ರಾಯಚೂರು ಫೆಬ್ರವರಿ 18, ಸಿಂಧನೂರು ನಗರದ ಗಂಗಾವತಿ ಮುಖ್ಯ ರಸ್ತೆಯ ಹೊಸಳ್ಳಿ ಕ್ಯಾಂಪ್ ಹತ್ತಿರ ಇರುವ ಭಾರತೀಯ ವೈದ್ಯಕೀಯ ಸಂಘಟನೆ,ವೈದ್ಯ ಭವನದಲ್ಲಿ, ಸಹನಾ ಮಾಂಟೆಸ್ಸರಿ ಶಾಲಾ ವತಿಯಿಂದ ವಿದ್ಯಾರ್ಥಿಗಳಲ್ಲಿ ಕಲಿಕ,ಸ್ಮರಣೆ ಮತ್ತು ಪರೀಕ್ಷಾ ನಿರ್ವಹಣೆ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಒಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಕೆ,ಎಸ್ ಸುಭ್ರತಾ ಪ್ರಾಧ್ಯಾಪಕರು ಮನೋವೈದ್ಯಕೀಯ ವಿಭಾಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಹಾಗೂ ಕನ್ಸಲ್ಟೆಂಟ್ ಶ್ರೀಧರ್ ನರ್ಸಿಂಗ್ ಹೋಮ್ ಶಿವಮೊಗ್ಗ ಅವರು ಆಗಮಿಸಿದ್ದರು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಪ್ರಾರಂಭಿಸಿದರು.
ಉದ್ಘಾಟನೆಯ ನಂತರ ಮಾತನಾಡಿದ ಸಹನ ಮಕ್ಕಳ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞರು ಹಾಗೂ ಸಹನಾ ಮಾಂಟೆಸ್ಸರಿ ಶಾಲೆಯ ಅಧ್ಯಕ್ಷರಾದ ಡಾ. ಕೆ ಶಿವರಾಜ್ ಪಾಟೀಲ್ ಅವರು ಮಾತನಾಡಿ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಪಾಲಕರಿಗಾಗಿ ಡಾ. ಗುರುರಾಜ ಕರ್ಜಗಿ ಸೇರಿದಂತೆ ಪ್ರತಿ ವರ್ಷವೂ ಕೂಡ ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಈ ವರ್ಷ ಡಾ.ಕೆ,ಎಸ್ ಸುಭ್ರತಾ ಪ್ರಾಧ್ಯಾಪಕರು ಮನೋವೈದ್ಯಕೀಯ ವಿಭಾಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಹಾಗೂ ಕನ್ಸಲ್ಟೆಂಟ್ ಶ್ರೀಧರ್ ನರ್ಸಿಂಗ್ ಹೋಮ್ ಶಿವಮೊಗ್ಗ ಆಗಮಿಸಿದ್ದಾರೆ ಹಾಗಾಗಿ ತಾವೆಲ್ಲರೂ ಕೂಡ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ನಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ,ಎಸ್ ಸುಭ್ರತಾ ಅವರು ಮಾತನಾಡಿ ಪೋಷಕತ್ವ ಇದರ ಬಗ್ಗೆ ಒಂದು ಮಗುವಿನ ಪಾಲನೆ ಪೋಷಣೆ ಮತ್ತು ಶಿಕ್ಷಣವನ್ನು ಹುಟ್ಟಿನಿಂದ ಯೌವ್ವನದವರೆಗೆ ನೀಡುವ ಪ್ರಕ್ರಿಯೆಗೆ ಪೋಷಕತ್ವ (parenting) ಎನ್ನುತ್ತಾರೆ ನಾಲ್ಕು ವಿಧದ ಪೋಷಕತ್ವದ ಬಗ್ಗೆ ಹೇಳಬೇಕೆಂದರೆ ಮೊದಲನೆಯದಾಗಿ
1) ಸರ್ವಾಧಿಕಾರಿಯುತ ಪೋಷಕತ್ವ (parenting)
ಈ ಸರ್ವ ಸರ್ವಾಧಿಕಾರಿಯುತ ಪೋಷಕತ್ವ ರೀತಿಯಲ್ಲಿ ಪೋಷಕರು ತಾವೇ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಾರೆ ಅಂದರೆ ಮಕ್ಕಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವೇ ಕೊಡುವುದಿಲ್ಲ ಪ್ರೀತಿಗೆ ಸಂವಾದಕ್ಕೆ ಆಸ್ಪದ ನೀಡುವುದಿಲ್ಲ ಇದರಿಂದ ಈ ಪರಿಸರದಲ್ಲಿ ಬೆಳೆಯುವ ಮಕ್ಕಳಿಗೆ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತೆ.
