“ದೇಗುಲದ ಹಂಗಿಲ್ಲದೆ ದೇವತೆಯ ರೂಪವ ಪಡೆದು
ಕೈ ಬಳೆಯ ಶಬ್ದದಲಿ ಘಂಟೆಯ ನಾದವಿರಲೂ
ಅವಳ ಆ ಸುಂದರ ಕಣ್ಣುಗಳೇ ಜ್ಯೋತಿಯಂತೆ ಹೊಳೆಯುತಿರಲು, ಮುಗುಳುನಗುವು ಮಂತ್ರದಂತೆ ಕಾಣಲು,
ಭಕ್ತಿಗತವಾದ ಪ್ರೀತಿ ಹೊತ್ತು ದೇವತೆಯ ರೂಪ ಕಾಣುವವಳೇ ಹೆಣ್ಣು”.
ಹೆಣ್ಣು ಎಂದರೆ ದೇವತೆ
ಹೆಣ್ಣು ಎಂದರೆ ಸ್ನೇಹದ ಗೆಳತಿ
ಹೆಣ್ಣು ಎಂದರೆ ಪ್ರೀತಿಯ ಸಂಗಾತಿ
ಹೆಣ್ಣು ಎಂದರೆ ಬಾಂಧವ್ಯದ ಒಡತಿ
ಹೆಣ್ಣು ಎಂದರೆ ಬದುಕಿನ ಆರತಿ
ಹೆಣ್ಣು ಎಂದರೆ ಜೀವನ ಜ್ಯೋತಿ
ಒಂದು ದೀಪ ತನ್ನನ್ನು ತಾನು ಸುಟ್ಟುಕೊಂಡು
ಒಂದು ಮನೆಯ ತುಂಬಾ ಬೆಳಕು ನೀಡುತ್ತದೆ.
ಹಾಗೆಯೇ ಒಂದು ಹೆಣ್ಣು ತನ್ನನ್ನು ತಾನು ಧಾರೆಯೆರೆದು
ಒಂದು ಮನೆಗೆ ಬೆಳಕಾಗುತ್ತಾಳೆ.
ಇಡೀ ಕುಟುಂಬಕ್ಕೆ ಜವಾಬ್ದಾರಿಯಾಗುತ್ತಾಳೆ
ಹೆಣ್ಣು ಒಂದು ಮನೆಯ ನಂದಾದೀಪ
ಒಂದು ಮನೆಯ ಕಣ್ಣು
ಫಕೀರಪ್ಪ
ಯುವ ಬರಹಗಾರರು ರೌಡಕುಂದ