ರಾಯಚೂರು,ಮೇ.07 ವಿಧಾನಸಭೆ ಚುನಾವಣೆ-2023ರ ಹಿನ್ನಲೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಹಾಗೂ ಮತದಾರರನ್ನು ಆಕರ್ಷಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಮಮತೆಯ ಕರೆಯೋಲೆ ಎಂಬ ಶೀರ್ಷಿಕೆಯಡಿಯಲ್ಲಿ ಮತದಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೇ.07ರ(ಭಾನುವಾರ) ನಗರಸಭೆ ಆವರಣದಲ್ಲಿ ಮತದಾನ ಮಮತೆಯ ಕರೆಯೋಲೆ ಎಂಬ ವಿನೂತನ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರು ಮಾತನಾಡಿ, ಮತದಾನ ಮಮತೆಯ ಕರೆಯೋಲೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮದುವೆಗೆ ಬಂಧು ಬಳಗವನ್ನು ಕರೆಯುವ ಹಾಗೆ ಮತದಾನದ ದಿನದಂದು ಮತವನ್ನು ಹಾಕಲು ಜನರನ್ನು ಕರೆತರಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾದೆ ಎಂದರು.
ಮೇ 10ಕ್ಕೆ ಮತದಾನ ಇರುವುದರಿಂದ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕಾಗಿದ್ದು, ದೇಶದ ಸುಭದ್ರತೆ ಮತದಾನದಲ್ಲಿ ಅಡಗಿದೆ. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಮತದಾನ ಅತ್ಯಂತ ಅವಶ್ಯಕತೆಯಿದೆ .ಯಾವುದೇ ಆಸೆ. ಆಮಿಷಗಳಿಗೆ. ಒಳಗಾಗದೆ ಪ್ರತಿಯೊಬ್ಬರು ಮೇ 10ರಂದು ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದರಿಂದ ನಮ್ಮಹಕ್ಕನು ಉಳಿಸಿ ಕೊಳ್ಳಲು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಈ ಜಾಥಾವು ನಗರಸಭೆಯ ಕಾರ್ಯಾಲಯದಿಂದ ತಾಲೂಕ್ ಪಂಚಾಯತ್. ಬಸ್ ಸ್ಟ್ಯಾಂಡ್ ಮೂಲಕ. ಡಾ ಬಿ .ಆರ್ ಅಂಬೇಡ್ಕರ್ ವೃತ್ತದವರೆಗೂ ನಡೆಯಿತು. ನಂತರ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರ್ಪಳಿಯನ್ನು ನಿರ್ಮಾಣ ಮಾಡಿ ಮತದಾನ ಜಾಗೃತಿಯ ಘೋಷಣೆಗಳನ್ನು ಹೇಳಲಾಯಿತು.
ಈ ಸಂದರ್ಭದಲ್ಲಿ ಮತದಾರ ಸಾಕ್ಷರತಾ ಕ್ಲಬ್ಬಿನ ಜಿಲ್ಲಾ ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ, ನಗರಸಭೆ ವ್ಯವಸ್ಥಾಪಕ ರಾಜು, ಕೃಷ್ಣ ಕಟ್ಟಿಮನಿ, ಶಕೀಲ್ ಸೇರಿದಂತೆ ನಗರಸಭೆಯ ವಿವಿಧ ಹಂತದ ಅಧಿಕಾರಿಗಳು ಸಿಬ್ಬಂದಿಯವರು ಭಾಗವಹಿಸಿದ್ದರು.