ರಾಯಚೂರು,ಏ.19(ಕವಾ):-1973ರ ದಂಡ ಪ್ರಕ್ರಿಯೆ ಸಂಹಿತೆ ಕಲಂ. 144 ರನ್ವಯ ಏ.19 ರಿಂದ ಏ.26 ರವರೆಗೆ ಕರ್ನಾಟಕ ಮುಕ್ತ ಶಾಲೆ-ಕೆ.ಓಸ್ ಪರೀಕ್ಷೆಯು ಸರಕಾರಿ ಪದವಿ ಪೂರ್ವ ಕಲೇಜು (ಪೌಢ ಶಾಲಾ ವಿಭಗ) ಲಿಂಗಸುಗೂರು ತಾ. ಲಿಂಗಸುಗೂರು ಜಿ. ರಾಯಚೂರು ಕೇಂದ್ರದ 200 ಮೀಟರ್ ಸುತ್ತುವರೆದ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಪರೀಕ್ಷೆ ಕೇಂದ್ರದ ವ್ಯಾಪ್ತಿಯಲ್ಲಿ ಪರೀಕ್ಷೆ ಕೇಂದ್ರಕ್ಕೆ, ನಿಯೋಜಿಸಿದ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಯಾರು ನಿಷೇಧಿತ ಪ್ರದೇಶವನ್ನು ಪ್ರವೇಶಿಸಕೂಡದು, ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ ಎಲ್ಲಾ ಝರಾಕ್ಸ್ ಅಂಗಡಿಗಳನ್ನು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷೆ ಸಮಯದಲ್ಲಿ ಕಡ್ಡಾಯವಾಗಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.