ಏಪ್ರಿಲ್ 30.ಕನ್ನಡದ ಖ್ಯಾತ ನಟ- ನಿರ್ದೇಶಕ ದ್ವಾರಕೀಶ್ ಅವರು ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆರೋಗ್ಯದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳಿಗೆ ನಟ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಟ, ನಿರ್ದೇಶಕ, ನಿರ್ಮಾಪಕನಾಗಿ ಹಲವು ಚಿತ್ರಗಳು ಮಾಡಿದ್ದಾರೆ ದ್ವಾರಕೀಶ್ ಅವರು ಕೆಲದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ದ್ವಾರಕೀಶ್ ಅವರು ಪಡೆದುಕೊಂಡು ಇದೀಗ ಅವರು ಫಿಟ್ ಆಗಿ ಆರಾಮಾಗಿದ್ದಾರೆ.
ನಟ ದ್ವಾರಕೀಶ್ ಆರೋಗ್ಯದ ಬಗ್ಗೆ ಭಾನುವಾರ ಬೆಳಿಗ್ಗೆಯಿಂದ ಇಲ್ಲಸಲ್ಲದ ಊಹಾಪೋಹಗಳು ಹಬ್ಬಿತ್ತು ಹಿರಿಯ ನಟ ದ್ವಾರಕೀಶ್ ನಿಧನ ಅಂತಾ ಅಪಪ್ರಚಾರ ಮಾಡಲಾಗಿತ್ತು. ಅದಕ್ಕೆ ಇದೀಗ ದ್ವಾರಕೀಶ್ ಅವರೇ ಸ್ವತ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸಾಕಿ ಬೆಳೆಸಿದ ದ್ವಾರಕೀಶ್, ನಾನು ಚೆನ್ನಾಗಿದ್ದೀನಿ ನಿಮ್ಮೆಲ್ಲರ ಆಶೀರ್ವಾದ ಬೇಕು. ಗಟ್ಟಿ ಮುಟ್ಟಾಗಿದ್ದೀನಿ, ಯಾವ ಚಿಂತೆಯೂ ಇಲ್ಲಾ. ನಗು ನಗುತ್ತಾ ಚೆನ್ನಾಗಿದ್ದೀನಿ ಎಂದು ದ್ವಾರಕೀಶ್ ಸ್ಪಷ್ಟನೆ ನೀಡಿದ್ದಾರೆ.