ಏಪ್ರಿಲ್ 07. ಬೆಂಗಳೂರು ಪೂಜ್ಯ ಶ್ರೀ ಶ್ರೀ ಡಾ. ಬಸವಯೋಗಿ ಗುರೂಜಿಯವರ ಏಕತಾ ಫೌಂಡೇಶನ್ (ರಿ) ಬೆಂಗಳೂರು 2023ನೇ ಸಾಲಿನ ಏಕತಾ ಸಮಾಜ ಸೇವಾ ಶ್ರೀ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಜಂಗಮ ಸಮಾಜದ ಮುಖಂಡರು ಖ್ಯಾತ ಉದ್ದಮಿ ಹಾಗೂ ಶ್ರೀ ಜಗದ್ಗುರು ರಂಭಾಪುರಿ ಶ್ರೀಗಳ ಶಿಷ್ಯರಾದ ಶ್ರೀ ಬಾಳಯ್ಯ ಶಿ ಇಂಡಿಮಠ ಅವರನ್ನು ಏಕತಾ ಫೌಂಡೇಶನ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಡಾ. ಬಸವಯೋಗಿ ಗುರೂಜಿಯವರ ಆಯ್ಕೆ ಮಾಡಿದ್ದಾರೆ.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀಗಳು ನಮ್ಮ ಸಂಸ್ಥೆಯಿಂದ ನಡೆಯುವಂತಹ 2023 ನೇ ರಾಜ್ಯಮಟ್ಟದ ಏಕತಾ ಸಮಾಜ ಸೇವ ಪ್ರಶಸ್ತಿಗೆ ಶ್ರೀ ಬಾಳಯ್ಯ ಶಿ ಇಂಡಿಮಠ ಮುರುಗೇಶ್ ಪಾಳ್ಯ ಬೆಂಗಳೂರು ಇವರನ್ನು ಆಯ್ಕೆ ಮಾಡಿದ್ದೇವೆ ಇವರು ಕಾಯ ವಾಚ ಮನಸ್ಸು ತಮ್ಮನ್ನು ತಾವು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಾಡುತ್ತಿರುವ ಸೇವಾ ಸಾಧನೆಯನ್ನು ಗುರುತಿಸಿ ಇವರಿಗೆ 2020 ಏಕತಾ ಸಮಾಜ ಸೇವಶ್ರೀ ಎಂಬ ಈ ಪ್ರಶಸ್ತಿಯನ್ನು ಗೌರವ ಪೂರಕವಾಗಿ ನೀಡಿ ಅಭಿನಂದಿಸಲಾಗಿದೆ ತಮ್ಮ ಸೇವಾ ಸಾಧನೆಯ ನಿರಂತರವಾಗಿ ಸಾಗಲಿ ಹಾಗೂ ತಮ್ಮ ಬದುಕು ಆನಂದ ಆರೋಗ್ಯ ಮತ್ತು ಐಶ್ವರ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