ಮಸ್ಕಿ ಅ 04.ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೇ ಆದ ಇತಿಹಾಸ ವಿದೆ ಅಂತಹ ನಿಟ್ಟಿನಲ್ಲಿ ಮಸ್ಕಿ ತಾಲೂಕು ಘಟಕದಿಂದ ತಾಲೂಕು ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಇವರ ನೇತೃತ್ವದಲ್ಲಿ ಹಾಗೂ ಸರ್ವ ಹಾಗೂ ಸರ್ವ ಸಿಬ್ಬಂದಿ ಮುಖಾಂತರ ಪತ್ರಕರ್ತರ ಸಮಸ್ಯೆಗಳ ಕುರಿತು ಮಸ್ಕಿ ತಸಿಲ್ದಾರ್ ಸುಧಾ ಅರಮನೆ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ರಕ್ತದಲ್ಲಿ ಪತ್ರ ಬರೆದು ಪತ್ರಕರ್ತರ ಸಮಸ್ಯೆ ಕುರಿತು ಮನವಿ ಪತ್ರ ಸಲ್ಲಿಸಲಾಯಿತು .ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೊಂದು ಕಾನಿಪ ಧ್ವನಿ ಸಂಘಟನಾ ವತಿಯಿಂದ.
ಬಹಿರಂಗ ಪತ್ರದ ಜೊತೆಗೆ ಕೆಲ ಪ್ರಮುಖ ಮನವಿಗಳು
ಮಾದ್ಯಮ ರಾಮಯ್ಯ:- ಸ್ವಾತಂತ್ರ ದೊರೆತು 77ನೇ ವರ್ಷಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ ಇದವರೆಗೂ ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಅಂದರೆ 90% ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ಹಾಗೂ ಪತ್ರಿಕೆ ನಡೆಸುವ ಬಂಡವಾಳ ಶಾಹಿಗಳಿಂದ ಮರೀಚಿಕೆಯಾಗಿರುವುದು ನೋವಿನ ಸಂಗತಿ. ಹಗಲು-ರಾತ್ರಿಯೆನ್ನದೆ ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯ ಜೊತೆಗೆ ಪ್ರಾಣದ ಹಂಗನ್ನು ತೊರೆದು ಭ್ರಷ್ಟಚಾರಗಳನ್ನು ಬಯಲಿಗಳೆಯುವುದಲ್ಲಿ ಪತ್ರಕರ್ತನ ಪಾತ್ರ ಪ್ರಮುಖವಾಗಿದ್ದರೂ ಸಹ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೂ ಪತ್ರಕರ್ತರು ಪರದಾಡುತ್ತಿರುವುದು ವಿಷಾದಕರ. ಸರ್ಕಾರದ ಕೈಯಲ್ಲಿರುವ ಕಾರ್ಮಿಕ ಇಲಾಖೆಯು ಕೂಡ ಇದ್ದು ಇಲ್ಲ್ಲದಂತಾಗಿರುವ ಪರಿಸ್ಥಿತಿಯನ್ನು ವರದಿಗಾರರು ಪ್ರಸ್ತುತ ರಾಜ್ಯದಲ್ಲಿ ಅನುಭವಿಸುತ್ತಿದ್ದಾರೆ. ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 800 ಪತ್ರಿಕೆಗಳು ಇದುವರೆಗೂ ಕಾರ್ಮಿಕ ಇಲಾಖೆಯಡಿಗೆ ಒಳಪಡದೆ ನೊಂದಣಿಯಾಗದೇ ಆಯಾ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ (ವರದಿಗಾರರಿಗೆ) ಕಾರ್ಮಿಕರಿಗೆ PF, E.S.I, ಪೇಸ್ಲಿಫ್, ವಾರದ ರಜೆ, ಮೀಡಿಯಾ ಕಿಟ್ ಹಾಗೂ ಇನ್ನೀತರ ಸೌಲಭ್ಯಗಳಿಂದ ಇಂದಿನವರೆಗೂ ವಂಚಿತರಾಗಿರುವುದಕ್ಕೆ ಸರ್ಕಾರದ ಮೃದು ದೊರಣೆಯೇ ಈ ಸ್ಥಿತಿಗೆ ಕಾರಣ. ಇನ್ನೂ ಮುಂದಾದರೂ ಸರ್ಕಾರ ಎಚ್ಚುತ್ತು ಕೊಂಡು ಪತ್ರಿಕೆ ನಡೆಸುವ ಬಂಡವಾಳಶಾಹಿಗಳ ಮೇಲೆ ಕಠಿಣ ನಿಲುವನ್ನು ತಾಳಿ ಕಾರ್ಮಿಕ ಇಲಾಖೆಗೆ ನೊಂದಣಿಯಾಗುವಂತೆ ಕ್ರಮ ಕೈಗೊಂಡರೆ ನಾಡಿನ 10 ಸಾವಿರ ಮೇಲ್ಪಟ್ಟು ವರದಿಗಾರರ ಜೀವನ ಹಸನಾಗುವುದರ ಜೊತಗೆ ಪ್ರತಿಯೊಬ್ಬ ವರದಿಗಾರರ ಕುಟುಂಬದಲ್ಲಿ ಮಂದಹಾಸ ಜೊತೆಗೆ ತಮ್ಮನ್ನು ನಾಡಿನ ಪತ್ರಕರ್ತರು “ಮಾಧ್ಯಮ ರಾಮಯ್ಯ” ರೆಂದು ಕೊಂಡಾಡುವ ಕಾಲ ಸನ್ನಿಹಿತವಾಗಬಹುದು.
ಸಾಮಾಜಿಕ ಹರಿಕಾರ:- ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ತಮ್ಮ ಅಧಿಕಾರವಧಿಯಲ್ಲಿ ನ್ಯಾಯ ಒದಗಿಸಿರುವ ತಾವುಗಳು, 2023/24 ರ ಬಡ್ಜಟ್ ನಲ್ಲಿ 52 ಸಾವಿರ ಕೋಟಿ ರೂ ಗಳ ಹಣವನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿರುವ ತಾವುಗಳು ಅನೇಕ ವರ್ಷಗಳಿಂದ ಸಾರ್ವಜನಿಕರಿಗಾಗಿ ಸೇವೆ ಒದಗಿಸಲು ಉಚಿತ ಬಸ್-ಪಾಸ್ ಗಾಗಿ ಹೋರಾಟ ನಡಸುತ್ತಾ ಬಂದಿದ್ದರೂ ಕೇವಲ ಹತ್ತು ಸಾವಿರ ಮೇಲ್ಪಟ್ಟಿರುವ ಪತ್ರಕರ್ತರ ಬಗ್ಗೆ ತಮಗ್ಯಾಕೆ ಉದಾಸೀನ ಎಂಬ ಪ್ರಶ್ನೆ ಪ್ರತಿಯೊಬ್ಬ ನಾಡಿನ ಪತ್ರಕರ್ತರಲ್ಲಿ ಕಾಡುತ್ತಿದೆ. ಇನ್ನು ವಾರ್ತಾ ಇಲಾಖೆಯಂತೂ ಅಕ್ರಿಡೇಷನ್ ನೆಪದಲ್ಲಿ ತಾರತಮ್ಯ ಮಾಡುತ್ತ ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ಮಾಲಿಕರಿಗೆ ಅವರ ಹೆಂಡತಿಗೆ ಮಕ್ಕಳಿಗೆ ಹಾಗೂ ಅಳಿಯಂದಿರಿಗೆ ಮೀಸಲಾಗಿರುವ ಅಕ್ರಿಡೇಷಿನ್ ಕಾರ್ಡ್ ಗಳು, ಕೇವಲ 400 ಜನ ವರದಿಗಾರರಿಗೆ ಮಾತ್ರ ಮಾಧ್ಯಮ ಮಾನ್ಯತಾ ಕಾರ್ಡ್ ದೊರೆತಿದೆ. ಮಾನ್ಯತೆಯಲ್ಲಿ ಖಾಯಂ ನೇಮಕಾತಿ ಆದೇಶ ಹೊಂದಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಮಾತ್ರ ಅಂತ ನಿಯಮವಿದ್ದರೂ ಈ ನಿಯಮವನ್ನು ಪ್ರಸ್ತುತ ಗಾಳಿಗೆ ತೂರಿ ಖಾಯಂ ನೇಮಕಾತಿ ಆದೇಶ ವಿಲ್ಲದಂತವರಿಗೆ ಅಕ್ರಿಡೇಷನ್ ಒದಗಿಸಿರುವುದು ಅಕ್ಷಯ್ಯ ಅಪರಾಧ. ಖಾಯಂ ನೇಮಕಾತಿ ಆದೇಶ ನೀಡದೇ ವಂಚಿಸುವ ಬಂಡವಾಳಶಾಹಿಗಳು ಮುಂದಿನ ಮಾಸಾಶನಕ್ಕೂ ಇದು ಪತ್ರಕರ್ತರಿಗೆ ಮಾರಕವಾಗಿದ್ದರಿಂದ ಇಂದು ಕೇವಲ 178 ಜನ ಪತ್ರಕರ್ತರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ.
4000 ಸಾವಿರ ಕೋಟಿ ರೂಗಳನ್ನು ಬಡ್ಜಟ್ನಲ್ಲಿ ಮೀಸಲಿರಿಸಿ ಎರೆಡುವರೆ ಕೋಟಿ ಮಹಿಳಯರಿಗೆ ಮಂಗಳ ಮುಖಿಯರಿಗೆ ರಾಜ್ಯಾಧ್ಯಂತ ಓಡಾಡಲು ಉಚಿತ ಬಸ್-ಪಾಸ್ ವ್ಯವಸ್ಥೆ ಮಾಡಿರುವ ತಾವುಗಳು ಕೇವಲ ೧೦ ಸಾವಿರ ಪತ್ರಕರ್ತರಿಗೆ ರಾಜ್ಯದ ಆಯಾ ಜಿಲ್ಲೆಗಳಲ್ಲಿ ಜನತೆಯ ಪರ ಕಾರ್ಯನಿರ್ವಹಿಸಲು ಉಚಿತ ಬಸ್ಪಾಸ್ ಒದಗಿಸಿದರೆ ಅದಕ್ಕೆ ತಗಲುವ ವೆಚ್ಚ ವಾರ್ಷಿಕ ೧೦ ಕೋಟಿ ರೂಗಳು ಮಾತ್ರ ಎಂದು ಅಂದಾಜಿಸಲಾಗಿದೆ. ಸಾಮಾಜಿಕ ಭದ್ರತೆ ಯಡಿಯಲ್ಲಿ 52 ಸಾವಿರ ಕೋಟಿ ರೂಗಳನ್ನು ಖರ್ಚು ಮಾಡಲು ಮುಂದಾಗಿ 5 ಗ್ಯಾರೆಂಟಿಗಳನ್ನು ರಾಜ್ಯದ ಜನತೆಗೆ ಪ್ರಸ್ತುತ ನೀಡುತ್ತಿರುವ ತಮಗೆ ಪತ್ರಕರ್ತರ ಕೆಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ತಮ್ಮ ಸಾಮಾಜಿಕ ಹರಿಕಾರ ಕ್ಕೊಂದು ಬೆಲೆ ಹಾಗೂ ತಮ್ಮ ಮುಕುಟಕ್ಕೆ ಗರಿ ಮೂಡುತ್ತದೆ ಜೊತೆಗೆ 14 ಭಾರಿ ದಾಖಲೆಯ ಬಡ್ಜಟ್ ನಾಡಿನಲ್ಲಿ ಮಂಡಿಸಿರುವ ಆರ್ಥಿಕ ತಜ್ಞರಾಗಿರುವ ತಾವುಗಳು ಸಮಾಜದ ಹಾಗೂ ಸರ್ಕರಕ್ಕೆ ಕೈಗನ್ನಡಿಯಾಗಿರುವ ಪತ್ರಕರ್ತರ ನಾಡಿ ಮಿಡಿತ ಹಾಗೂ ಸಂಕಷ್ಟಗಳನ್ನು ಅರಿಯದೆ ಕೇವಲ ಬಂಡವಾಳಶಾಹಿಗಳ ಪರ ಸಾಗುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಯಕ್ಷ ಪ್ರಶ್ನೆಯೊಂದಿಗೆ ಈಗಾಲಾದರು ನಾಡಿನ ದೊರೆಯಾದ ತಾವುಗಳು ಎಚ್ಚೆತ್ತುಕೊಂಡು ಪತ್ರಕರ್ತರ ಬಗ್ಗೆ ಹಾಗೂ ಅವರ ಸಂಕಷ್ಟಗಳಿಗೆ ಆಸರೆಯಾಗಿ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸುತ್ತೀರಿ ಎಂಬ ಅಚ್ಚಲ ನಂಬಿಕೆಯೊಂದಿಗೆ ನಾಡಿನ ಪತ್ರಕರ್ತರು.
ದಿನಾಂಕ:- 21/8/2023 ರಂದು ಖುದ್ದಾಗಿ ತಾವು ಕರೆದ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ 9 ಪತ್ರಕರ್ತರ ಸಂಘಟನೆಗಳ ಅಧ್ಯಕ್ಷರ ಸಭೆ ನಡೆದು ಪತ್ರಕರ್ತರ ಸಂಕಷ್ಟಗಳ ಬಗೆ ಮನವಿ ಸಲ್ಲಿಸಿ ಇಂದಿಗೆ 1 ತಿಂಗಳು ಮೇಲ್ಪಟ್ಟು ಕಳೆಯುತ್ತಿದ್ದರೂ ಪ್ರತಿಫಲ ಮಾತ್ರ ಶೂನ್ಯ. ಡಿಸೆಂಬರ್ 2023 ರವರೆಗೆ ನಮ್ಮ ನಾಡಿನ ಪತ್ರಕರ್ತರಿಗೆ ಸರ್ಕಾರದಿಂದ ಮೂಲಸೌರ್ಕಯಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿ. ಒಂದು ವೇಳೆ ನಿರೀಕ್ಷೆ ಹುಸಿಯಾದಲ್ಲಿ ಕಾನೂನು ಹೋರಾಟ ಅನಿವಾರ್ಯ.
ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮನವಿ
1.ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಪತ್ರಕರ್ತರುಗಳಿಗೆ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು.
2.ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 3೦೦ ಕ್ಕೂ ಅಧಿಕ ಸಿಬ್ಬಂದಿಯವರನ್ನು ಸರ್ಕಾರ ಕೂಡಲೇ ನೇಮಕಗೊಳಿಸಿ ಪತ್ರಕರ್ತರ ಕಾರ್ಯಗಳನ್ನು ತ್ವರಿತವಾಗಿ ಆಗುವಂತೆ ಕ್ರಮ ವಹಿಸಬೇಕು.
3. ಅಕ್ರಿಡೇಟ್ ಹಾಗೂ ನಾನ್ ಅಕ್ರಿಡೇಟ್ ಜರ್ನಲಿಸ್ಟ್ ಎನ್ನುವ ತಾರತಮ್ಯವನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು:- ಸರ್ಕಾರ ವಾರ್ತಾ ಇಲಾಖೆ ಮೂಲಕ KSRTC ನಿಗಮದಿಂದ ಅಕ್ರಿಡೇಟ್ ಜರ್ನಲಿಸ್ಟ್ ಗಳಿಗೆ ಮಾತ್ರ ಉಚಿತ ಬಸ್ ಪಾಸ್ ರಾಜ್ಯಾಧ್ಯಂತ ಓಡಾಡಲು ಅವಕಾಶ ಕಲ್ಪಿಸಿಕೊಟ್ಟರೆ ಅದೇ ರೀತಿ ನಾನ್- ಅಕ್ರಿಡೇಟ್ ಜರ್ನಲಿಸ್ಟ್ ಗಳಿಗೆ (ಅಂದರೆ ಆರ್.ಎನ್.ಐ. ಹೊಂದಿರುವಂತ ಪತ್ರಕರ್ತರುಗಳಿಗೆ) ಬಿ.ಎಂ.ಟಿ.ಸಿ. ಕಾರ್ಪೋರೇಷನ್ ವತಿಯಿಂದ ವರ್ಷಕ್ಕೆ 6೦೦ ರೂ ಗಳನ್ನು ಪಾವತಿಸಿದರೆ ವರ್ಷ ಪೂರ್ತಿ ಬಿ.ಎಂ.ಟಿ.ಸಿ ಯಲ್ಲಿ ಪತ್ರಕರ್ತರಿಗೆ ಓಡಾಡಲು ಅವಕಾಶ ಕಲ್ಪಿಸಿದ್ದು ತಾರತಮ್ಯಕ್ಕೊಂದು ಸ್ಪಷ್ಟ ಪುರಾವೆಯಂತಿದೆ. ಈ ರೀತಿಯಾಗಿ ಸರ್ಕಾರ ಅಕ್ರಿಡೇಟ್ ಹಾಗೂ ನಾನ್ ಅಕ್ರಿಡೇಟ್ ಅಂತ ತಾರತಮ್ಯ ಪತ್ರಕರ್ತರಲ್ಲಿ ಮೂಡಿಸಿರುವುದು ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಇದನ್ನು ಕೂಡಲೇ ಸರಿಪಡಿಸ ಬೇಕು.
