2023 ಕರ್ನಾಟಕ ವಿಧಾನಸಭಾ ಚುನಾವಣೆಯ ಕೆ ಆರ್ ಪಕ್ಷವು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿದ್ದು ಈ ಕೆಳಕಂಡಂತೆ ಪ್ರಣಾಳಿಕೆ ಬಿಡುಗಡೆ ಮಾಡಿದೆ
ಕರ್ನಾಟಕ ವಿಧಾನಸಭಾ ಚುನಾವಣೆ 2023 – KRS ಪಕ್ಷದ ಪ್ರಣಾಳಿಕೆ
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು ಮತ್ತು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ಜನಸಾಮಾನ್ಯರ ಜೊತೆ ಮತ್ತು ಚಿಂತಕರು ಹಾಗೂ ತಜ್ಞರ ಜೊತೆ ಹಲವಾರು ಸಭೆಗಳು ಮತ್ತು ಸಂವಾದಗಳನ್ನು ನಡೆಸಿದ ನಂತರ ಪಕ್ಷವು ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದು, ಅದರ ಪ್ರಮುಖ ಅಂಶಗಳನ್ನು ಈ ಪತ್ರಿಕಾ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
● • ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ 3 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡಲಾಗುವುದು. ಭ್ರಷ್ಟಾಚಾರರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ/ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ.
● ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಸಂಪೂರ್ಣ ಮದ್ಯ ನಿಷೇಧ.
ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ.
● ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ತಾಲ್ಲೂಕಿಗೊಂದು ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತೆ ನಿರ್ಮಾಣ, ಉದ್ಯೋಗಸೃಷ್ಟಿ, ಗ್ರಾಮಸ್ವರಾಜ್ಯ.
ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ, ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲಿಯೇ ಮೌಲ್ಯವರ್ಧನೆಗೆ ಕ್ರಮ, ಸಾಲಮುಕ್ತ ರೈತ; ಬಡತನಮುಕ್ತ ಹಳ್ಳಿಗಳು.
● ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ.
ರಾಜ್ಯದ ಪ್ರತಿ ಹಳ್ಳಿ/ಪಟ್ಟಣಕ್ಕೂ ಮಳೆ/ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ.
ರಾಜ್ಯದ ಪ್ರತಿ ಕೆರೆ ಮತ್ತು ಬಂಜರು ಭೂಮಿಗಳಲ್ಲಿ ಗ್ರಾಮ ಪಂಚಾಯಿತಿ ಮಾಲೀಕತ್ವದಲ್ಲಿ ಸೌರವಿದ್ಯುತ್ ಘಟಕ ಸ್ಥಾಪನೆ.
ಸ್ಥಳೀಯವಾಗಿ ಪರಿಸರಸ್ನೇಹಿ ವಿದ್ಯುತ್ ಉತ್ಪಾದನೆಗೆ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ.
ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ಯ: ಕನ್ನಡ ಕಡ್ಡಾಯ.
ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ.
ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 2000 ರೂಪಾಯಿ ಮಾಸಾಶನ; ನಿರುದ್ಯೋಗ ಭತ್ಯೆ.
ಎಲ್ಲಾ ತರಹದ ಮಾಸಾಶನಗಳನ್ನು ಕನಿಷ್ಠ ರೂ.3000ಕ್ಕೆ ಏರಿಕೆ.
೨) ಸ್ವಚ್ಚ = ಸದೃಢ → ಸಮೃದ್ಧ – ಸಾಂಸ್ಕೃತಿಕ = ಹಸಿರು ಕರ್ನಾಟಕ್ಕಾಗಿ ಕೆ.ಆರ್.ಎಸ್. ಪಕ್ಷದ ನವಸೂತ್ರಗಳು.
ಈ ಮೇಲಿನ ಅಂಶಗಳು ಪ್ರಮುಖವಾಗಿರುವ KRS ಪಕ್ಷದ ಪ್ರಣಾಳಿಕೆಯ ನವಸೂತ್ರಗಳೆಂದರೆ:
1. ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ, 2. ಆರೋಗ್ಯ, 3. ಶಿಕ್ಷಣ, 4. ಕೃಷಿ, 5. ಮಹಿಳೆ ಮತ್ತು ಕುಟುಂಬ ಕಲ್ಯಾಣ, 6. ಯುವಜನತೆ, 7. ಪ್ರಾದೇಶಿಕತೆ, 8. ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಮತ್ತು 9. ಉದ್ದಿಮೆ ಮತ್ತು ಸಂಘಟಿತ/ಅಸಂಘಟಿತ ಕಾರ್ಮಿಕರ ಕಲ್ಯಾಣ.
1. ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ
ಲಂಚಮುಕ್ತ ಕರ್ನಾಟಕಕ್ಕಾಗಿ ಮತ್ತು ದಕ್ಷ ಆಡಳಿತಕ್ಕಾಗಿ ಬಲಿಷ್ಠ ಲೋಕಾಯುಕ್ತ:
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಕೇವಲ ಹೆಚ್ಚು ಲಂಚ ನೀಡಿದವರ ಕೆಲಸ ಮಾತ್ರ ಆಗುವಂತಹ ಪರಿಸ್ಥಿತಿಯಿದ್ದು, ಜನರು ಈ ಭ್ರಷ್ಟಾಚಾರದಿಂದ ತಮ್ಮ ಜಮೀನು, ಕೆಲಸ ಹಾಗೂ ಇತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಅವ್ಯವಸ್ಥೆ ತೊಲಗಿ, ದಕ್ಷ ಮತ್ತು ಪ್ರಾಮಾಣಿಕ ವ್ಯವಸ್ಥೆ ನಿರ್ಮಾಣವಾಗಬೇಕೆಂದರೆ, ಭ್ರಷ್ಟಾಚಾರ ತೊಲಗಬೇಕು. ಇದಕ್ಕೆ ಬಲಿಷ್ಠ ಲೋಕಾಯುಕ್ತದ ಅವಶ್ಯಕತೆಯಿದ್ದು, KRS ಪಕ್ಷವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲಿದೆ. ಹಾಗೆಯೆ ಆಡಳಿತದಲ್ಲಿ ಸುಧಾರಣೆಗಳನ್ನು ತಂದು ದಕ್ಷ ಮತ್ತು ಪಾರದರ್ಶಕ ಆಡಳಿತವನ್ನು ಖಾತ್ರಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ಈ ಕೆಳಗಿನ ಅಧಿಕಾರಗಳನ್ನು ನೀಡಲಾಗುವುದು:
ಭ್ರಷ್ಟಾಚಾರದ ಪ್ರಕರಣಗಳಲ್ಲಿ FIR ದಾಖಲಿಸಲು ಸರ್ಕಾರದ ಅನುಮತಿ ಬೇಕಾಗಿಲ್ಲ
ಸಕ್ಷಮ ಪ್ರಾಧಿಕಾರದ ಅನುಮತಿ ಬೇಕಿರುವ ಪ್ರಕರಣಗಳಿಗೆ 7 ದಿನಗಳ ಒಳಗಾಗಿ ವಿಚಾರಣೆಗೆ ಅನುಮತಿ ವಿಷಲ್ ಬ್ಲೊವರ್ ಕಾಯ್ದೆ ಅನುಷ್ಠಾನ
ಭ್ರಷ್ಟಾಚಾರದ ಬಗ್ಗೆ ದೂರು/ಮಾಹಿತಿ ನೀಡಲು ಕಾಲ್ ಸೆಂಟರ್ ಸ್ಥಾಪನೆ
3 ಲಕ್ಷ ಖಾಲಿ ಹುದ್ದೆಗಳ ಭರ್ತಿ – ರಾಜ್ಯ ಸರ್ಕಾರದಲ್ಲಿ ಹಾಲಿ ಖಾಲಿ ಇರುವ 3 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡಲಾಗುವುದು. ಈ ಮೂಲಕ ಆಡಳಿತಕ್ಕೆ ಚುರುಕು ತರಲಾಗುವುದು ಮತ್ತು ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು.
ದಕ್ಷ ಮತ್ತು ಪಾರದರ್ಶಕ ಆಡಳಿತಕ್ಕಾಗಿ:
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು YouTube ಮೂಲಕ ಲೈವ್ ವೀಕ್ಷಣೆಗೆ ಅವಕಾಶ
ಸಂಪೂರ್ಣ ಮಾಹಿತಿಗಳನ್ನು ಸರ್ಕಾರದ ಜಾಲ ತಾಣದಲ್ಲಿ ಪ್ರಕಟಿಸಲಾಗುವುದು
ಮನೆ ಬಾಗಿಲಿಗೆ ಸರ್ಕಾರಿ ಸೇವೆ ಅಥವ ಆನೈನ್ ಮೂಲಕ ಸಂಪೂರ್ಣ ಸೇವೆ ಲಭ್ಯ
●ಸರ್ವರ್ ಸಮಸ್ಯೆಯಿಂದ ಮುಕ್ತಿ
● ಜಾರಿಯಲ್ಲಿರುವ ಎಲ್ಲಾ ಸರ್ಕಾರಿ ಯೋಜನೆಗಳ ಸಮರ್ಪಕ ಜಾರಿ
ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ. ಅನಾವಶ್ಯಕ ಸಾಲ/ಯೋಜನೆ/ಕಾರ್ಯಕ್ರಮ/ಪ್ರವಾಸಗಳಿಗೆ ಮತ್ತು ದುಂದುವೆಚ್ಚಕ್ಕೆ ಕಡಿವಾಣ.
● ತ್ವರಿತ ನ್ಯಾಯದಾನಕ್ಕೆ ಕ್ರಮ. ಸರ್ಕಾರದ ವತಿಯಿಂದ ಹಾಕಲಾಗಿರುವ ಅನವಶ್ಯಕ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಸರ್ಕಾರಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಕಾಲ ವ್ಯರ್ಥ ಮಾಡುವುದಕ್ಕೆ ಕಡಿವಾಣ.
● ಟೆಂಡರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕ ವ್ಯವಸ್ಥೆ. ಪ್ರಾಮಾಣಿಕವಾಗಿ ಮತ್ತು ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿ. ಈ ಹಿಂದೆ ಅಕ್ರಮ ಎಸಗಿರುವ ಗುತ್ತಿಗೆದಾರರನ್ನು ಕಡ್ಡಾಯವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು.
● ಶುದ್ಧ ಕಂದಾಯ ದಾಖಲೆಗಳು, ಸರ್ಕಾರಿ ದಾಖಲೆಗಳಲ್ಲಿ ವ್ಯಕ್ತಿಗಳ ಹೆಸರು, ಅಳತೆ, ದಿನಾಂಕ, ಇತ್ಯಾದಿ ಹಲವಾರು ತಪ್ಪುಗಳು ಕಾಲಕ್ರಮೇಣ ನುಸಳಿದ್ದು, ಬಹುತೇಕ ಸರ್ಕಾರದ ಪ್ರಮಾದಗಳಿಂದ ಆಗಿರುವಂತಹ ಲೋಪಗಳು. ಈ ನಿಟ್ಟಿನಲ್ಲಿ ದಾಖಲೆಗಳಲ್ಲಿನ ಲೋಪಗಳನ್ನು ಸರಿಪಡಿಸಿ, ಲೋಪರಹಿತ “ಶುದ್ಧ ದಾಖಲೆಗಳನ್ನು ಒದಗಿಸಲಾಗುವುದು.
ಪೋಡಿ ಮುಕ್ತ ಗ್ರಾಮ – ಸರ್ವೆ ಸಮಸ್ಯೆಗೆ ಶಾಶ್ವತ ಪರಿಹಾರ. ಕಾಲಮಿತಿಯೊಳಗೆ ಇಡೀ ರಾಜ್ಯದಲ್ಲಿ ಪೋಡಿ ಪ್ರಕರಣಗಳನ್ನು ಶೂನ್ಯಕ್ಕೆ ತರಲಾಗುವುದು ಅರ್ಜಿ ಹಾಕಿದ ವಾರದೊಳಗೆ ಸರ್ವೆ ಮಾಡಿಕೊಡುವಂತಹ ವ್ಯವಸ್ಥೆ.
ಕಾಗದರಹಿತ ಆಡಳಿತ, ಬ್ರೇಕರ್ ಮುಕ್ತ ಸೇವೆಗಳು, ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ಡಿಜಟಲೀಕರಣಗೊಳಿಸಿ, ಕಾಗದರಹಿತ ಆಡಳಿತ ಜಾರಿಗೊಳಿಸಲಾಗುವುದು.
● ● ಸೋರಿಕೆಯಿಲ್ಲದ ಪಡಿತರ ವಿತರಣೆ. ವಂಚಿತ ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಬಿಪಿಎಲ್ ಕಾರ್ಡ್ ವಿತರಣೆ. ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ
ಪೊಲೀಸ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ
• ಪ್ರತಿ ಪೊಲೀಸ್ ಠಾಣೆಯಲ್ಲಿ ಮಾತೂ ದಾಖಲಾಗುವ ಸಿಸಿಟಿವಿ (CCTV with Audio Recording) ಅಳವಡಿಕೆ ಮತ್ತು ಇದನ್ನು ಲೈವ್ ಮೂಲಕ ಮೇಲಿನ ಅಧಿಕಾರಿಗಳು ನಿಗಾ ವಹಿಸುವಂತೆ ಕ್ರಮ ಮತ್ತು ಅದು ಸಾರ್ವಜನಿಕರಿಗೂ ಆನ್ಲೈನ್ನಲ್ಲಿ ಲಭ್ಯವಿರುತ್ತದೆ.
● ● ಸರ್ಕಾರದ ಕಪಿಮುಷ್ಠಿಯಿಂದ ಪೊಲೀಸ್ ಇಲಾಖೆಗೆ ಮುಕ್ತಿ, ತನಿಖೆ ಮತ್ತು ವರ್ಗಾವಣೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಪೊಲೀಸರಿಗೆ ಉತ್ತಮ ಸಂಬಳ ಮತ್ತು ಸವಲತ್ತು. ಪದೇಪದೇ ವರ್ಗಾವಣೆ ಶಿಕ್ಷೆಯಿಂದ ಮುಕ್ತಿ.
• ಜೈಲು ಸುಧಾರಣೆ – ಕಾರಾಗೃಹಗಳನ್ನು ಸುಧಾರಣಾ ಕೇಂದ್ರಗಳನ್ನಾಗಿಸುವ ನಿಟ್ಟಿನಲ್ಲಿ ಅಲ್ಲಿ ಉತ್ತಮ ಶಿಕ್ಷಣ, Skills ಕಲಿಕೆ, ಉತ್ತಮ ವೈದ್ಯಕೀಯ ವ್ಯವಸ್ಥೆ. ಜೈಲುಗಳಲ್ಲಿನ ಅಕ್ರಮಗಳಿಗೆ ಕಡಿವಾಣ.
ರೌಡಿ ಶೀಟರ್ ಪಟ್ಟಿ ಪರಿಷ್ಕರಣೆ
ಸುಳ್ಳು ಪ್ರಕರಣಗಳ ವಾಪಸ್ – ಸರ್ಕಾರಿ ಅಧಿಕಾರಿಗಳು ಅಥವ ಪೊಲೀಸರು ಲಂಚ ಮತ್ತಿತರ ಪ್ರಭಾವಗಳಿಗೆ ಒಳಗಾಗಿ ಅಮಾಯಕರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು. ●
ಪ್ರಾಮಾಣಿಕ ಮತ್ತು ದಕ್ಷ ಸರ್ಕಾರಿ ನೌಕರರು ಘನತೆಯಿಂದ ಕೆಲಸ ನಿರ್ವಹಿಸುವ ವಾತಾವರಣ ನಿರ್ಮಾಣ
● ಭ್ರಷ್ಟರಿಗೆ ಶಿಕ್ಷೆ. ಪ್ರಾಮಾಣಿಕರಿಗೆ ಸೇವಾ ಸುರಕ್ಷತೆ, ಸರ್ಕಾರಿ ಶಾಲಾ ಶಿಕ್ಷಕರಿಗೆ ತಮ್ಮ ವೃತ್ತಿಯಲ್ಲಿ ಒಂದು ಬಾರಿ ತಾವು ಬಯಸಿದ ಜಿಲ್ಲೆಗೆ ವರ್ಗಾವಣೆ, ಕಾಲಕಾಲಕ್ಕೆ ಅರ್ಹ ನೌಕರರಿಗೆ ಬಡ್ತಿ. ಬಡ್ತಿ/ನಿವೃತ್ತಿ ವೇತನ ಪಡೆಯಲು ಲಂಚ ನೀಡಬೇಕಾದ ಭ್ರಷ್ಟ ವ್ಯವಸ್ಥೆಯ ನಿರ್ನಾಮ,
2. ಆರೋಗ್ಯ
0 ೦ ಪ್ರತಿ ಜಿಲ್ಲೆಗೆ ಕನಿಷ್ಟ ಒಂದು ಮೆಡಿಕಲ್ ಕಾಲೇಜ್ ಸ್ಥಾಪನೆ. ಒಂದೇ ವರ್ಷದಲ್ಲಿ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 100 ಹಾಸಿಗೆಗಳ ಆಧುನಿಕ Multi-Speciality ಸರ್ಕಾರಿ ಆಸ್ಪತ್ರ ಸ್ಥಾಪನೆ
೦ ಮೊಬೈಲ್ ಕ್ಲಿನಿಕ್ – ಗ್ರಾಮೀಣ ಭಾಗದಲ್ಲಿ ಮೊಬೈಲ್ ಕ್ಲಿನಿಕ್ಗಳ ಮೂಲಕ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ.
ಮೊಬೈಲ್ ಕ್ಲಿನಿಕ್ಗಳಲ್ಲಿ ಅಗತ್ಯ ಪರೀಕ್ಷಾ ಸೌಲಭ್ಯಗಳು ಮತ್ತು Sample Collection ವ್ಯವಸ್ಥೆ.
೦ ರಾಜ್ಯದಲ್ಲಿ AIIMS ಮಾದರಿಯ ಉತ್ಕೃಷ್ಟ ವೈದ್ಯಕೀಯ ಸಂಶೋಧನಾ ಕೇಂದ್ರ ಸ್ಥಾಪನೆ.
೪)೦ ಆರೋಗ್ಯ ಮಾಹಿತಿ ಸೇವೆ – ಪ್ರತಿ ನಾಗರಿಕರ ಸಂಪೂರ್ಣ ಆರೋಗ್ಯ ಮಾಹಿತಿ ಸಂಗ್ರಹ, ಶೇಖರಣೆ ಮತ್ತು ಈ ಮಾಹಿತಿ ಅವರಿಗೆ ಜೀವನ ಪರ್ಯಂತ ಲಭ್ಯ.
3. ಶಿಕ್ಷಣ
ಸರ್ವರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ
● ● ಸರ್ಕಾರಿ ಶಾಲೆ/ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಗೆ ಕಡಿವಾಣ. ಎಲ್ಲಾ ಸರ್ಕಾರಿ ಶಾಲಾ ಕೊಠಡಿಗಳನ್ನು ಸ್ಮಾರ್ಟ್ ಕೊಠಡಿಗಳನ್ನಾಗಿ ಪರಿವರ್ತನೆ.
ಎಲ್ಲಾ ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಉತ್ತಮ ಶೌಚಾಲಯಗಳ ನಿರ್ಮಾಣ.
ವಿಶ್ವದರ್ಜೆಯ ವಿಶ್ವವಿದ್ಯಾಲಯಗಳ ನಿರ್ಮಾಣ. ಜಗತ್ತಿನ ಟಾಪ್ 100 ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕದ ಕನಿಷ್ಠ ಒಂದು ವಿಶ್ವವಿದ್ಯಾಲಯ ಇರುವಂತೆ ಅವುಗಳನ್ನು ಅಭಿವೃದ್ಧಿಪಡಿಸುವುದು.
● ಉನ್ನತ ಶಿಕ್ಷಣಕ್ಕೆ ಕಾಯಕಲ್ಪ. ವಿಶ್ವವಿದ್ಯಾಲಯಗಳ ಆಡಳಿತ ಸುಧಾರಣೆ. ಸಂಶೋಧನಾ ಕೇಂದ್ರಿತ ಶಿಕ್ಷಣಕ್ಕೆ ಆದ್ಯತೆ
ವಿಶ್ವವಿದ್ಯಾಲಯಗಳು ಯುವ ಜನತೆಯ ವ್ಯಕ್ತಿತ್ವ ವಿಕಸನ ಮತ್ತು ಜ್ಞಾನಾರ್ಜನೆಗಳ ಕೇಂದ್ರಗಳಾಗಿ ಮಾರ್ಪಾಡು. ಕೌಶಲ್ಯ ಮತ್ತು ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿ ● ●
ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಉಚಿತ ಬಸ್ ಪಾಸ್, ಬಸ್ ಸೌಲಭ್ಯ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ಸೌಲಭ್ಯ. ●
ಪ್ರತೀ ತಾಲ್ಲೂಕಿನಲ್ಲಿ ಉತ್ತಮ ಗುಣಮಟ್ಟದ ವಿದ್ಯಾರ್ಥಿನಿಲಯಗಳ ನಿರ್ಮಾಣ ಮತ್ತು ನಿರ್ವಹಣೆ. • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲಾ ಪದವೀಧರ ವಿದ್ಯಾರ್ಥಿಗಳಿಗೆ ಮಾಸಿಕ ಭತ್ಯೆ. ●
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಮತ್ತು ಪ್ರಶ್ನಿಸುವ ಮನೋಭಾವ ಹುಟ್ಟು ಹಾಕಲು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ವಿದ್ಯಾರ್ಥಿ ಪ್ರತಿನಿಧಿಗಳ ನೇಮಕ.
“ಇಂಟರ್ನಲ್ ಮಾರ್ಕ್ಸ್” ವ್ಯವಸ್ಥೆ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆ ಆಗದಂತೆ ವಿದ್ಯಾರ್ಥಿ ಪರವಾದ ವ್ಯವಸ್ಥೆ ನಿರ್ಮಾಣಕ್ಕೆ ಕ್ರಮ.
ವಿದ್ಯಾರ್ಥಿಗಳಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣಕ್ಕೆ ಮತ್ತು ದೇಶಪ್ರೇಮ ಮೈಗೂಡಿಸಲು NSS ಮಾದರಿಯ ಯೋಜನೆ. ●
• ಉತ್ತಮ ಶಿಕ್ಷಕರನ್ನು ತಯಾರಿಸಲು ಪ್ರತೀ ಜಿಲ್ಲೆಯಲ್ಲಿ ಸರ್ಕಾರಿ ಬಿ.ಎಡ್. ಕಾಲೇಜುಗಳ ಸ್ಥಾಪನೆ ಕಾಲೇಜುಗಳ ಎಲ್ಲಾ ಖಾಯಂ ಸಿಬ್ಬಂದಿಗೆ ಪಿಂಚಣಿ ಯೋಜನೆ.
ಖಾಸಗಿ ಅನುದಾನಿತ ಶಾಲಾ –
ಇಂಗ್ಲೀಷನ್ನು ಒಂದನೇ ತರಗತಿಯಿಂದ ಭಾಷೆಯನ್ನಾಗಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲಿಸಲಾಗುವುದು.
ಪರವಾನಗಿಯಿಲ್ಲದ ಖಾಸಗಿ ಶಾಲೆಗಳಿಗೆ ಸಂಪೂರ್ಣ ಕಡಿವಾಣ
4. ಕೃಷಿ
● ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ಧತಿ ಜಾರಿ, ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ಮೂಲಕ ಉತ್ತಮ ಬೆಲೆ ಖಾತ್ರಿ,
• ಕೃಷಿ ಉತ್ಪನ್ನಗಳಿಗೆ ಮೂಲದಲ್ಲಿಯೇ ಮೌಲ್ಯವರ್ಧನೆಗೆ ಯೋಜನೆಗಳು (Value Addition at Source)
ಕೃಷಿ ಆಧಾರಿತ ಕೈಗಾರಿಕೆಗಳಿಗೆ ಮತ್ತು ರಸ್ತಿಗೆ ಉತ್ತೇಜನ ●
● ರೇಷ್ಮೆ ಕೃಷಿಗೆ ಕಾಯಕಲ್ಪ, ರಾಜ್ಯದಲ್ಲಿ ಉತ್ಕೃಷ್ಣ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಕ್ರಮ ಮತ್ತು ಉತ್ತೇಜನ, ರೈತರಿಗೆ ಉತ್ತಮ ಬೆಲೆ.
ತಂತ್ರಜ್ಞಾನ ಬಳಕೆ ಮೂಲಕ ಆಲೆಮನೆಗಳ ಆಧುನೀಕರಣಕ್ಕೆ ನೆರವು, ಬೆಲ್ಲದ ಮೌಲ್ಯವರ್ಧನೆಗೆ ಕ್ರಮ.
೫) ● ಶಾಶ್ವತ ಆವರ್ಥ ನಿಧಿ ಸ್ಥಾಪನೆ – ಬೆಲೆ ಕುಸಿತದ ಸಂದರ್ಭದಲ್ಲಿ ಜೀವನಾವಶ್ಯಕ ಬೆಏಲಗಳನ್ನು ನಿಗದಿತ ಬೆಲೆಗೆ ಸರ್ಕಾರವೇ ಕೊಂಡುಕೊಳ್ಳುತ್ತದೆ.
● ಎಪಿಎಂಸಿ ಮಾರುಕಟ್ಟೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ, ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲಾಗುವುದು, ರೈತರಿಗೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ.
● ಕಬ್ಬು ಬೆಳೆಗಾರರಿಗೆ ಕಬ್ಬು ಸರಬರಾಜು ಆದ ತಕ್ಷಣ ಹಣ ಪಾವತಿ, ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸದಿದ್ದರೆ, ಸರ್ಕಾರ ರೈತರಿಗೆ ನೇರವಾಗಿ ಪಾವತಿ ಮಾಡಿ, ನಂತರ ಕಾರ್ಖಾನೆಗಳಿಂದ ಬಡ್ಡಿ ಸಮೇತ ವಸೂಲಿ ಮಾಡುತ್ತದೆ. ಸರ್ಕಾರ ಖರೀದಿಸುವ ಕೃಷಿ ಉತ್ಪನ್ನಗಳಿಗೆ ತಕ್ಷಣವೇ ಹಣ ಪಾವತಿ.
ಆಧುನಿಕ ಕೃಷಿ ಉಪಕರಣ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಲು ರೈತ ಸಂಪರ್ಕ ಕೇಂದ್ರಗಳಲ್ಲಿ ತರಬೇತಿ ಮತ್ತು ಪ್ರಾತ್ಯಕ್ಷತೆ ಕೇಂದ್ರಗಳ ಸ್ಥಾಪನೆ.
ಸಹಕಾರ ಸಂಘಗಳಲ್ಲಿ ನಿಗಧಿತ ಬೆಲೆಯಲ್ಲಿ ಗೊಬ್ಬರ ಸಿಗುವಂತೆ ಕ್ರಮ, ರೈತರ ಸುಲಿಗೆಗೆ ಮತ್ತು ಕಳಪೆ ಬೀಜದ ಹಾವಳಿಗೆ ಕಡಿವಾಣ.
ಮಣ್ಣಿನ ಫಲವತ್ತತೆ ಸಂರಕ್ಷಣೆ ಮತ್ತು ವೃದ್ಧಿಗೆ ಕ್ರಮ. ರಾಸಾಯನಿಕ ರಹಿತ ವ್ಯವಸಾಯಕ್ಕೆ ಉತ್ತೇಜನ.
ರಾಜ್ಯದ ಪಾಲಿನ ನೀರಿನ ಸದ್ಬಳಕೆಗೆ ಕ್ರಮ, ಹೆಚ್ಚುವರಿ ನದಿ ನೀರಿನ್ನು ಕೆರೆಗಳಿಗೆ ತುಂಬಿಸುವ ರಾಜ್ಯವ್ಯಾಪಿ ಯೋಜನೆ
ಜಾರಿ, ಕೆರೆಗಳ ಒತ್ತುವರಿ ತೆರವಿಗೆ ಮತ್ತು ಕೆರೆ-ಕಟ್ಟೆಗಳ ಹೂಳೆತ್ತಲು ಕ್ರಮ. ಅಂತರ್ಜಲ ವೃದ್ಧಿಗೆ ವೈಜ್ಞಾನಿಕ ಕಾರ್ಯಸೂಚಿ.
ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ನೀರಾವರಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ನೀರಾವರಿ ಕ್ಷೇತ್ರ ವಿಸ್ತರಣೆ. ವ್ಯಾಪಕ ಹನಿ ನೀರಾವರಿ ಯೋಜನೆ ಮೂಲಕ ರಾಜ್ಯದ ಜಲ ಸಂಪನ್ಮೂಲದ ರಕ್ಷಣೆ,
● ಕುರಿ, ಕೋಳಿ, ಹೈನುಗಾರಿಕೆ ಮತ್ತು ಇತರೆ ಉಪಕಸುಬುಗಳಿಗೆ ಹಾಗು ಗುಡಿ ಕೈಗಾರಿಕೆಗಳಿಗೆ ಆಧುನಿಕ ಸರಳ ತಂತ್ರಜ್ಞಾನ ಅಳವಡಿಕೆಗೆ ನೆರವು ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ಮತ್ತು ಸ್ಥಳೀಯವಾಗಿ ಮೌಲ್ಯವರ್ಧನೆಗೆ ಕ್ರಮ.
ರೈತರಿಗೆ ಉತ್ತಮ ಗುಣಮಟ್ಟದ, ಕನಿಷ್ಠ 12 ತಾಸು ಮತ್ತು ಹಗಲಿನಲ್ಲಿ ವಿದ್ಯುತ್ ಸರಬರಾಜು.
● ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ, ಯೋಜನೆಯನ್ನು ವ್ಯಾಪಕವಾಗಿ ಬಳಸಿಕೊಂಡು, ಗ್ರಾಮೀಣ ಭಾಗದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕ್ರಮ,
● ರಾಜ್ಯದೆಲ್ಲೆಡೆ ಕೈಗಾರಿಕೆಗಳಿಗೆ ಮತ್ತು ರಸ್ತೆ ವಿಸ್ತರಣೆ ಹೆಸರಿನಲ್ಲಿ ಅನಾವಶ್ಯಕವಾಗಿರುವ ಭೂಸ್ವಾಧೀನಗಳನ್ನು ರದ್ದು ಮಾಡಲಾಗುವುದು. ಸಾರ್ವಜನಿಕ ಹಿತಾಸಕ್ತಿಯಿಂದ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ರೈತರಿಗೆ ನ್ಯಾಯಯುತ ಪರಿಹಾರ ನೀಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರದ ನಿಗ್ರಹ. ಗೋಮಾಳ ಮತ್ತು ಸರ್ಕಾರಿ
ಜಮೀನುಗಳ ಒತ್ತುವರಿ ತೆರವು, ತೆರವಾದ ಭೂಮಿ ಅರ್ಹ ಬಗರ್ಹುಕುಂ ರೈತರಿಗೆ ಹಂಚಿಕೆ.
• ಸಮಗ್ರ ಬರ ನಿರ್ವಹಣೆ ಮತ್ತು ಪ್ರವಾಹ ನಿಗ್ರಹಕ್ಕೆ ಕ್ರಮ. ಬಯಲು ಸೀಮೆ ನೀರಾವರಿ ಕ್ಷೇತ್ರಕ್ಕೆ ಆದ್ಯತೆ.
5. ಮಹಿಳೆ ಮತ್ತು ಕುಟುಂಬ ಕಲ್ಯಾಣ
● ● ● ರಾಜ್ಯದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗಾಗಿ ಹಾಗು ಬಡತನ ನಿರ್ಮೂಲನೆಗಾಗಿ ಮದ್ಯ ನಿಷೇಧ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಮಹಿಳಾ ಉದ್ಯಮಿಗಳಿಗಾಗಿ ತಾಲ್ಲೂಕಿಗೊಂದು Incubation Center ಸ್ಥಾಪನೆ. ಅಗತ್ಯ ತರಬೇತಿ/ತಂತ್ರಜ್ಞಾನ/ಮಾರುಕಟ್ಟೆ ಕಲ್ಪಿಸಲಾಗುವುದು. ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉದ್ಯೋಗನಿರತ ಮಹಿಳೆಯರಿಗೆ ತಾತ್ಕಾಲಿಕ ಹಾಸ್ಟೆಲ್ ವ್ಯವಸ್ಥೆ ಮತ್ತು
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಸಾಂತ್ವನ ಕೆಂದ್ರಗಳ ಸ್ಥಾಪನೆ.
● ಖಾಸಗಿ ಕಂಪನಿಗಳಲ್ಲಿ Maternity leave ವಿಸ್ತರಿಸಲು ಪ್ರೋತ್ಸಾಹ ಮತ್ತು ಸಬ್ಸಿಡಿ.
● ನಗರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿರುವ ಹೈಟೆಕ್ ಡೇ ಕೇರ್ ಸ್ಥಾಪನೆ.
ಅಂಗನವಾಡಿ ಕೇಂದ್ರಗಳಿಗೆ ಆಧುನಿಕ ಸ್ಪರ್ಶ – ಡೇ ಕೇರ್ ಕೇಂದ್ರಗಳಾಗಿ ಪರಿವರ್ತನೆ.
ವೃದ್ಧರಿಗಾಗಿ ಸಹಾಯ ಕೇಂದ್ರ ಮತ್ತು ವಿಶ್ರಾಂತಿ ಧಾಮ.
ಅಂಗವಿಕಲರಿಗೆ ವೃತ್ತಿ ಕೈಗೊಳ್ಳಲು ಮತ್ತು ಉದ್ಯೋಗಾವಕಾಶ ಸೃಷ್ಠಿ, ಅವರಿಗೆ ಉತ್ಕೃಷ್ಟ ಉಚಿತ ಶಿಕ್ಷಣ ಮತ್ತು ತರಬೇತಿ.
6. ಯುವಜನತೆ ಮತ್ತು ಉದ್ಯೋಗ
ಪ್ರಸ್ತುತ ಖಾಲಿ ಇರುವ 3 ಲಕ್ಷ ಸರ್ಕಾರಿ ಹುದ್ದೆಗಳನ್ನು ಭ್ರಷ್ಟಾಚಾರರಹಿತವಾಗಿ ಪಾರದರ್ಶಕ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುವುದು. ಖಾಸಗಿ ವಲಯದಲ್ಲೂ ಹೆಚ್ಚಿನ ಉದ್ಯೋಗ ಸೃಷ್ಠಿಗೆ ಪ್ರೋತ್ಸಾಹ
KPSCಗೆ ಕಾಯಕಲ್ಪ – ಹೂಟ ಸಮಿತಿ ಶಿಫಾರಸ್ಸು ಸೇರಿದಂತೆ ಇತರ ಕ್ರಮಗಳ ಮೂಲಕ ಕರ್ನಾಟಕ ಲೋಕ ಸೇವಾ ಆಯೋಗವನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತ ಸಂಸ್ಥೆಯಾಗಿ ಪರಿವರ್ತನೆ. KPSC ಅಧ್ಯಕ್ಷರ ಮತ್ತು ಸದಸ್ಯರ ಸ್ಥಾನಗಳಿಗೆ ದಕ್ಷ, ಪಾಮಾಣಿಕ ಮತ್ತು ಯೋಗ್ಯರನ್ನು ನೇಮಿಸಲಾಗುವುದು.
ಯುವಜನರ ಶ್ರೇಯೋಭಿವೃದ್ಧಿಗಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುವುದು;
ಸರ್ಕಾರದಲ್ಲಿನ ಗುತ್ತಿಗೆ ನೌಕರಿ ಪದ್ಧತಿಯನ್ನು ರದ್ದುಪಡಿಸಲಾಗುವುದು ಮತ್ತು ಅರ್ಹ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗುವುದು.
ಕೆಎಎಸ್ ಸೇರಿದಂತೆ ಸರ್ಕಾರದ ಎಲ್ಲಾ ನೇಮಕಾತಿಗಳನ್ನು UPSC ಮಾದರಿಯಲ್ಲಿ ಪ್ರತಿ ವರ್ಷ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ,
ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಪೂರ್ಣಾವಧಿ ಶಿಕ್ಷಕ/ಉಪನ್ಯಾಸಕರ ನೇಮಕಾತಿಗೆ ಆದ್ಯತೆ.
ಸರ್ಕಾರಿ ಉದ್ಯೋಗ ಪೋರ್ಟಲ್ ಮೂಲಕ ಸರ್ಕಾರದ ಎಲ್ಲಾ ಉದ್ಯೋಗಗಳ ಮಾಹಿತಿ ಮತ್ತು ರಾಜ್ಯದಲ್ಲಿನ
ಉದ್ದಿಮೆಗಳ, ಒಕ್ಕೂಟ (ಕೇಂದ್ರ) ಸರ್ಕಾರದ ಉದ್ಯೋಗ ಲಭ್ಯತೆಯ ಮಾಹಿತಿಯನ್ನು ನಿರಂತರವಾಗಿ ಒದಗಿಸಲಾಗುವುದು.
ರಾಜ್ಯದ ಆರು ವಿಭಾಗಗಳಲ್ಲಿ (ಬೆಂಗಳೂರಿನಿಂದ ಹೊರಗೆ) ಕ್ರೀಡಾ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ. ಯುವಜನರ ಭವಿಷ್ಯಕ್ಕೆ ಮಾರಕವಾಗಿರುವ ಮಾದಕ ವಸ್ತುಗಳ ಮಾರಾಟ/ಸರಬರಾಜು, ಜೂಜು, ಬೆಟ್ಟಿಂಗ್ ದಂಧೆಗಳಿಗೆ ಸಂಪೂರ್ಣ ಕಡಿವಾಣ.
ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 2000 ರೂಪಾಯಿ ನಿರುದ್ಯೋಗ ಭತ್ಯೆ/ಮಾಸಾಶನ,
ಯುವಜನರು ಕೃಷಿ ಮತ್ತು ಹೈನುಗಾರಿಕೆಯಂತಹ ಸ್ವಯಂಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು ಕೃಷಿ ಮತ್ತು ಹೈನುಗಾರಿಕೆಯನ್ನು ಸ್ಟಾರ್ಟ್ ಅಪ್’ಗಳೆಂದು ಪರಿಗಣಿಸಿ, ಆರ್ಥಿಕ ಉತ್ತೇಜನ ನೀಡಲಾಗುವುದು.
ಪ್ರತಿ ಗ್ರಾಮ ಪಂಚಾಯ್ತಿಗೊಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು. ಅಯಾ ಜಿಲ್ಲೆಯಲ್ಲಿನ ಕ್ರೀಡಾ ವೈಶಿಷ್ಟತೆಗೆ ಅನುಸಾರವಾಗಿ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣ ಮತ್ತು ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ.
ಕ್ರೀಡೆಗಳಲ್ಲಿ ಆಸಕ್ತಿ ಮತ್ತು ಸಾಮರ್ಥ್ಯವಿರುವ ಯುವಜನರಿಗೆ ಶಾಲೆಯಿಂದ ವಿಶ್ವವಿದ್ಯಾಲಯ ಹಂತದವರೆಗೆ ಪ್ರತ್ಯೇಕ ಕ್ರೀಡಾ ಶಿಕ್ಷಣ ವ್ಯವಸ್ಥೆ ಮಾಡಿ, ನಿಯಮಿತವಾಗಿ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಿ ಉತ್ತೇಜಿಸಲಾಗುವುದು ಮತ್ತು ನಿರಂತರವಾಗಿ ಸಾಮರ್ಥ್ಯವುಳ್ಳ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮತ್ತು ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಉತ್ತಮ ಕ್ರೀಡಾ ಸವಲತ್ತು ಒದಗಿಸಲಾಗುವುದು
10ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ನಿರಂತರವಾಗಿ ವೃತ್ತಿ ಮತ್ತು ಶೈಕ್ಷಣಿಕ ಮಾರ್ಗದರ್ಶನ ನೀಡಲಾಗುವುದು. ಪ್ರತಿ ವಿದ್ಯಾರ್ಥಿಯ ಆಸಕ್ತಿ ಮತ್ತು ಅವರ ಪ್ರತಿಭೆಯ ಬಗ್ಗೆ ಮಾಹಿತಿ ಸಂಗ್ರಹಿ, ಅದರ ಆಧಾರದ ಮೇಲೆ ಅವರಿಗೆ ಮತ್ತು ಅವರ ಪೋಷಕರಿಗೆ ಮಾರ್ಗದರ್ಶನ ನೀಡಿ, ಸೂಕ್ತ ಆಯ್ಕೆ ಮಾಡಿಕೊಂಡು ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಮಾಡಿಕೊಡಲಾಗುವುದು.
ಗ್ರಾಮೀಣ ಭಾಗದ ಯುವಜನರನ್ನು ಸ್ವಾವಲಂಬಿಗಳನ್ನಾಗಿಸಲು ಪ್ರತಿ ಹೋಬಳಿಗೊಂದು ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.
UPSC, ಬ್ಯಾಂಕ್ ಸೇರಿದಂತೆ ಒಕ್ಕೂಟ ಸರ್ಕಾರದ ನೇಮಕಾತಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯುವಂತೆ ಮಾಡಲು ಕ್ರಮ ಮತ್ತು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗುವಂತೆ ಯೋಜನೆ.
ಪ್ರಾದೇಶಿಕತೆ – ಕನ್ನಡ, ಕಲೆ, ಸಾಹಿತ್ಯ
ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ.
ಸರ್ಕಾರದ ಸೌಲಭ್ಯದೊಂದಿಗೆ ಸ್ಥಾಪಿತವಾಗುವ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳಲ್ಲಿ 80% ಮೀಸಲಾತಿ.
ರಾಜ್ಯದ ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೆ ಆದ್ಯತೆ.
ಜಾನಪದ ಮತ್ತು ರಂಗಭೂಮಿ ಕಲಾವಿದರಿಗೆ ಮಾಶಾಸನ ಮತ್ತು ಪಿಂಚಣಿ ಸೌಲಭ್ಯ.
● ಜಾನಪದ ಕಲೆ ಸೇರಿದಂತೆ ಲಲಿತ ಕಲೆಗಳ ಕಲಿಕೆಗೆ ಶಾಲೆ ಕಾಲೇಜುಗಳಲ್ಲಿ ಅವಕಾಶ, ಕಲಾವಿದರನ್ನು ಶಿಕ್ಷಕರಾಗಿ ನೇಮಕ ಮಾಡಲು ಕ್ರಮ.
ಸರ್ಕಾರದ ಎಲ್ಲಾ ಹಂತದಲ್ಲೂ ಕನ್ನಡ ಬಳಕೆ. ಎಲ್ಲಾ ಶಾಲೆಗಳಲ್ಲಿ ಕನ್ನಡ ಕಲಿಕೆ.
ನ್ಯಾಯಾಂಗದ ಪ್ರತಿ ಹಂತದಲ್ಲಿಯೂ ಕನ್ನಡ ಬಳಕೆಗೆ ಕ್ರಮ.
ಪ್ರತೀ ಗ್ರಾಮಕ್ಕೊಂದು ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ.
● ರಾಜ್ಯದ ಎಲ್ಲಾ ಸ್ಮಾರಕಗಳ, ಪ್ರಾಚೀನ ದೇವಾಲಯಗಳ ಸಂರಕ್ಷಣೆ ಮತ್ತು ಜೀರ್ಣೋದ್ದಾರ – ರಾಜ್ಯದ ಸಾವಿರಾರು ಹಳ್ಳಿಗಳಲ್ಲಿ ಐತಿಹಾಸಿಕ ಸ್ಮಾರಕಗಳು ಮತ್ತು ದೇವಸ್ಥಾನಗಳು ಹಾಳಾಗಿ ಬೀಳುವ ಸ್ಥಿತಿ ತಲುಪಿವೆ. ಅತಿಕ್ರಮಣಕ್ಕೆ ಒಳಗಾಗಿವೆ. ಇವೆಲ್ಲವುಗಳ ಸಂರಣೆಗೆ ಕ್ರಿಯಾಯೋಜನೆ.
● ವಿದೇಶಗಳಲ್ಲಿ ಮತ್ತು ದೇಶದ ಅನ್ಯ ರಾಜ್ಯಗಳಲ್ಲಿ ಬಸವತತ್ವ ಮತ್ತು ಕುವೆಂಪು ವಿಶ್ವಮಾನವ ತತ್ವ ಪ್ರಸಾರಕ್ಕೆ ಯೋಜನೆ. ಹೊರನಾಡ ಕನ್ನಡಿಗರಿಗೆ ನೆರವು, ಹೊರನಾಡಿನಲ್ಲಿ ಕನ್ನಡ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ.
● ● ಬೆಂಗಳೂರಿನಲ್ಲಿ ವಾರ್ಡ್ ಮಟ್ಟದಲ್ಲಿ ಮತ್ತು ಶಾಲೆಗಳಲ್ಲಿ ಕನ್ನಡ ಬಾರದ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ. ಕನ್ನಡದ ಭಾಷಾ ಸಂಶೋಧನೆಗೆ ಒತ್ತು, ಕನ್ನಡ ಶಾಸ್ತ್ರೀಯ ಭಾಷಾ ಸಂಶೋಧನಾ ಕೇಂದ್ರಕ್ಕೆ ಹೆಚ್ಚಿನ ಅನುದಾನ ಮತ್ತು ನಿರಂತರ ಕಾರ್ಯಯೋಜನೆ,
ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒತ್ತು ಮತ್ತು ಕನ್ನಡ ತಂತ್ರಾಂಶದಲ್ಲಿ ಎಐ ಬಳಕೆಗೆ ಕ್ರಮ, ಕನ್ನಡ ತಂತ್ರಾಂಶದ ಅಭಿವೃದ್ಧಿಯಲ್ಲಿ ತೊಡಗಿರುವ ರಾಜ್ಯದಲ್ಲಿನ ಖಾಸಗಿ ಕಂಪನಿಗಳಿಗೆ ಪ್ರೋತ್ಸಾಹ.
● ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ನಾಡಿನ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
8. ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ
● ಭ್ರಷ್ಟಾಚಾರ ಮತ್ತು ಅನಾವಶ್ಯಕ ಯೋಜನೆಗಳು ವ್ಯಾಪಕ ಪರಿಸರ ನಾಶಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಪರಿಸರ ಸಂರಕ್ಷಣೆಯ ಆಧ್ಯತೆಯೊಂದಿಗೆ ಸಮತೋಲಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ
ಯೋಜನಾ ಹಂತದಲ್ಲಿರುವ ಯೋಜನೆಗಳ ಅಗತ್ಯಗಳನ್ನು ಪರಿಶೀಲಿಸಿ ಅವಶ್ಯಕ ಯೋಜನೆಗಳನ್ನು ಉಳಿದವನ್ನು ಕೈಬಿಡಲಾಗುವುದು. ಉಳಿಸಿಕೊಂಡು
ಅರಣ್ಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಆದ್ಯತೆ. ರಾಜ್ಯಾದ್ಯಂತ ಸರ್ಕಾರಿ ಜಮೀನುಗಳಲ್ಲಿ ನೈಸರ್ಗಿಕ ಅರಣ್ಯ ಅಭಿವೃದ್ಧಿಗೆ ಒತ್ತು.
ಮನೆಗಳಲ್ಲಿ ಸೌರ ವಿದ್ಯುತ್ ಅಳವಡಿಸಿಕೊಳ್ಳಲು ಸಬ್ಸಿಡಿ ಮತ್ತು ವ್ಯಾಪಕ ಬಳಕೆಗೆ ಉತ್ತೇಜನ.
● ● ಕಟ್ಟುನಿಟ್ಟಾಗಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಮತ್ತು ರಾಜ್ಯದ ಪ್ರತಿ ಕೆರೆ/ಬಂಜರು ಭೂಮಿಗಳಲ್ಲಿ ಸೌರ ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ಸ್ಥಳೀಯವಾಗಿ ಪರಿಸರ ಸ್ನೇಹಿ
ಪ್ಲಾಸ್ಟಿಕ್ ಕವರ್ ಬಳಕೆಗೆ ಸಂಪೂರ್ಣ ಕಡಿವಾಣ.
