ಏಪ್ರಿಲ್ 14.ಮಸ್ಕಿ ಅಭಿನಂದನ್ ಸ್ಪೂರ್ತಿ ಧಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಂಬೇಡ್ಕರ್ ಅವರ ಫೋಟೋಗೆ ಮಾಲಾರ್ಪಣೆ ಮಾಡಿ ಅವರ ಜೀವನ, ಸಾಧನೆಗಳು ಹಾಗೂ ವಿಚಾರಗಳ ಬಗ್ಗೆ ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳಿಗೆ ತಿಳಿಸಿ ಅವರಿಗೆ ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಹಿತಿಯನ್ನು ನೀಡಲಾಯಿತು.
ನಂತರ ಮಾತನಾಡಿದ ಅಶೋಕ್ ಮುರಾರಿ ಅವರು ಅಭಿನಂದನ್ ಸಂಸ್ಥೆಯು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಿಸಿದ ಈ ಅಭಿನಂದನ್ ಸ್ಪೂರ್ತಿಧಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಣೆ ಮಾಡಿರುವದು ಬಹಳ ಸಂತಸದ ವಿಷಯವಾಗಿದೆ. ಬಾಬಾ ಬಾಬಾ ಸಾಹೇಬರ ಆಶಯದಂತೆ ಎಲ್ಲರಿಗೂ ಉಚಿತವಾದ ಮತ್ತು ಸಮಾನವಾದ ಜೀವನ ಮತ್ತು ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಈ ಅಭಿನಂದನ್ ಸ್ಪೂರ್ತಿಧಾಮವು ಹೆಜ್ಜೆಯನ್ನು ಹಾಕುತ್ತಿರುವುದು ಹೆಮ್ಮೆಯ ಮತ್ತು ಶ್ಲಾಘನೀಯ ವಿಷಯವಾಗಿದೆ ಅವರ ಈ ಕಾರ್ಯ ಹೀಗೆ ಮುಂದುವರೆಯಲಿ ಅವರ ಈ ಕಾರ್ಯಗಳಿಗೆ ಸಾಧ್ಯವಾದಷ್ಟು ನಮ್ಮ ಸಹಕಾರ ನೀಡುತ್ತೇವೆ ಹಾಗೂ ಬಾಬಾ ಸಾಹೇಬರ ಆಶೀರ್ವಾದ ಸದಾ ಕಾಲ ಇರುತ್ತದೆ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಲವಾದಿ ಮಹಾ ಸಭಾದ ಅಧ್ಯಕ್ಷರಾದ ಅಶೋಕ ಕಟ್ಟಿಮನಿ ಕನ್ನಡಪರ ಹೋರಾಟಗಾರರಾದ ಅಶೋಕ್ ಮುರಾರಿ ಸಿದ್ದು ಮುರಾರಿ, ಸತೀಶ್ ಗೌಡ ತುರ್ವಿಹಾಳ್, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ್, ಜಾಫರ್ ಮಿಯಾ, ಕಿಶೋರ್, ಕಾರ್ತಿಕ್ ಜೋಗಿನ್,ಚೆಲವಾದಿ ಮಹಾಸಭಾ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು