ಮಸ್ಕಿ ಮೇ 05.ಪಟ್ಟಣದಲ್ಲಿ ಪ್ರತಾಪ್ ಸಿಂಹ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಜಂಟಿಯಾಗಿ ಅಬ್ಬರದ ಪ್ರಚಾರ ನಡೆಸಿದರು.
ನಂತರ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ ಪ್ರತಾಪ್ ಗೌಡ ಪಾಟೀಲ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 135ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ. ಇದು ಸೂರ್ಯಚಂದ್ರರಷ್ಟೇ ಸತ್ಯ,ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನೂ ಮತದಾರರಿಗೆ ವಿವರಿಸಿದರು. ಪ್ರತಾಪ್ ಗೌಡ ಅವರಿಗೆ ಕೊಡುವ ಒಂದು ಮತ ಕರ್ನಾಟಕವನ್ನು ಸುರಕ್ಷಿತವಾಗಿಡುತ್ತದೆ. ಕರ್ನಾಟಕವನ್ನು ಸಮೃದ್ದ ಸುರಕ್ಷಿತವಾಗಿಡುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಸನಗೌಡ ಯತ್ನಾಳ, ಕಾಂಗ್ರೆಸ್ ಗೆದ್ದರೆ, ಸಿದ್ದರಾಮಯ್ಯ ಗೆದ್ದರೆ ಫಿಎಫ್ಐ ಬ್ಯಾನ್ ವಾಪಸ್ಸು ಪಡೆಯುತ್ತಾರೆ. ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಎಟಿಎಂ ಮಾಡಿಕೊಂಡಿದ್ದಾರೆ ಸಿದ್ದರಾಮಯ್ಯ 5 ವರ್ಷದಲ್ಲಿ ಭ್ರಷ್ಟಾಚಾರ ಬಿಟ್ಟು ಏನನ್ನೂ ಮಾಡಲಿಲ್ಲ .ನಿಮ್ಮ ಕಾಲದ ಸರ್ಕಾರ ದೇಶದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸರ್ಕಾರ ಎಂದು ಹೇಳಿದರು
ಲಿಂಗಾಯತ ಸಮಾಜ ಭ್ರಷ್ಟಾಚಾರ ತಂದಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಯಡಿಯೂರಪ್ಪ , ಬೊಮ್ಮಾಯಿ ಯೋಜನೆಗಳನ್ನು ಮುಂದುವರಿಸಿದರು.
ಸಿದ್ದರಾಮಯ್ಯ ಹೇಳಿಕೆ ಇಡೀ ಲಿಂಗಾಯತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಕಾಂಗ್ರೆಸ್ ನಿಜಲಿಂಗಪ್ಪ ವೀರೇಂದ್ರ ಪಾಟೀಲ್ ಅವರನ್ನು ತೆಗೆದು ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದರು.
ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪ್ರಶ್ನೆ ಪ್ರತಿಬಾರಿ ನೀವು ಏಕೆ ಕ್ಷೇತ್ರವನ್ನು ಹುಡುಕುತ್ತೀರಾ ? ಒಂದು ಸಲ ವರುಣಾ, ಒಂದು ಸಲ ಚಾಮುಂಡೇಶ್ವರಿ, ಬಾದಾಮಿ. ಏಕೆ ಕ್ಷೇತ್ರ ಬದಲಾಯಿಸುತ್ತೀರಾ ? ಗೆದ್ಧ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಿಲ್ಲ, ಅದಕ್ಕೆ ಜನ ಅಲ್ಲಿಂದ ಓಡಿಸುತ್ತಾರೆ. ನಿವೃತ್ತಿಯಾಗುವ ನಾಯಕ ಬೇಕಾ? ಭವಿಷ್ಯದ ನಾಯಕ ಬೇಕಾ? ನೀವೆ ನಿರ್ಧರಿಸಿ ಎಂದರು.
ನಮ್ಮ ಸರ್ಕಾರ. ಮುಸ್ಲಿಂ ಮೀಸಲಾತಿ ತೆಗೆದದ್ದು ತಪ್ಪೋ ಸರಿಯೋ ನೀವೇ ಹೇಳಿ?, ಸಿದ್ದರಾಮಯ್ಯ ಗೆದ್ದರೆ ಲಿಂಗಾಯತರ ಮೀಸಲಾತಿ ಹೋಗುತ್ತದೆ. ಮುಸ್ಲಿಂ ಮೀಸಲಾತಿ ಬರುತ್ತದೆ,” ಎಂದು ಹರಿಹಾಯ್ದರು.
ಎಸ್ ಟಿ ಸಮುದಾಯದ ಮೀಸಲಾತಿ ಹೊರಟು ಹೋಗುತ್ತದೆ.ದಲಿತರಿಗೆ ನೀಡಿರುವ ಮೀಸಲಾತಿ ವಾಪಸ್ ತೆಗೆದುಕೊಳ್ಳುತ್ತಾರೆ.
ದೇಶವನ್ನು ಸುರಕ್ಷಿತವಾಗಿಡುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶ್ಮೀರದ ಮೇಲೆ ಅಟ್ಯಾಕ್ ಮಾಡಿದ್ದ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು ಎಂದು ಹೇಳಿದರು.
ಪ್ರತಾಪ್ ಗೌಡ ಪಾಟೀಲ್ ಅವರನ್ನು ಗೆಲ್ಲಿಸಿದರೆ ರಾಜ್ಯದಲ್ಲೇ ಮಸ್ಕಿ ಕ್ಷೇತ್ರ ಮಾದರಿ ಮಾಡುತ್ತೇವೆ. ಭಾಷಣದ ಬಸನಗೌಡ ಯತ್ನಾಳ್ ಭರವಸೆ ನೀಡಿದರು.
ನಮ್ಮ ಪ್ರಣಾಳಿಕೆಯಲ್ಲಿ ವಿಧವೆಯರ ಮಾಸಿಕ ಪಿಂಚಣಿಯನ್ನು 800 ರೂಪಾಯಿಯಿಂದ 2000ಕ್ಕೆ ಏರಿಸಿದ್ದೇವೆ.ಮೂರು ಸಿಲಿಂಡರ್ ಉಚಿತ, ಪ್ರತಿ ದಿನ ಅರ್ಧ ಲೀಟರ್ ಹಾಲು, 5 ಕಿಲೋ ಸಿರಿಧಾನ್ಯ ನೀಡಲು ತೀರ್ಮಾನಿಸಿದ್ದೇವೆ.
ಪ್ರತಾಪ್ ಗೌಡ ಪಾಟೀಲ್ ಎಂತಹ ಕೆಲಸಗಾರ ಅಂತ ಎಲ್ಲರಿಗೂ ಗೊತ್ತು.ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್ 20-25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ.
ಕೇವಲ ಘೋಷಣೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮನೆ ಮನೆಗೆ ಹೋಗಿ ಮತಯಾಚನೆ ಮಾಡಿ ಕರೆ ಎಂದು ನೀಡಿದರು
ನಂತರ ಪ್ರತಾಪ್ ಗೌಡ ಪಾಟೀಲರ ಪರವಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು ಮಸ್ಕಿಯಲ್ಲಿ ಪ್ರತಾಪ ಸಿಂಹ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಬಾರಿಯ ಚುನಾವಣೆ ಅಭಿವೃದ್ಧಿ ಹಾಗೂ ಹಿಮ್ಮುಖ ಚಲನೆ (ರಿವರ್ಸ್) ನಡುವಿನ ಚುನಾವಣೆಯಾಗಿದೆ. ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಬಾರಿ ಬಿಜೆಪಿಗೆ ಮತ ನೀಡಿದರೆ, ಕರ್ನಾಟಕ ಸುರಕ್ಷಿತವಾಗಿರಲಿದೆ. ರೈತನ ಬದುಕು ಉದ್ಧಾರವಾಗಲಿದೆ. ರಾಜ್ಯದ ಭವಿಷ್ಯದಲ್ಲಿ ಸುವರ್ಣಯುಗವಾಗಲಿದೆ. ಆದರೆ, ಕಾಂಗ್ರೆಸ್ಗೆ ಮತ ನೀಡಿದರೆ ಅದು ದೆಹಲಿಯ ಎಟಿಎಂ ಆಗಲಿದೆ’ ಎಂದರು.
‘ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಸ್ಲಿಮರ ಶೇ 4ರಷ್ಟು ಮೀಸಲಾತಿ ತೆಗೆದು ಒಕ್ಕಲಿಗರು, ಲಿಂಗಾಯತ, ಹಿಂದುಳಿದ ವರ್ಗಗಳು, ಎಸ್ಸಿ ಹಾಗೂ ಎಸ್ಟಿಗೆ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮತ್ತೆ ಮೀಸಲಾತಿ ನೀಡುತ್ತದೆ ಎಂದು ಹೇಳಿದೆ. ಈಗ ಬಿಜೆಪಿ ಹೆಚ್ಚಿಸಿರುವ ಮೀಸಲಾತಿಯನ್ನು ತೆಗೆದು ಹಾಕಲಿದೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದು ವ್ಯಂಗವಾಡಿದ್ದಾರೆ. ಆದರೆ ಮೋದಿ ಅವರನ್ನು ಹೀಯಾಳಿಸಿದಷ್ಟೂ ಕಮಲ ಹೆಚ್ಚು ಅರಳಲಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುತ್ತಿದೆ. ಆದರೆ ಗ್ಯಾರಂಟಿ ಯಾವುದು ಗೊತ್ತಾ? ಭ್ರಷ್ಟಾಚಾರದ ಗ್ಯಾರಂಟಿ, ಕುಟುಂಬ ರಾಜಕಾರಣದ ಗ್ಯಾರಂಟಿ, ರಾಜ್ಯದಲ್ಲಿ ಗಲಾಟೆ ಮಾಡಿಸುವ ಗ್ಯಾರಂಟಿ’ ಎಂದು ಟೀಕಿಸಿದರು.
‘ಕಾಶ್ಮೀರ ನಮ್ಮದು. ಕಾಂಗ್ರೆಸ್ ಮಾಡದ ಸಾಧನೆಯನ್ನು ಬಿಜೆಪಿ ಮಾಡಿದೆ. ಸಂವಿಧಾನದ ಕಲಂ 370 ಅನ್ನು ರದ್ದು ಮಾಡುವ ಮೂಲಕ ಬಿಜೆಪಿ ತನ್ನ ತನವನ್ನು ಪ್ರದರ್ಶಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ₹ 94 ಸಾವಿರ ಕೋಟಿ ಮಾತ್ರ ಅನುದಾನ ನೀಡಲಾಗುತ್ತಿತ್ತು. ಮೋದಿ ಸರ್ಕಾರ ರಾಜ್ಯಕ್ಕೆ ₹ 2.40 ಲಕ್ಷ ಸಾವಿರ ಕೋಟಿ ಅನುದಾನ ನೀಡಿದೆ.
2024ಕ್ಕೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕಾದರೆ ಇಲ್ಲಿಂದ ಪ್ರತಾಪ್ ಗೌಡ ಪಾಟೀಲ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು’
‘ಜನತೆ ಈ ಬಾರಿ ಪ್ರತಾಪ್ ಗೌಡ ಪಾಟೀಲರ ಗೆಲುವಿಗೆ ಶ್ರಮಿಸಬೇಕು.ಈ ಕ್ಷೇತ್ರದಿಂದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ನೀಡುವ ಮತ ಅವರಿಗೆ ಮಾತ್ರ ಸೀಮಿತವಾಗುವುದಿಲ್ಲ. ದೇಶದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರ ಎಂದರೆ ಅದು ಭ್ರಷ್ಟಾಚಾರ, ಕುಟುಂಬವಾದದ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿದ್ದಾಗ ಅದು ದೆಹಲಿಯ ಎಟಿಎಂ ಆಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ನಡೆದಿದೆ. ಬಿಜೆಪಿ ಸರ್ಕಾರ ಮಾತ್ರ ರೈತರ ಪರವಾಗಿ ನಿಂತಿದೆ. ಯಡಿಯೂರಪ್ಪ ಅವರು ರೈತ ಪರ ಬಜೆಟ್ ಮಂಡಿಸಿದ್ದರು’ ಎಂದರು.
ಈ ವೇಳೆ ಮನಷಕ್ ಮಾಂಡೆ ಜಿ ಕೇಂದ್ರ ಆರೋಗ್ಯ ಸಚಿವರು, ಬಸನಗೌಡ ಪಾಟೀಲ್ ಯತ್ನಾಳ, ಪ್ರತಾಪ್ ಸಿಂಹ, ಚನ್ನಮಲ್ಲಿಕಾರ್ಜುನ, ಸತೀಶ್ ಚಂದ್ರ ದಿವೇಧಿ, ಅಮರೇಗೌಡ ವಿರುಪಾಪುರ ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.