ಏಪ್ರಿಲ್ 09. ರಾಜ್ಯದಲ್ಲಿ 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮೇ ಹತ್ತರಂದು ಮುಹೂರ್ತ ಫಿಕ್ಸ್ ಮಾಡಲಾಗಿದೆ ಮತ್ತು ಏಪ್ರಿಲ್ 13 ಇನ್ನು ನಾಲ್ಕು ದಿನದಲ್ಲಿ ಚುನಾವಣೆ ಅಧಿಸೂಚನೆ ಬಿಡುಗಡೆ ಮಾಡಲಿದ್ದು ಇದೇ ತಿಂಗಳು ಅಂದರೆ ಏಪ್ರಿಲ್ 20ರಂದು ನಾಮಪತ್ರ ಕೊನೆಯ ದಿನವಾಗಿದೆ.
ದಿನದಿಂದ ದಿನಕ್ಕೆ ರಾಜಕೀಯ ರಣರಂಗವಾಗುತ್ತಿದೆ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಆಕಾಂಕ್ಷಿಗಳು ಅತಿ ಹೆಚ್ಚು ಇದ್ದು ಟಿಕೆಟ್ ಪಡೆದವರು ಸಂತೋಷದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ ಟಿಕೆಟ್ ಸಿಗದವರು ಅತಂತ್ರ ಸ್ಥಿತಿಯಲ್ಲಿ ಪಕ್ಷದಲ್ಲಿದ್ದು ಬೆಂಬಲ ನೀಡಬೇಕಾ ಅಥವಾ ಬೇರೆ ಪಕ್ಷಕ್ಕೆ ಹೋಗೋಣವೆಂದರೆ ಕೇವಲ ಕೆಲವೇ ದಿನಗಳು ಮಾತ್ರ ಚುನಾವಣೆ ಬಾಕಿ ಇದೆ ಏನು ಮಾಡಬೇಕು ಎಂಬುದು ತಿಳಿಯದೆ ಆತಂಕದಲ್ಲಿದ್ದಾರೆ
ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಮೂರು ಜನ ಆಕಾಂಕ್ಷಿಗಳಿದ್ದರು ಹಂಪನಗೌಡ ಬಾದರ್ಲಿ ಬಸನಗೌಡ ಬಾದರ್ಲಿ ಹಾಗೂ ಕೆ ಕರಿಯಪ್ಪ. ಆದರೆ ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಟಿಕೆಟ್ ಸಿಗುವುದಿಲ್ಲ ಅಂದುಕೊಂಡು ಕೆ ಕರಿಯಪ್ಪ ಅವರು ನನಗೆ ಬಿಜೆಪಿಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದು ತಮ್ಮ ಕಾರ್ಯಕರ್ತರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಹಾಗಾದರೆ ಭತ್ತದ ನಾಡು ಸಿಂಧನೂರು ವಿಧಾನಸಭಾ ಕ್ಷೇತ್ರದ ಅಖಾಡದಲ್ಲಿರುವರು ತಾತ ಹಂಪನಗೌಡ ಬಾದರ್ಲಿ ಮೊಮ್ಮಗ ಬಸನಗೌಡ ಬಾದರ್ಲಿ ಇವರಿಬ್ಬರು ಮಾತ್ರ ಇವರಿಬ್ಬರೂ ಕೂಡ ತಮ್ಮದೇ ಆದಂತ ಶಕ್ತಿಯನ್ನು ಪ್ರದೇಶಿಸುತ್ತಾ ಹಿರಿಯ ಮುಖಂಡರು ಜೊತೆ ಸೇರಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಾ ನನಗೆ ಟಿಕೆಟ್ ಸಿಗುತ್ತೆ ಎಂದು ಬಿಂಬಿಸುತ್ತಾ ರಾಜಧಾನಿಯಲ್ಲಿ ಟಿಕಾಣೆ ಹೂಡಿದ್ದಾರೆ
ಆದರೆ ಕ್ಷೇತ್ರದಲ್ಲಿ ಮಾತ್ರ ಇವರಿಬ್ಬರ ಸಂಬಂಧಿಗಳು ಹಾಗೂ ಕಾರ್ಯಕರ್ತರು ನಮ್ಮ ಗೌಡರಿಗೆ ಟಿಕೆಟ್ ಸಿಕ್ಕಿದೆ ನಮ್ಮ ಗೌಡರಿಗೆ ಟಿಕೆಟ್ ಸಿಕ್ಕಿದೆ ಎಂದು ನಗರ ಸೇರಿದಂತೆ ಹಳ್ಳಿಗಳಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ
ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಗೊತ್ತಿದ್ದೂ ಗೊತ್ತಿಲ್ಲದು ಅಭ್ಯರ್ಥಿ ಯಾರು ಎಂದು ಹೇಳುತ್ತಿಲ್ಲವ ಅಥವಾ ಮುಚ್ಚಿ ಇಟ್ಟಿದೆಯಾ ಎಂಬುವುದು ಮತದಾರ ಪ್ರಭುವಿಗೆ ಅರ್ಥವಾಗುತ್ತಿಲ್ಲ ನಾಮಪತ್ರ ಸಲ್ಲಿಸಲು ಇನ್ನೇನು ಕೇವಲ 10 ರಿಂದ 11 ದಿನಗಳ ಮಾತ್ರ ಬಾಕಿ ಇದೆ ಹಾಗಾದರೆ ಟಿಕೆಟ್ ಘೋಷಣೆ ಯಾವಾಗ ಎಂಬುದು ವಿಷಯ ಮಾತ್ರ ಗುಪ್ತವಾಗಿದೆ.
ಒಟ್ಟರೆಯಾಗೆ ಹೇಳುವುದಾದರೆ ಇವರಿಬ್ಬರೂಗಳ ಕಾರ್ಯ ವೈಖರಿ ನೋಡಿದರೆ ತಮ್ಮದಾದಂತಹ ಸ್ವಂತ ವರ್ಚಸ್ಸಿನಲ್ಲಿ ಓಡಾಡುತ್ತಿರುವುದನ್ನು ನೋಡಿದರೆ ಟಿಕೆಟ್ ಸಿಗದವರು ಕಾಂಗ್ರೆಸ್ ಹೈಕಮಾಂಡಿಗೆ ಬಂಡಾಯದ ಬಿಸಿ ಮುಟ್ಟಿಸುವವರ ಅಥವಾ ಟಿಕೆಟ್ ಸಿಕ್ಕವರ ಜೊತೆ ಹೊಂದಾಣಿಕೆ ಮಾಡಿಕೊಂಡು ಮತ್ತು ಪಕ್ಷಕ್ಕೆ ಬೆಂಬಲ ನೀಡುತ್ತಾರಾ ಎಂದು ಕಾದುನೋಡಬೇಕಾಗಿದೆ.