ರಾಯಚೂರು,ಏ.12(ಕ.ವಾ):- ವಿಧಾನಸಭೆ ಚುನಾವಣೆ-2023ರ
ಹಿನ್ನಲೆಯಲ್ಲಿ ಏ.13ರಿಂದ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಆರಂಭವಾಗಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಮತದಾನ
ಹಾಗೂ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ
ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ
ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರುಏ.12ರ(ಬುಧವಾರ) ನಗರದ ಜಿಲ್ಲಾಧಿಕಾರಿ ಕಚೇರಿ
ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,
ಏ.13ರಿಂದ ಏ.20ರ ವರೆಗೆ ಚುನಾವಣೆಯ ನಾಮಪತ್ರ ಸಲ್ಲಿಕೆ
ಪ್ರಕ್ರಿಯೆ ನಡೆಯಲಿದ್ದು, ಏ.21ರಂದು ನಾಮಪತ್ರ ಪರಿಶೀಲನೆ
ನಡೆಯಲಿದೆ. ಏ.24ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ
ದಿನಾಂಕವಾಗಿರುತ್ತದೆ. ಎಂದರು.
ಉಳಿದಂತೆ ಮೇ.10ರಂದು ಮತದಾನ ಪ್ರಕ್ರಿಯೆ
ನಡೆಯಲಿದ್ದು, ಮೇ.13ಕ್ಕೆ ಎಣಿಕೆ ಪ್ರಕ್ರಿಯೆ ಮತ್ತು
ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಎಲ್ಲಾ ಚುನಾವಣೆ
ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಚುನಾವಣಾ
ಆಯೋಗದಿಂದ ಎಲ್ಲಾ ರೀತಿಯ ಸಿದ್ದತೆಗಳನ್ನು
ಮಾಡಿಕೊಳ್ಳಲಾಗಿದೆ. ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಚೆಕ್ಪೋಸ್ಟ್ಗಳನ್ನು ನಿರ್ಮಾಣ
ಮಾಡಲಾಗಿದ್ದು, ಇವುಗಳಲ್ಲಿ ಎಫ್.ಎಸ್.ಟಿ, ಎಸ್.ಎಸ್.ಟಿ ಹಾಗೂ ವಿ.ಎಸ್.ಟಿ ತಂಡಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿವೆ. ಮತ್ತು
ಇಲ್ಲಿಯವರೆಗೂ ಒಟ್ಟು 53 ಲಕ್ಷ ರೂ. ದಾಖಲೆಯಿಲ್ಲದ ಹಣವನ್ನು
ಜಪ್ತಿ ಮಾಡಲಾಗಿದ್ದು, ಅಬಕಾರಿ ಇಲಾಖೆಯಿಂದ 3300 ಲೀಟರ್ ಮದ್ಯ ಸೇರಿದಂತೆ ಪೊಲೀಸ್ ಇಲಾಖೆಯಿಂದ ಒಂದು ಸಾವಿರ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮೂರು
ವೆಚ್ಚಗಳ ವೀಕ್ಷಕರು ಮತ್ತು ನಾಲ್ಕು ಸಾಮಾನ್ಯ ವೀಕ್ಷಕರು
ಆಗಮಿಸಲಿದ್ದು, ಈ ಅಧಿಕಾರಿಗಳು ಜಿಲ್ಲೆಯಲ್ಲಿ ಚನಾವಣೆಗೆ
ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.