ಏಪ್ರಿಲ್ 15. ಆತ್ಮೀಯ ಓದುಗರೇ ರಾಜ್ಯದಲ್ಲಿ ಮೇ ಹತ್ತರಂದು 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಪ್ರಾರಂಭವಾಗಿ ಎರಡು ದಿನಗಳು ಕಳೆದವು ಅಂದರೆ ದಿನಾಂಕ 13.4.2023ರ ಪ್ರಾರಂಭದ ದಿನವಾಗಿದ್ದು ದಿನಾಂಕ 20.4.2023 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಇನ್ನೇನು ಐದು ದಿನಗಳು ಮಾತ್ರ ಬಾಕಿ ಉಳಿದಿದೆ ಆದರೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡದೇ ಇರುವುದು ಕಾಂಗ್ರೆಸ್ ಹೈಕಮಾಂಡ್ ನ ಒಳಗುಟ್ಟು ಏನು? ಎಂಬುದು ತಿಳಿಯದಾಗಿದೆ.
3..5…6 ಗಂಟೆಗೆ ಅಥವಾ ನಾಳೆ ನಾಡಿದ್ದು ಗುಟ್ಟು….?
ಭತ್ತದ ನಾಡು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡದೆ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ ಎರಡು ಬಣಗಳ ಮಧ್ಯ ಜಿದ್ದಾಜಿದ್ದಿ ಜೋರಾಗಿ ನಡೆದಿದೆ ಅಭ್ಯರ್ಥಿಗಳಿಗಿಂತ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ತುಂಬಾ ತಲೆನೋವು ಆಗಿ ಪರಿಣಮಿಸಿದೆ.
ಯಾಕೆಂದರೆ ಎರಡು ಬಣದವರು ಸಹ ನಮ್ಮ ಗೌಡರಿಗೆ 3: ಗಂಟೆಗೆ 5: ಗಂಟೆಗೆ 6:00 ಗೆ ಕೆಲವು ಕಾರ್ಯಕರ್ತರು ಮತ್ತು ನಾಳೆ ಟಿಕೆಟ್ ಘೋಷಣೆ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಹಂಚಿಕೊಂಡು ಪ್ರತ್ಯೇಕವಾಗಿ ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ.
ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಶೇಕಡ 70ರಷ್ಟು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಆದರೆ ಉಳಿದ ಸುಮಾರು ಶೇಕಡ 30ರಷ್ಟು ಕ್ಷೇತ್ರಗಳ ಘೋಷಣೆ ಬಾಕಿ ಇದೆ ಈ ಪೈಕಿ ಸಿಂಧನೂರು ವಿಧಾನಸಭಾ ಕ್ಷೇತ್ರವು ಕೂಡ ಒಂದಾಗಿದೆ.
ತಾತ ಮೊಮ್ಮಗನ ನಿರೀಕ್ಷೆ ಮಾಡದಷ್ಟು ಜಿದ್ದಾಜಿದ್ದಿ ನಡೆದಿದೆ ಹಂಪನಗೌಡ ಬಾದರ್ಲಿ ಯವರು ಕಾಂಗ್ರೆಸ್ ಪಕ್ಷದ ಶಾಸಕರಾಗಿ ಮತ್ತು ಎಂ ಎಸ್ ಐ ಎಲ್ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ ಇಟ್ಟುಕೊಂಡಿದ್ದಾರೆ. ಆದರೆ ಯಾವುದೇ ಅಧಿಕಾರ ಅನುಭವಿಸದೆ ಇರುವ ಬಸನಗೌಡ ಬಾದರ್ಲಿ ಯವರು ತಾತನಾದ ಹಂಪನಗೌಡ ಬಾದರ್ಲಿ ಅವರಿಗೆ ಇಷ್ಟೊಂದು ಪೈಪೋಟಿ ನೀಡುತ್ತಿರುವ ಮೊಮ್ಮಗನ ವರ್ಚಸ್ ಏನೆಂದು ಮತದಾರರ ಮಾತಾಗಿದೆ.