ರಾಯಚೂರು ಜೂನ್ 24. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನಿಸಿ, ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಸನಗೌಡ ಬಾದರ್ಲಿಗೆ ಎಐಸಿಸಿ ಉಸ್ತುವಾರಿ ಅರವಿಂದ ಸುರ್ಜೇವಾಲ್, ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಮಹಮ್ಮದ್ ನಲ್ಪಾಡ್ ಹಾಗೂ ಹಲಾವಾರು ಕಾಂಗ್ರೆಸ್ ನ ನಾಯಕರು ಸಿಂಧನೂರಿಗೆ ಆಗಮಿಸಿ ನಾಮಪತ್ರ ವಾಪಸ್ ತೆಗೆಯಿಸಿದ್ದರು. ಈ ವೇಳೆ ಮುಂದಿನ ದಿನಗಳಲ್ಲಿ ಪಕ್ಷದಿಂದ ಉತ್ತಮ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಕೊನೆಗೂ ಬೇಡಿಕೆ ಈಡೇರಿಸಿದಂತಾಗಿದೆ.
ಕಾರಣ ಜಗದೀಶ್ ಶೆಟ್ಟರ್ ತೆರವಾದ ( MLC ) ಸ್ಥಾನಕ್ಕೆ ಅಧಿಸೂಚನೆಯ ಸಂಚಿಕೆ 25 ಜೂನ್, 2024 ಮಂಗಳವಾರ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಜುಲೈ 02, 2024 ಮಂಗಳವಾರ ಜುಲೈ 05, 2024 ಶುಕ್ರವಾರ ಹಿಂಪಡೆಯುವ ಉಮೇದುವಾರಿಕೆಗಳಿಗೆ ಕೊನೆಯ ದಿನಾಂಕವಾಗಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ತಮ್ಮ ಗೃಹ ಕಚೇರಿಯಲ್ಲಿ ಇಂದು ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ಇವರಿಗೆ ಎಂಎಲ್ಸಿ ( MLC ) ಬಿ ಫಾರ್ಮ್ ನಾಮಪತ್ರವನ್ನು ನೀಡುವ ಮೂಲಕ ಶುಭ ಹಾರೈಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ. ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೇಸ್ ಪಕ್ಷದ ಅದಿನಾಯಕಿಯಾದ ಶ್ರೀಮತಿ ಸೋನಿಯಾ ಗಾಂಧಿಯವರು ನಮ್ಮ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜಿವಾಲ , ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ ವೇಣುಗೋಪಾಲ್ ಅವರು, ನಮ್ಮ ನೆಚ್ಚಿನ ಮುಖ್ಯಮಂತ್ರಿಗಳು ಆದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಶ್ರೀ ಡಿಕೆ ಶಿವಕುಮಾರ್ ಅವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ವಿಧಾನ ಪರಿಷತ್ ಉಪ ಚುನಾವಣೆಗೆ ಬಿ ಫಾರಾಂ ನೀಡಿದ್ದಕ್ಕೆ ಎಲ್ಲರಿಗೂ ಅನಂತ ಧನ್ಯವಾದಗಳು ಎಂದು ಹುಸೇನ್ ಬಾಷಾ ಬಳಗನೂರ್ ಸೇರಿದಂತೆ ಹಲವಾರು ಕಾರ್ಯಕರ್ತರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.