ಜೂನ್ 12. ಸಿಂಧನೂರು ಕುಷ್ಟಗಿ ಮುಖ್ಯ ರಸ್ತೆಯ ವಿರುಪಾಪುರ ಅರಳಹಳ್ಳಿ ಕ್ರಾಸ್ ಹತ್ತಿರ ವಿದ್ಯಾರ್ಥಿಗಳು ರಸ್ತೆ ಬಂದ್ ಮಾಡುವ ಮೂಲಕ ಸಾರಿಗೆ ಇಲಾಖೆಯ ಸಿಂಧನೂರು ಡಿಪೋ ಮ್ಯಾನೇಜರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ಬಂದ್ ಮಾಡಲಾಯಿತು ಸ್ಥಳಕ್ಕೆ ಆಗಮಿಸಿದ ಸಿಂಧನೂರು ಹಾಗೂ ತುರವಿಹಾಳ ಪೊಲೀಸ್ ಠಾಣೆ ಅಧಿಕಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಿ ದಯವಿಟ್ಟು ರಸ್ತೆ ಬಂದ ಮಾಡಬೇಡಿ ನಿಮ್ಮ ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಮಧ್ಯ ಮಾತಿನ ಚಕಮುಕಿ ನಡೆಯಿತು
ಕುಷ್ಟಗಿಯಿಂದ ಸಿಂಧನೂರು ಸಿಂಧನೂರಿನಿಂದ ಕುಷ್ಟಗಿ ಹೋಗುವಂತ ಬಸ್ಸುಗಳು ಹಲವು ವರ್ಷಗಳಿಂದ ಇಲ್ಲಿ ಬಸ್ಗಳನ್ನ ನಿಲ್ಲಿಸದೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಪ್ರತಿನಿತ್ಯ ತಮ್ಮ ವಿದ್ಯಾಭ್ಯಾಸಕ್ಕಾಗಿ ಸಿಂಧನೂರು ಪಟ್ಟಣಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನಿಲ್ಲಿಸಬೇಕು ಎಂಬ ಆದೇಶವಿದ್ದರೂ ಬಸ್ಸುಗಳನ್ನು ನಿಲ್ಲಿಸದೆ ಸಮಯಕ್ಕೆ ಸರಿಯಾಗಿ ಹೋಗದೆ ಖಾಸಗಿ ವಾಹನಗಳಲ್ಲಿ ದುಡ್ಡು ಕೊಟ್ಟು ಹೋಗಿ ಅರ್ಧಮರ್ಧ ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಹೀಗಾದರೆ ನಮಗೆ ಸಾರಿಗೆ ಇಲಾಖೆ ಯಾಕೆ ಬೇಕು ಸಾರಿಗೆ ಇಲಾಖೆಯ ಬಸ್ಸುಗಳು ನಮಗೆ ಯಾಕೆ ಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಮುಂಚೆ ಕೂಡ ಹಲವು ಬಾರಿ ಸಂಬಂಧ ಪಟ್ಟ ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದೇವೆ ಡಿಪೋ ಮ್ಯಾನೇಜರ್ ಗಮನಕ್ಕೂ ತಂದಿದ್ದೇವೆ ಹಲವು ಬಾರಿ ರಸ್ತೆಗಳನ್ನು ಬಂದು ಮಾಡಿ ಮನವಿ ಪತ್ರಗಳನ್ನು ಕೊಟ್ಟಿದ್ದೇವೆ ಅಧಿಕಾರಿಗಳು ಮಾತ್ರ ಮನವಿ ಪತ್ರ ಕೊಟ್ಟಾಗ ರಸ್ತೆ ಬಂದು ಮಾಡಿದಾಗ ಎರಡು ಮೂರು ದಿನ ಮಾತ್ರ ಬಸ್ಸುಗಳನ್ನು ನಿಲ್ಲಿಸುತ್ತಾರೆ ಆನಂತರ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.