2) ಅಧಿಕಾರಿಯುತ ಪೋಷಕತ್ವ (authoritative parenting)
ಇದು ಆದರ್ಶವಾಗಿದ್ದು ಇಲ್ಲಿ ತಂದೆ-ತಾಯಿ ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಾರೆ ಹಾಗೆಂದು ಮಕ್ಕಳ ಎಲ್ಲಾ ಮಾತನ್ನು ಕೇಳುವುದಿಲ್ಲ ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಇತಿಮತಿಗಳನ್ನು ನಿರ್ಧರಿಸಿ ಈ ಸಂದರ್ಭದಲ್ಲಿ ಅಧಿಕಾರ ಪೋಷಕರ ಬಳಿ ಇದ್ದರು ಮಕ್ಕಳು ಮತ್ತು ಪೋಷಕರ ಮಧ್ಯೆ ಪರಸ್ಪರ ಗೌರವ ಇರುತ್ತದೆ ಮಗುವಿನ ಸಾಮರ್ಥ್ಯ ಹರಿದು ಅದು ಮುಂದೆ ಸ್ವತಂತ್ರ ಯಶಸ್ವಿ ವ್ಯಕ್ತಿಯಾಗಲು ಈ ವಿಧಾನ ಸಹಕಾರಿಯಾಗುತ್ತದೆ
3) ವಿಧೇಯ ಪೋಷಕತ್ವ (submissive parenting)
ವಿಧೇಯ ಪೋಷಕತ್ವದಲ್ಲಿ ಮಕ್ಕಳೇ ಅಧಿಕಾರಿಗಳು ಮಕ್ಕಳು ಹೇಳಿದಂತೆ ಪೋಷಕರು ಕೇಳುತ್ತಾರೆ ಪೋಷಕರ ಮಾತಿಗೆ ಬೆಲೆಯೇ ಇರುವುದಿಲ್ಲ ಯಾವುದೇ ನಿರ್ಧಾರದಲ್ಲೂ ಮಕ್ಕಳದೆ ಮೇಲುಗೈ ಉದಾಹರಣೆಗೆ ಹೇಳಬೇಕೆಂದರೆ ಇವತ್ತು ಪಿಜ್ಜಾ ಬೇಕು ಎಂದರೆ ತರಲೇಬೇಕು ಟಿವಿ ನೋಡುತ್ತೇನೆ ಎಂದರೆ ಹಚ್ಚಲೇಬೇಕು ಮೊಬೈಲ್ ಬೇಕು ಎಂದರೆ ಕೊಡಲೇಬೇಕು ಹಲವಾರು ವರ್ತನ ಸಮಸ್ಯೆಗಳಿಗೆ ಈ ಪೋಷಕತ್ವವೇ ಕಾರಣವಾಗುತ್ತದೆ.
4) ನಿಷ್ಕ್ರಿಯ ಪೋಷಕತ್ವ (uninvolved parenting)
ನಿಷ್ಕ್ರಿಯ ಪೋಷಕತ್ವದಲ್ಲಿ ಮಕ್ಕಳನ್ನು ಅಲಕ್ಷ ಮಾಡಲಾಗುತ್ತದೆ ಅಂದರೆ ಓದುತ್ತಿದ್ದಾನ ಬರೆಯುತ್ತಿದ್ದಾನ ಆಟವಾಡುತ್ತಿದ್ದಾನ ಅಥವಾ ಊಟ ಮಾಡುತ್ತಾನ ಮಕ್ಕಳ ಬೇಕು ಬೇಡುಗಳ ಬಗ್ಗೆ ನಿರ್ಲಕ್ಷೆ ವಹಿಸಿ ಭಾವನಾತ್ಮಕವಾಗಿ ಮಕ್ಕಳಿಗೆ ಪೋಷಕರು ಸಿಗುವುದೇ ಇಲ್ಲ.
