ರಾಯಚೂರು,ಏ.24(ಕ.ವಾ):- ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಡಾ.ರಾಜ್ಕುಮಾರ ಅವರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಏ.24ರಂದು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಡಾ.ರಾಜ್ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳ ರೀತಿಯಲ್ಲಿ ಡಾ.ರಾಜಕುಮಾರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಲಿಂಗರಾಜ, ಸಿನಿ ಚಾಲಕ ಎ.ಪ್ರಕಾಶ, ಸಾಕ್ಷಾರತಾ ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ, ಸಿಬ್ಬಂದಿಗಳಾದ ಅಬ್ಬಾಸ್ ಖಾನ್, ಅಪ್ರೆಂಟಿಶಿಪ್ ಅಭ್ಯರ್ಥಿಗಳಾದ ನರಸಮ್ಮ, ಅಮೃತಾ ಮುರಾರಿ, ಎನ್.ಎಂ ಮೈತ್ರಿಕರ್, ತಮೇಶ, ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.