ವಿದ್ಯುತ್ ಉತ್ಪಾದನೆಗೆ ಆದ್ಯತೆ. ಕಾಲಮಿತಿಯಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಮೇಲೆ ಅವಲಂಬನೆ ನಿರ್ಮೂಲ. ಮರಳು ನೀತಿ ಪರಿಷ್ಕರಣೆ – ಸರ್ಕಾರವೇ ನೇರವಾಗಿ ಮರಳು ಮಾರಾಟ ಮಾಡುವುದು ಮತ್ತು ಅಕ್ರಮ ಮರಳು ಗಣಿಗಾರಿಕೆಗೆ ಸಂಪೂರ್ಣ ತಡೆ.
ಕಾಡಿನ ಆದಿವಾಸಿಗಳ ಅರಣ್ಯ ಹಕ್ಕು ಸಮಸ್ಯೆಗೆ ಪರಿಹಾರ.
● ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಯೋಜಿತ ಕಾರ್ಯಕ್ರಮ ಮತ್ತು ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಕಡಿವಾಣ.
ರಾಜ್ಯ ಸರ್ಕಾರದ ಯಾವುದೇ ರಸ್ತೆ/ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಇಲ್ಲ.
● ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರ ಕಡಿತ. ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ. ಸಾರಿಗೆ ಸಂಸ್ಥೆಗಳಲ್ಲಿಯ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣ.
● ವಿದ್ಯುತ್ ದರ ಇಳಿಕೆ. ರಾಜ್ಯದ ವಿದ್ಯುತ್ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ, ಸೋರಿಕೆ ಇದ್ದು, ಜೊತೆಗೆ ವಿದ್ಯುತ್ ನಿಗಮಗಳು ಬಿಳಿಯಾನೆಯಂತಾಗಿವೆ. ದಕ್ಷ ಮತ್ತು ಪಾರದರ್ಶಕ ಆಡಳಿತದಿಂದ ಭ್ರಷ್ಟಾಚಾರ ಮತ್ತು ಸೋರಿಕೆಯನ್ನು ತಡೆಗಟ್ಟಿ, ವಿದ್ಯುತ್ ದರವನ್ನು 25-30 % ಕಡಿತಗೊಳಿಸಲಾಗುವುದು.
● ಪ್ರತಿ ಹಳ್ಳಿಗೂ ಶುದ್ಧ ನದಿ ಮೂಲದ ಕುಡಿಯುವ ನೀರು.
● ಗಣಿ ಬಾಧಿತ ಪ್ರದೇಶಗಳ ಪುನರುಜೀವನ
● ಸರ್ವರಿಗೂ ಸೂರು ಸರ್ಕಾರದ ವಸತಿ ಯೋಜನೆಗಳು ಬಹುತೇಕ ಅನರ್ಹರ ಪಾಲಾಗುತ್ತಿದ್ದು, ಇದಕ್ಕೆ ತಡೆಯೊಡ್ಡಿ, ಇಡೀ ರಾಜ್ಯದಲ್ಲಿ “ಸೂರು” ಯೋಜನೆಯಡಿಯಲ್ಲಿ ಪ್ರತಿಯೊಂದು ಕುಟುಬಂಕ್ಕೂ ಸುರಕ್ಷಿತ ಮನೆ ಒದಗಿಸಲಾಗುವುದು.
● ಬಿಡಿಎ ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಅಕ್ರಮಗಳಿಗೆ ತಡೆ. ಅರ್ಹ ನಿವೇಶನರಹಿತರಿಗೆ ಮಾತ್ರ ನಿವೇಶನ.
● ಪ್ರವಾಹ ಮತ್ತು ಇತರೆ ಪ್ರಕೃತಿ ವಿಕೋಪದಳಿಂದ ಮನೆ ಕಳೆದುಕೊಂಡವರಿಗೆ ತಕ್ಷಣದಲ್ಲೇ ಅನುದಾನ ಬಿಡುಗಡೆಗೆ ಕ್ರಮ, ಭ್ರಷ್ಟಾಚಾರಕ್ಕೆ ತಡೆ.
● ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಮತ್ತು ಆ ಮೂಲಕ ಲಕ್ಷಾಂತರ ಕೋಟಿ ಅಕ್ರಮ ಅವ್ಯವಹಾರಕ್ಕೆ ಕಡಿವಾಣ ಮತ್ತು ಶೀಘ್ರವಾಗಿ ನಿವೇಶನ ಲಭಿಸುವಂತೆ ಕ್ರಮ. ಖಾಸಗಿ ಲೇಔಟ್ ಕಾನೂನು ಬದ್ಧವಾಗಿ ನಿರ್ಮಾಣಕ್ಕೆ ಕ್ರಮ ಮತ್ತು ರಿಯಲ್ ಎಸ್ಟೇಟ್ ಅಕ್ರಮಗಳಿಗೆ ತಡೆ.
ದುರ್ಬಲ ವರ್ಗಕ್ಕೆ ಮನೆ ನಿರ್ಮಾಣಕ್ಕೆ ಸುಲಭ ಸಾಲ ಸೌಲಭ್ಯ.
ಗ್ರಾಮೀಣಾಭಿವೃದ್ಧಿ
● ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಾಯಕಲ್ಪ, ಪಂಚಾಯತ್ ರಾಜ್ ಕಾಯ್ದೆಯ ಆಶಯಗಳ ಜಾರಿ, ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ – ಗ್ರಾಮಸ್ವರಾಜ್ಯ ಸ್ಥಾಪನೆಗೆ ಕ್ರಮ.
ಕಡ್ಡಾಯವಾಗಿ ಗ್ರಾಮಸಭೆ ಮತ್ತು ವಾರ್ಡ್ ಸಭೆ ನಡೆಸಲು ಕ್ರಮ.
● ಗ್ರಾಮಗಳಲ್ಲಿ ಉತ್ತಮ ಮತ್ತು ಸುಸಜ್ಜಿತ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಗ್ರಾಮೀಣ ಭಾಗದಲ್ಲಿ, ನೈರ್ಮಲ್ಯತೆಗೆ ಆದ್ಯತೆ, ಸ್ವಚ್ಚ ಗ್ರಾಮಗಳ ನಿರ್ಮಾಣ.
ಗ್ರಾಮಗಳನ್ನು ಕಾಲಕಾಲಕ್ಕೆ ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸುವ ಕೆಲಸ, ಯುಜಿಡಿ ಮತ್ತು ಎಸ್ಟಿಪಿ ನಿರ್ಮಾಣ.
ನಗರಾಭಿವೃದ್ಧಿ
● ● ವಿಶ್ವದರ್ಜೆಯ ಯೋಜಿತ ನಗರ ನಿರ್ಮಾಣ ಮತ್ತು ನಗರದ ಆಸ್ತಿಗಳ ಸಂಪೂರ್ಣ ಡಿಜಿಟಲೀಕರಣ. ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಉತ್ತಮ ಪಾರ್ಕ್, ಆಟದ ಮೈದಾನ, ಮನೆತೋಟಕ್ಕೆ ಉತ್ತೇಜನ. ರಾಜ್ಯದ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಮತ್ತು ಯೋಜಿತ ನಗರ ಸಾರಿಗೆ ವ್ಯವಸ್ಥೆ. ಮೆಟ್ರೋ ಯೋಜನೆ ಜಾರಿ.
ಅವಶ್ಯಕತೆ ಇರುವೆಡೆಗಳಲ್ಲಿ ನಗರ ರೈಲು,
● ಹುಬ್ಬಳ್ಳಿ – ಧಾರವಾಡಕ್ಕೆ ಮೆಟ್ರೋ ಸಾರಿಗೆ ವ್ಯವಸ್ಥೆ.
● ಬೆಂಗಳೂರಿನ ಮೆಟ್ರೋ ಯೋಜನೆಯ ಎಲ್ಲಾ ಹಂತಗಳನ್ನು ಮತ್ತು ಬೆಂಗಳೂರಿನ ಎಲ್ಲಾ ದಿಕ್ಕುಗಳಿಗೂ ವಿಸ್ತರಿಸಿ ಇನ್ನು 8 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಮೆಟ್ರೋ ಟಿಕೆಟ್ ದರ ಇಳಿಕೆ.
