ಏಪ್ರಿಲ್ 08.ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ನಿವಾಸಿಯಾದ ಸಿದ್ದಾರ್ಥ ನಗರದ ಸರ್ಕಾರಿ ಬಾಲಕರ ನಿಲಯದ ಹಿಂಭಾಗವಿರುವ ಹೆಚ್.ಕೃಷ್ಣಪ್ಪ ತಾಯಿ ಚಂದ್ರಮ್ಮ ಎಂಬುವವರಿಗೆ ಸೇರಿದ ಮನೆ ಶನಿವಾರ ಬೆಳಂಬೆಳಿಗ್ಗೆ ಏಕಾಏಕಿ ಬೆಂಕಿ ತಗುಲಿ ಇಡೀ ಗುಡಿಸಲೇ ಭಸ್ಮವಾಗಿದೆ.
ಮನೆಯಲ್ಲಿ ಇದ್ದ ಸಿಬ್ಬಂದಿಗಳು ಹೊರಗಡೆ ಓಡಿ ಬಂದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಸ್ಥಳದಲ್ಲಿದ್ದ ಸಾರ್ವಜನಿಕರು ದಾವಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ನಂತರ ಕುರುಗೋಡಿನ ಅಗ್ನಿ ಶಾಮಕದಳ,ಸ್ಥಳೀಯ ಪೋಲೀಸ್ ಸಿಬ್ಬಂದಿ ಆಗಮಿಸಿದ್ದರು.
ಮನೆಯಲ್ಲಿ ಇದ್ದ ಬಂಗಾರ,ಕಾಳು ಕಡ್ಡಿ.ಬಟ್ಟೆಗಳು,ನಗದು ಹಣ,ಟಿ.ವಿ,ಶಾಲಾ ದಾಖಲಾತಿಗಳು,ಪಾತ್ರೆ ಸಾಮಾನುಗಳು ಸೇರಿದಂತೆ ಒಟ್ಟು ೩ಲಕ್ಷದ ೩೮ ಸಾವಿರದ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಗೆ ಪಡೆದುಕೊಂಡಿದೆ ಎಂದು ಕುಟುಂಬವು ತಿಳಿಸಿದೆ ಮತ್ತು ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಪ್ರಮುಖರಾದ ಎಂ.ಎಸ್.ಸಿದ್ದಪ್ಪ,ಕೆಆರ್ಪಿಪಿ ನಾಯಕ ಧರಪ್ಪ ನಾಯಕ,ತಹಿಶಿಲ್ದಾರರಾದ ಎನ್,ಆರ್ ಮಂಜುನಾಥ ಸ್ವಾಮಿ,ಪಿಡಿಒ ಶಿವಕುಮಾರ್ ಕೋರಿ,ವಿ.ಎ.ನಾಗರಾಜ್,ಸ್ಥಳೀಯ ಗ್ರಾಮಸ್ಥರು ಕುಟುಂಬಕ್ಕೆ ಸಾಂತ್ವಾನ ಹೇಳಿ ದೈರ್ಯ ತುಂಬಿದರು