ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸುಗೂರು ಗ್ರಾಮದ ಶರಣಬಸವ ಗುರುಪಾದಪ್ಪ (36) ಶಿವಮೊಗ್ಗದಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದು, ಈ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. “ಮಗ ಶರಣಬಸವನ ಆರೋಗ್ಯದಲ್ಲಿ ಸರಿಯಿಲ್ಲದ ಕಾರಣಕ್ಕೆ ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ದಿನಾಂಕ: 15-11-2024ರಂದು ಚಿಕಿತ್ಸೆ ಪಡೆದುಕೊಂಡು, ನಾನು, ಸೊಸೆ ಹಾಗೂ ಮಗ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಮ್ಮ ಸ್ವಗ್ರಾಮಕ್ಕೆ ಮರಳಲು ಬಸ್ಗಾಗಿ ಕಾಯುತ್ತಿರುವ ಸಂದರ್ಭದಲ್ಲಿ, ಮಗನು ಬಸ್ ನೋಡಿ ಬರುವುದಾಗಿ ಹೇಳಿ ಹೋಗಿದ್ದು, ಆದರೆ ವಾಪಸ್ ಬಂದಿರುವುದಿಲ್ಲ. ಕೆಲವೊತ್ತು ಅಲ್ಲಿಲ್ಲಿ ಹುಡುಕಾಡಿ, ಕೊನೆಗೆ ಊರಿಗೆ ಬಂದು ನೋಡಿದಾಗ್ಯೂ ಬಂದಿರುವುದಿಲ್ಲ. ಸಂಬAಧಿಕರು, ಸ್ನೇಹಿತರು ಸಂಪರ್ಕಿಸಿ ಮಗನ ಬಗ್ಗೆ ವಿಚಾರಿಸಿದ್ದು, ಎಲ್ಲಿಯೂ ಪತ್ತೆಯಾಗಿರುವುದಿಲ್ಲ” ಎಂದು ನಾಪತ್ತೆಯಾದ ವ್ಯಕ್ತಿಯ ತಾಯಿ ತಾರಮ್ಮ ಲೇಟ್ ಗುರುಪಾದಪ್ಪ ಕಸಬಾ ಲಿಂಗಸುಗೂರು ಅವರು ದೊಡ್ಡಪೇಟೆ ಪೊಲೀಸ್ ಠಾಣೆಗೆ 25-11-2024ರಂದು ದೂರು ಸಲ್ಲಿಸಿದ್ದಾರೆ.