ಸೆಪ್ಟೆಂಬರ್ 14, ಸಿಂಧನೂರು: ತಾಲೂಕಿನ ಉಮಲೂಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನ 2024-25 ನೇ ಸಾಲಿನ ವಿದ್ಯಾರ್ಥಿ ಕುಮಾರ ಅಬ್ದುಲ್ ಖಾದರ್ ಗೆ ಕರ್ನಾಟಕ ಸರ್ಕಾರ ಘನ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೌರವಾನ್ವಿತ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ, ವಿಧಾನಸಭಾ ಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹಾದೇವಪ್ಪ, ಶಾಸಕ ರಿಜ್ವಾನ್ ಅರ್ಷದ್,ಪ್ರಧಾನ ಕಾರ್ಯದರ್ಶಿ ಮೇಜರ್ ಮನಿವಣ್ಣನ್ನ, ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜ್, ಜಂಟಿ ನಿರ್ದೇಶಕ ಶಿವಾನಂದ ಕುಂಬಾರ, ಸಹ ನಿರ್ದೇಶಕ ಪ್ರವೀಣ್ ಸಮ್ಮುಖದಲ್ಲಿ ಗೌರವ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಕಾಲೇಜು ಕೀರ್ತಿ ಹೆಚ್ಚಿಸಿದೆ ಎಂದು ಪ್ರಾಚಾರ್ಯ ಗುರುಪಾದಗೌಡ ಹರ್ಷ ವ್ಯಕ್ತಪಡಿಸಿದರು.
ಅಬ್ದುಲ್ ಖಾದರ್ ವಿದ್ಯಾರ್ಥಿ
ಘನ ಸರ್ಕಾರ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಅಡಿಯಲ್ಲಿ 15-09-2025 ರಂದು “ಪ್ರಜಾಪ್ರಭುತ್ವ ದಿನಾಚರಣೆ”ಯ ಅಂಗವಾಗಿ “ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ವ್ಯಾಸಂಗ ಮಾಡಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ MBBS, IIT, IIT, JEE & ENGINEERING ಕೋರ್ಸ್ ಆಯ್ಕೆಯಾದ ಪ್ರತಿಷ್ಠಿತ ಸಂಸ್ಥೆಗಳಿಗೆ ದಾಖಲಾದ ಪ್ರಯುಕ್ತ ಟಾಪರ್ -15 ರಲ್ಲಿ ಕುಮಾರ. ಅಬ್ದುಲ್ ಖಾದರ್ ಕೂಡ ಸನ್ಮಾನ ಭಾಜಿನನಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಮಸ್ಕಿ ಶಾಸಕರಾದ ಆರ್. ಬಸನಗೌಡ ತುರ್ವಿಹಾಳ ಸಾಹೇಬರು,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿದರು.
“ಘನ ಮುಖ್ಯಮಂತ್ರಿಗಳಿಂದ ವಿಧಾನಸೌಧದಲ್ಲಿ ಸನ್ಮಾನಕ್ಕೆ ಭಾಜನರಾದ ಉಮಲೂಟಿ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕುಮಾರ. ಅಬ್ದುಲ್ ಖಾದರ್ ಗೌರವದ ಸನ್ಮಾನ ರಾಯಚೂರು ಜಿಲ್ಲೆಗೆ ಹೆಮ್ಮೆ ತರುವಂತಹದ್ದು.ವಿಶೇಷವಾಗಿ ಸಂಸ್ಥೆಯ ಪ್ರಾಚಾರ್ಯ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಅಭಿನಂದನೆ ಸಲ್ಲಿಸಲು ಇಚ್ಚಿಸುತ್ತೇನೆ”.
ಶಿವಮಾನಪ್ಪ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ರಾಯಚೂರು
“ಉಮಲೂಟಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜು ಉತ್ತಮ ಶೈಕ್ಷಣಿಕ ವಾತಾವರಣದಿಂದ ಕಂಗೊಳಿಸುತ್ತಿದ್ದು,ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡಲಾಗಿದೆ.ನಮ್ಮ ಕಾಲೇಜು ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟಕ್ಕೆ ಶ್ರಮಿಸುತ್ತಿರುವುದರ ಫಲ”.
ಶ್ರೀ ಗುರುಪಾದಗೌಡ ಸೂಡಿ
ಪ್ರಾಚಾರ್ಯರು ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಉಮಲೂಟಿ