ಡಿ 10.ಸಿಂಧನೂರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ತಾಲೂಕ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಸಿಂಧನೂರಿನ ಜನಸ್ಪಂದನ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತಾನಾಡುತ್ತಾ ದಿನಾಂಕ 19/12/2023ರಂದು ವಿವಿದ ಕಾಮಗಾರಿಗಳ ಉಧ್ಘಾಟನೆಗೆ ಹಾಗೂ ವಿವಿದ ಕಾಮಾಗಾರಿಗಳ ಚಾಲನೆಗೆ ಸಿಂಧನೂರಿಗೆ ಆಗಮಿಸಲಿರುವ ಮಾನ್ಯ ಮುಖ್ಯಂತ್ರಿಗಳು ಶ್ರೀ ಸಿದ್ದರಾಮಯ್ಯ ನವರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ ರವರನ್ನು ಅದ್ದುರಿಯಾಗಿ ಸ್ವಾಗತವನ್ನು ಮಾಡಲು ತಾವೇಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಗತಿಸಲು ಸಿದ್ದರಾಗಲು ಕರೆ ನೀಡಿದರು.
Please subscribe and support my channel
https://www.youtube.com/@BadavaraBarakolu
ನಂತರ ಮುಂಬರುವ ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಯ ಕುರಿತು ಮಾತನಾಡುತ್ತಾ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಕರ್ತರೊಡನೆ ಚರ್ಚೆ ಅದಕ್ಕೆ ಬೇಕಾದಂತಹ ಪೂರ್ವ ತಯಾರಿ ಮಾಡಿಕೊಳ್ಳಲು ತಿಳಿಸಿದರು. ಈ ಸಂಬಂಧ ರಾಜ್ಯ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲರವರು ಹೇಳಿದಂತೆ ಸ್ಥಳಿಯ ಚುನಾವಣೆಯ ಟಿಕೇಟ್ ಗಳು 50-50 ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ ಅದರಂತೆ ತಾವುಗಳು ಸಿದ್ದರಾಗಿ ಎಂದು ಕರೆ ಕೊಟ್ಟರು. ತಮ್ಮಂತಹ ಸಾವಿರಾರು ಕಾರ್ಯಕರ್ತರ ಶ್ರಮ ಮತ್ತು ಆಶಾಯದಂತೆ ರಾಜ್ಯದಲ್ಲಿ ನಮ್ಮದೇ ಸರಕಾರ ಇರುವದರಿಂದ ಯಾವುದೇ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡಲು ನಿಮ್ಮ ಜೊತೆ ನಾನು ಸದಾ ಇದ್ದೇನೆ ಎನ್ನುವ ಭರವಸೆಯನ್ನು ಕಾರ್ಯಕರ್ತರಿಗೆ ನೀಡಿ ಕಾರ್ಯಕರ್ತರೊಂದಿಗೆ ಮುಕ್ತ ಚರ್ಚೆ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಿದರು.
ಈ ಸಂಧರ್ಭದಲ್ಲಿ ವೆಂಕಟೇಶ ರಾಗಲಪರ್ವಿ ಪ್ರಧಾನ ಕಾರ್ಯದರ್ಶಿ ಎಸ್ಟಿ ಸೆಲ್ , ಶಿವಕುಮಾರ ಜವಳಿ ಅಧ್ಯಕ್ಷರು ಸಿಂಧನೂರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ, ಯಂಕನಗೌಡ ಗಿಣಿವಾರ, ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್, ಖಾಜಾಹುಸೇನ್ ರವುಡಕುಂದ, ಹಬೀಬ್ ಖಾಜಿ, ಹಂಪಮ್ಮ ವಲ್ಕಂದಿನ್ನಿ, ಪಕೀರಪ್ಪ ರಾಮತ್ನಾಳ, ಈರಣ್ಣ ಹುಲಗುಂಚಿ, ಹಾಗೂ ಸಿಂಧನುರು ತಾಲೂಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.