4. ಇನ್ನೂ ಸಂಕಷ್ಟದಲ್ಲಿರುವ ಪತ್ರಕರ್ತರ ಮಸಾಶನ ನಿಯಮ 7 ರಲ್ಲಿ , ವಾರ, ಪಾಕ್ಷಿಕ, ಮಾಸಿಕ ಹಾಗೂ ಇನ್ನೀತರ ಪತ್ರಿಕೆಗಳ ಪ್ರತಿನಿಧಿಗಳು ಮಾಸಾಶನ ಪಡೆಯಲು ಅರ್ಹತೆ ಹೊಂದಿರುವುದಿಲ್ಲವೆಂದು ಸ್ಪಷ್ಟವಾಗಿ ನಿಬಂಧನೆ ಹೊರಡಿಸಿರುವುದು ಕೂಡ ಕಾನೂನು ಬಾಹಿರ. ದಿನ ಪತ್ರಿಕೆಗಳ ರೀತಿಯಲ್ಲೇ ನಿಯತಕಾಲಿಕೆಗಳು ಕೂಡ Registrar of News paper India ವತಿಯಿಂದ ಪರವಾನಗೆ ಹೊಂದಿ ಪತ್ರಿಕೆಗಳನ್ನು ಹೊರತರುವ ಹಿನ್ನೆಲೆಯಲ್ಲಿ ಈ ಪತ್ರಕರ್ತರಿಗೂ ಮಾಸಾಶನ ದೊರೆಯಲೇಬೇಕು.
5. ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೆ ಆಯಾ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.
6. ನಾಡಿನ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
7. ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತ ಪಟ್ಟರೆ ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10 ಲಕ್ಷ ರೂಗಳ ಪರಿಹಾರ ಒದಗಿಸಬೇಕು.
8. 2018 -19 ರ ಅಯವ್ಯಯದಲ್ಲಿ ದಿನ ಪತ್ರಿಕೆ ಹಂಚುವವರ (ಪತ್ರಿಕಾ ವಿತರಕರು) ಕ್ಷೇಮಾಭಿವೃದ್ದಿಗೆ 2 ಕೋಟಿಯ ಕ್ಷೇಮನಿಧಿ ಅಂದಿನ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಘೋಷಣೆಯಾಗಿದ್ದರು ಹೇಳಿಕೆಗೆ ಮಾತ್ರ ಸೀಮಿತವಾದ ಈ ನಿಧಿಯನ್ನು ಕೂಡಲೆ ಪತಿಕಾ ವಿತರಕರ ಕ್ಷೇಮಾಭಿವೃದ್ದಿಯ ಖಾತೆಗೆ ಸರ್ಕಾರ ಜಮಾವಣೆ ಮಾಡಬೇಕು.
9. ಈ ಮನವಿಯ ಹೋರಾಟವಾದ ಒಂದು ತಿಂಗಳ ನಂತರ ರಾಜ್ಯಾಧ್ಯಂತ ನಮ್ಮ ಕಾ.ನಿ.ಪ.ಧ್ವನಿ ಸಂಘಟನೆಯ ಸದಸ್ಯರುಗಳಿಂದ ನಾಡಿನ ನೊಂದಂತ ಪತ್ರಕರ್ತರ ಪರ ರಕ್ತದಿಂದ ಸಹಿ ಮಾಡಿದ ಪತ್ರದ ಚಳುವಳಿ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ತಲುಪವವರೆಗೂ ಹೋರಾಟ ನಡೆಸಲಾಗುವುದು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ರೀಮತಿ ಸರಸ್ವತಿ ನಾಗರಾಜ್ ಶ್ರೀಮತಿ ಶ್ರೀದೇವಿ ವಿಶ್ವಕರ್ಮ ಕುಮಾರಿ ಅಮೃತ ಕುಮಾರಿ ಅಮೃತ ಮುರಾರಿ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಘನ್ ಮಠದಯ್ಯ ಹಿರೇಮಠ ಶಿವು ಸಾಲಿಮಠ ಅಜಿತ್ ಜಾಲವಾಡಗಿ ಮಲ್ಲಿಕಾರ್ಜುನ ಸ್ವಾಮಿ ಎಸ್ ನಜೀರ್ ಬಸವರಾಜ್ ಡಿ ಉದ್ಬಾಳ್ ವೀರೇಶ್ ಸ್ವಾಮಿ ಕೆ ಯಮನೂರ ನಾಯಕ್ ಶ್ರೀಶೈಲ ಬಾಲಚಂದ್ರ ಬಸವರಾಜ್ ಕಡಬೂರು ಗುರುದೇವ್ ಸ್ವಾಮಿ ಬಸವರಾಜ್ ಸ್ವಾಮಿ ರಂಜಿತ್ ಮುರಾರಿ ಸೇರಿದಂತೆ ಇನ್ನಿತರು ಪತ್ರಕರ್ತರು ಹಾಜರಿದ್ದರು.