ರಾಯಚೂರು,ಏ.19(ಕವಾ):- ಮುಂದಿನ ತಿಂಗಳ ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದಂದು ತಾಲೂಕಿನಲ್ಲಿ ಯಾವುದೇ ರೀತಿಯ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವಿಪ್ ಸಮಿತಿಯ ಅಧ್ಯಕ್ಷರಾದ ಶಶಿಧರ ಕುರೇರ ಅವರು ತಿಳಿಸಿದರು.
ಅವರಿಂದು ಸಿಂಧನೂರು ತಾಲುಕಿನ ತಹಶಿಲ್ದಾರರ ಕಚೇರಿಯಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹೊರ ಜಿಲ್ಲೆಯಿಂದ ತಾಲೂಕಿನಲ್ಲಿ ಪ್ರವೇಶ ಮಾಡುವ ಎಲ್ಲಾ ರೀತಿಯ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಒಳಗಡೆ ಬಿಡಬೇಕು. ತಾಲೂಕಿನಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಬ್ಯಾನರ್ ಅಳವಡಿಸುವಂತಿಲ್ಲ. ಸಾವರ್ಜನಿಕ ಸಭೆ ಸಮಾರಂಭಗಳನ್ನು ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಆಯೋಜಿಸಲು ಕಡ್ಡಾಯವಾಗಿ ಚುನಾವಣೆ ಅಧಿಕಾರಿಗಳ ಅನುಮತಿ ಪಡೆಯಬೇಕು. ಚುನಾವಣೆಗೆ ವಾಹನಗಳನ್ನು ಬಳಕೆ ಮಾಡಬೇಕಾದರೆ ಅನುಮತಿ ಪಡೆದುಕೊಂಡಿರಬೇಕು ಇಲ್ಲದಿದ್ದರೆ ಅಂತಹ ವಾಹನಗಳನ್ನು ತಮ್ಮ ವಶಕ್ಕೆ ಪಡೆಯಬೇಕೆಂದರು.
ಸಾವರ್ಜನಿಕ ಸಭೆ, ಸಮಾರಂಭದಲ್ಲಿ ಪ್ರಚುನದಕಾರಿ ಹೇಳಿಕೆ ನೀಡುವುದು ಕಂಡುಬಂದಲ್ಲಿ ಅಂತಹ ವಿರುದ್ದ ಕ್ರಮ ಜರುಗಿಸಬೇಕು.
ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಅಕ್ರಮವಾಗಿ ಮಧ್ಯ ಸಾಗಣೆಕೆ ಮಾಡುವುದು ಕಂಡುಬಂದಲ್ಲಿ ಅಂತಹ ವಿರುದ್ಧ ಕ್ರಮ ಜರುಗಿಸಿ. ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿಸಿದ ತಂಡ ಹದ್ದಿನ ಕಣ್ಣು ಇಡಬೇಕು.
ತಾಲೂಕಿನಲ್ಲಿ ಮತದಾನ ಪ್ರತಿ ಶತ ಹೆಚ್ಚಳಕ್ಕೆ ಎಲ್ಲಾ ಸಿಬ್ಬಂದಿಯು ಮತದಾನ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಮತದಾನದಂದು ಪ್ರತಿಯೊಬ್ಬರ ಮತಗಟ್ಟೆ ಆಗಮಿಸಿ ಮತದಾನ ಮಾಡಬೇಕೆಂದು ಅರಿವು ಮೂಡಿಸುವ ಕೆಲಸ ಮಾಡಬೇಕು. ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸಬೇಕು ಎಂದು ಸೂಚಿಸಿದರು.
ಈ ಸಭೆಯಲ್ಲಿ ಅಬಕಾರಿ, ಪೋಲಿಸ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.