ್ನ ಮತ್ತು ಸಿಬ್ಬಂದಿಗಳನ್ನ ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ ಎಂದುರು.
ಈ ಸಂದರ್ಭದಲ್ಲಿ 2024 – 25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600/584 ಅಂಕಗಳನ್ನ ಪ್ರತಿಶತ 97.33 ರಷ್ಟು ಅಂಕಗಳನ್ನು ಪಡೆದು ವಾಣಿಜ್ಯ ಭಾಗದಲ್ಲಿ ರಾಯಚೂರು ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದ ಕುಮಾರಿ ಸಂಜನಾ ಗೋವಿಂದ ಗೌಡ ಮತ್ತು ಶಾಂತಮ್ಮ ತಂದೆ ಶರಣಪ್ಪ ಹಿರೇಬೇರ್ಗಿ ಮತ್ತು ಸಂಗೀತಾ ತಂದೆ ಯಮನೂರಪ್ಪ ಹಿರೇಬೇರ್ಗಿ ಇವರನ್ನ ಅಭಿನಂದನಾ ಪ್ರಣಾಪತ್ರ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಹಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ ಪ್ರಭಾರಿ ಪ್ರಾಚಾರ್ಯರಾಗಿ ಪ್ರಸ್ತುತ ಮುಂಬಡ್ತಿ ಹೊಂದಿ ಪ್ರಾಚಾರ್ಯರಾಗಿ ವರ್ಗಾವಣೆಯಾದ ಡಾ. ಎಸ್ ಶಿವರಾಜ್ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಅಲಬನೂರು ಹಾಗೂ ಬಸಪ್ಪ ಹ್ಯಾಟಿ ಪ್ರಾಚಾರ್ಯರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಿಂಧನೂರು ಮತ್ತು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರಿನ ವಿದ್ಯಾ ವಿಷಯಕ ಪರಿಷತ್ತಿನ ನೂತನ ಸದಸ್ಯರಾಗಿ ಆಯ್ಕೆಯಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿ, ಮತ್ತು ಶ್ರೀ ಅನಿಲ್ ಕುಮಾರ್ ಕೆ. ಮತ್ತು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್ ಎಫ್ ಮಸ್ಕಿ ಅವರನ್ನು ಹಾಗೂ ಸೋಮನಗೌಡ ಬಾದರ್ಲಿ, ಹುಸೇನ್ ಬಾಷಾ ತೀರ್ಥಭಾವಿ ಶರಣೆ ನೀಲಾಂಬಿಕೆ ಉಚಿತ ಪ್ರಸಾದ ನಿಲಯದ ಮೇಲ್ವಿಚಾರಕರಾದ ಶರಣ ಶ್ರೀ ಜಯಶ್ರೀ ಎಸ್ ಮೇಟಿ ಮತ್ತು ಮುಕ್ತ ಬ್ಯಾಂಕಿನ ಅಧ್ಯಕ್ಷರಾದ ಗುಂಡಪ್ಪ ಬಳೆಗಾರ ಮಂಜುನಾಥ್ ಗಾಂಧಿನಗರ್ ರಮೇಶ್ ಉಮಲೂಟಿ ಸೋಮಲಿಂಗಪ್ಪ ವಿ ಯು ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನೊಬೆಲ್ ಪದವಿ ಮಹಾವಿದ್ಯಾಲಯದಿಂದ ಬಿ ಎ ಮತ್ತು ಬಿಕಾಂ ಪದವಿಯನ್ನು ಮುಗಿಸಿಕೊಂಡಂತಹ ವಿದ್ಯಾರ್ಥಿಗಳಿಗೆ ವಿನೂತನವಾಗಿ ಪದವಿ ಪ್ರದಾನವನ್ನು ಮಾಡಲಾಯಿತು. ಎನ್ಎಸ್ಎಸ್ ಶಿಬಿರದಲ್ಲಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದ ಮತ್ತು ಅತ್ಯುತ್ತಮ ಶಿಬಿರದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಅಲ್ಲದೆ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು
ಈ ಸಂದರ್ಭದಲ್ಲಿ ಬಸವ ಚಾರೆಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುದ್ದುನಗೌಡ ಮಾಲಿಪಾಟೀಲ್ ಎಸ್ ಟಿವಿ ಚಾನೆಲ್ ನ ಸಂಸ್ಥಾಪಕರಾದ ದೇವೇಂದ್ರ ಗೌಡ, ಮಂಜುನಾಥ್ ಗಾಂಧಿನಗರ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಪರಶುರಾಮಲ್ಲಾಪುರ್ ಪ್ರಸ್ತಾವಿಕ ಮಾತುಗಳಾಡಿದರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅರುಣ್ ಕುಮಾರ್ ಬೆರ್ಗಿ ಉಪಾಧ್ಯಕ್ಷರಾದ ಶಂಕರ್ ಪತ್ತರ್ ಖಜಾಂಚಿಗಳಾದ ಜಯಪ್ಪ ಗೊರಬಾಳ, ಹಾಗೂ ನೊಬೆಲ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ದಳವಾಯಿ ಎಲ್ಬಕೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವುಕುಮಾರ್ ಬಿಂಗಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀಮತಿ ಚೆನ್ನಬಸಮ್ಮ ಹೊನ್ನಪ್ಪ ಬೆಳಗುರ್ಕಿ ನಿರೂಪಿಸಿದರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಕುಮಾರಿ ಜ್ಯೋತಿ ಸ್ವಾಗತಿಸಿದರು ಉಪನ್ಯಾಸಕ ವಿಶ್ವನಾಥ್ ವಂದಿಸಿದರು.