● ಪ್ರಾದೇಶಿಕ ಅಸಮತೋಲನ ನಿವಾರಣೆ – ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು. ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಪರಿಣಾಮಕಾರಿ ಜಾರಿ ಮತ್ತು ಈ ಭಾಗಕ್ಕೆ ನೀಡುವ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿ, ಸಮಗ್ರ ಅಭಿವೃದ್ಧಿ.
ಉದ್ದಿಮೆ ಮತ್ತು ಸಂಘಟಿತ/ಅಸಂಘಟಿತ ಕಾರ್ಮಿಕರ ಕಲ್ಯಾಣ
● ಕರ್ನಾಟಕವನ್ನು ಉತ್ತಮ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತನೆ ಮತ್ತು ಗುಣಮಟ್ಟದ ಉತ್ಪನ್ನಗಳ ಉತ್ಪಾದನೆಗೆ ಪ್ರೋತ್ಸಾಹ.
● ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೆಐಎಡಿಬಿಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು. ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ತಂದು, ಕೇವಲ ಅರ್ಹ ಕೈಗಾರಿಕೋದ್ಯಮಿಗಳಿಗೆ ಮತ್ತು ಯುವ ಆಸಕ್ತ ಉದ್ಯಮಿಗಳಿಗೆ ತ್ವರಿತವಾಗಿ ಕೈಗಾರಿಕಾ ನಿವೇಶನ ಹಂಚಿಕೆ ಮಾಡಲಾಗುವುದು.
ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗುವುದು.
● ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಒತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ಅನಾವಶ್ಯಕ ತೊಂದರೆಗೆ ಕಡಿವಾಣ, ಕಾನೂನುಬದ್ಧ ಕೈಗಾರಿಕಾ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ.
ಉತ್ತಮ ನುರಿತ ಮತ್ತು ಕೌಶಲ್ಯ ಹೋದಿರುವ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕ್ರಮ.
ನೌಕರರ ಕೌಶಲ್ಯ ತರಬೇತಿ ಕಾರ್ಯಕ್ರಮದ ಮೂಲಕ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ.
● ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ನೀಡಿದವರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ. ಸಣ್ಣ ಕೈಗಾರಿಕೆಗಳಿಗೆ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ರಫ್ತು ಮಾಡಲು ಉತ್ತೇಜನ ಹಾಗೂ ಅಂತಾರಾಷ್ಟ್ರೀಯ ಪರಿಣಿತರಿಂದ ತರಭೇತಿ,
● ಕೈಗಾರಿಕೆಗಳಿಗೆ ಉತ್ತಮ ಗುಣಮಟ್ಟದ ತಡೆರಹಿತ ವಿದ್ಯುತ್ ಪೂರೈಕೆ.
● ಜಿಎಸ್ಟಿ ಮತ್ತು ಇ ವೇ ಬಿಲ್’ಗಳಲ್ಲಿ ಆಗುತ್ತಿರುವ ತೊಂದರೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ.
● ಚೆಕ್ಪೋಸ್ಟ್ಗಳಲ್ಲಿ ಭ್ರಷ್ಟಾಚಾರಕ್ಕೆ ಸಂಪೂರ್ಣ ನಿಯಂತ್ರಣ. ಪಾರದರ್ಶಕ ವ್ಯವಸ್ಥೆ ಜಾರಿ. ಸುಗಮ ಸಂಚಾರ/ಸಾಗಾಣಿಕೆಗೆ ಕ್ರಮ.
● ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರ ವಲಯಕ್ಕೆ – ಆಟೋ, ಟ್ಯಾಕ್ಸಿ, ಬಸ್, ಲಾರಿ ಚಾಲಕರು ಸೇರಿದಂತೆ ಎಲ್ಲಾ ವರ್ಗದವರಿಗೆ ESI ಮತ್ತು ಪಿಎಫ್ ಮಾದರಿ ಸೌಲಭ್ಯ.
ಕಾರ್ಮಿಕರ ಸಮಸ್ಯೆಗಳಿಗೆ ಕಾರ್ಮಿಕ ಇಲಾಖೆಯಿಂದ ಕಾಲಮಿತಿಯೊಳಗೆ ಇತ್ಯರ್ಥ.
Ola, Uber, Rapido ತರದ ಖಾಸಗಿ Appಗಳ ಕಾನೂನುಬಾಹಿರ ಮತ್ತು ಅಕ್ರಮ ವ್ಯವಹಾರಗಳ ಮೇಲೆ ಸಂಪೂರ್ಣ ನಿಯಂತ್ರಣ
ವಾಹನಗಳ ಪರ್ಮಿಟ್ ರಿನಿವಲ್ ದಂಧೆಯಿಂದ ಮುಕ್ತಿ ಮತ್ತು ಪ್ರಕ್ರಿಯೆಗಳ ಸರಳೀಕರಣ
ಟ್ರಾಫಿಕ್ ಪೊಲೀಸ್ ಹಾಗೂ RTO ಅಧಿಕಾರಿಗಳ ದೌರ್ಜನ್ಯಕ್ಕೆ ಕಡಿವಾಣ/ಅನಧಿಕೃತ RTO ಹಾಗೂ ಅನವಶ್ಯಕ ಟ್ರಾಫಿಕ್ ನಿಯಮಗಳ ಸಡಿಲಿಕೆ ಹಾಗೂ ಟ್ರಾಫಿಕ್ ಸಮಸ್ಯೆಗಳಿಗೆ ನಿಯಂತ್ರಣ.
ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ (ಡ್ರೈವರ್/ಕಂಡಕ್ಟರ್) ಸರ್ಕಾರಿ ನೌಕರರ ಸಮಾನ ವೇತನ ಮತ್ತು ಸೌಲಭ್ಯ ನೀಡಲಾಗುವುದು ಮತ್ತು ಸಂಸ್ಥೆಗಳಲ್ಲಿ ಉತ್ತಮ ಸೌಲಭ್ಯ ನೀಡಿ, ಕಿರುಕುಳ/ಶೋಷಣೆಗಳನ್ನು ತಪ್ಪಿಸಲಾಗುವುದು.
21ನೇ ಶತಮಾನದ ಸವಾಲುಗಳನ್ನು ಎದುರುಗೊಂಡು ಆಧುನಿಕ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಸದ್ಬಳಕೆಯ ಮೂಲಕ ಎಲ್ಲರಿಗೂ ಘನತೆಯ ಜೀವನವನ್ನು ಸಾಧ್ಯವಾಗಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಮತ್ತು ಕನ್ನಡ ಪರಂಪರೆಯ ಅಂಶಗಳನ್ನು ಅಳವಡಿಸಿಕೊಂಡು ಬಸವಣ್ಣನವರ ಆಶಯದ ಕಲ್ಯಾಣ ಕರ್ನಾಟಕ ಮತ್ತು ಕುವೆಂಪುರವರ ಆಶಯದ ಸರ್ವೋದಯ ಕರ್ನಾಟಕವನ್ನು ಕಟ್ಟಲು KRS ಪಕ್ಷದ ಪ್ರಣಾಳಿಕೆಯಲ್ಲಿ ಅದಕ್ಕೆ ಅಗತ್ಯವಾದ ಎಲ್ಲಾ ಯೋಜನೆ ಮತ್ತು ಕಾರ್ಯಸೂಚಿಗಳು ಇವೆ ಎನ್ನುವುದು ನಮ್ಮ ನಂಬಿಕೆ.
KRS ಪಕ್ಷದ ಈ ಚಾರಿತ್ರಿಕ ರಾಜಕೀಯ ಹೋರಾಟದಲ್ಲಿ ಕನ್ನಡ ನಾಡಿನ ನಾಡಿಗರೆಲ್ಲರೂ ಈ ಚುನಾವಣೆಯಲ್ಲಿ KRS ಪಕ್ಷವನ್ನು ಬೆಂಬಲಿಸುವ ಮತ್ತು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ನಮ್ಮೊಡನೆ ಕೈಜೋಡಿಸಬೇಕು ಎಂದು ನಾವು ವಿನಮ್ರವಾಗಿ ಕೋರುತ್ತೇವೆ. ಹೇಳಿಕೊಂಡಿದ್ದಾರೆ