ಹೀಗಾಗಿ ಪಾಲಕರಿಗೆ ಒತ್ತಡ ಬರೋದು ಪಕ್ಕಾದಮನೆ ಮನೆ ಮಗು ತೆಗೆದುಕೊಂಡಿರುವ ಅಂಕಗಳನ್ನು ನೋಡಿ ತಮ್ಮ ಮಕ್ಕಳಿಗೆ ಹೋಲಿಸಿಕೊಂಡು ನೀನು ಯಾಕೆ ಇಷ್ಟು ಅಂಕಗಳನ್ನು ತೆಗೆದುಕೊಂಡಿಲ್ಲ ಎಂದು ತಮ್ಮ ಮಕ್ಕಳನ್ನು ಹೊಡೆಯುವುದು ಬಡಿಯುವುದು ಬೈಯುವು ಮುಖಾಂತರ ತಮ್ಮ ಸಿಟ್ಟನ್ನು ಮಕ್ಕಳ ಮೇಲೆ ಹಾಕುತ್ತಾರೆ ಆದರೆ ನಮ್ಮ ಮಕ್ಕಳಿಗಾಗಿ ನಾವು ಏನು ಮಾಡುತ್ತಿದ್ದೇವೆ ಏನು ಮಾಡುತ್ತಿಲ್ಲ ಎಂಬುವುದು ಅವರ ಗಮನಕ್ಕೆ ಇರುವುದಿಲ್ಲ, ಶಾಲೆಗೆ ಹೋಗಿ ಬಂದ ನಂತರ ಮಕ್ಕಳು ಏನು ಮಾಡುತ್ತಿದ್ದಾರೆ ಏನು ಮಾಡುತ್ತಿಲ್ಲ ಮಕ್ಕಳಿಗೆ ನಾವು ಸ್ವಲ್ಪ ಸಮಯವನ್ನು ಕೊಟ್ಟು ಶಾಲೆಯಲ್ಲಿ ಏನು ಕಲಿಸಿದ್ದಾರೆ ಎಂದು ಗಮನವಿಟ್ಟು ಮಕ್ಕಳಿಗೆ ಓದಿಸುವುದು ಬರೆಯಿಸುವುದು ಜೊತೆಗೆ ಸ್ವಲ್ಪ ಸಮಯವನ್ನು ಆಟವಾಡಲು ಬಿಡುವು ಮಾಡಿಕೊಡಬೇಕು ಜೊತೆಗೆ ಶಾಲೆಯಲ್ಲಿ ಕಲಿಸುವುದು ಮಾತ್ರ ಶಿಕ್ಷಣ ಎಂದು ನೀವು ಅಂದುಕೊಂಡರೆ ಅದು ತಪ್ಪು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಮಕ್ಕಳ ಜೊತೆ ನಾವು ಯಾವ ರೀತಿ ಇರಬೇಕು ಮಕ್ಕಳಿಗಾಗಿ ನಾವು ಏನು ಮಾಡಬೇಕು ನಾವು ಮಾಡುವ ಕರ್ತವ್ಯಗಳು ಏನು ಎಂಬುದರ ಬಗ್ಗೆ ಸ್ವವಿವರವಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಹನ ಮಾಂಟೆಸ್ಸರಿ ಶಾಲೆಯ ಅಧ್ಯಕ್ಷರಾದ ಡಾ. ಕೆ ಶಿವರಾಜ್ ಪಾಟೀಲ್ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಜ್ಯೋತಿ ಕೆ ಪಾಟೀಲ್, ಡಾ.ರಾಜಶೇಖರ್ ಪಾಟೀಲ್ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಮೇಟಿ, ಉಪ ಪ್ರಾಂಶುಪಾಲರಾದ ಶ್ರೀಮತಿ ಅಮುದ, ಶಾಲೆಯ ಪಾಲಕರು ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿವರ್ಗ ಭಾಗವಹಿಸಿದ್ದರು.