ಏಪ್ರಿಲ್ 29. ರಾಜ್ಯದ್ಯಂತ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 2 ರಂದು ಸಿಂಧನೂರು ನಗರಕ್ಕೆ ಆಗಮಿಸಲಿದ್ದಾರೆ.
ಸಿಂಧನೂರು ಗಂಗಾವತಿಯ ಮುಖ್ಯ ರಸ್ತೆಯ ಹೊಸಳ್ಳಿ ಕ್ಯಾಂಪಿನಲ್ಲಿ ಪ್ರಚಾರದ ಸಭೆ ಹಮ್ಮಿಕೊಂಡಿದ್ದು ಇದಕ್ಕಾಗಿ ರಾಯಚೂರು ಜಿಲ್ಲಾಧಿಕಾರಿಗಳು ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಿದ್ದಾರೆ.
ತಾಲೂಕಿನ ಹೊಸಳ್ಳಿ ಕ್ಯಾಂಪಿನಲ್ಲಿ ಜರಗಲಿರುವ ಬಿಜೆಪಿ ಪಕ್ಷದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಮಾನ್ಯ ನರೇಂದ್ರ ಮೋದಿಯವರು, ಮಾನ್ಯ ಮುಖ್ಯಮಂತ್ರಿಗಳು, ಸಚಿವರು ಕೇಂದ್ರ ಸಚಿವರು ಶಾಸಕರು ಸಂಸದರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಆಗಮಿಸುತ್ತಿದ್ದು ಈ ಸಮಾವೇಶದಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಜನರು ಭಾಗವಹಿಸುವುದಾಗಿ ತಿಳಿದು ಬಂದಿರುತ್ತದೆ ಆದ್ದರಿಂದ ಈ ಕಾರ್ಯಕ್ರಮದ ವ್ಯವಸ್ಥೆಯು ಸಿಂಧನೂರು ಮತ್ತು ಗಂಗಾವತಿಯ ರಸ್ತೆಗೆ ಹೊಂದಿಕೊಂಡಿದ್ದು ಸಾವಿರಾರು ವಾಹನಗಳು ಆಗಮಿಸಲಿದ್ದು ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಬದಲಾವಣೆಗೆ ವಿವರಗಳು
1).ರಾಯಚೂರು ಕಡೆಯಿಂದ ಸಿರುಗುಪ್ಪ ಮತ್ತು ಗಂಗಾವತಿಗೆ ಸಂಚರಿಸುವ ವಾಹನಗಳು ಜವಳಗೇರ ಹತ್ತಿರ ಬರುವ ಕನಕದಾಸ ವೃತ್ತದಿಂದ ಮಾರ್ಗ ಬದಲಾವಣೆ ಮಾಡಿ. ಆರ್ ಎಚ್ ಕ್ಯಾಂಪ್ 04 ಅಲಬನೂರು ಬ್ರಿಡ್ಜ್ ಮಾರ್ಗವಾಗಿ ಸಂಚರಿಸುವುದು.
(ರಾಯಚೂರು ಕಡೆಯಿಂದ ಸಿಂಧನೂರು ಮತ್ತು ಕುಷ್ಟಗಿ ಕಡೆ ಸಂಚರಿಸುವ ವಾಹನಗಳಿಗೆ ಯಾವುದೇ ಮಾರ್ಗ ಬದಲಾವಣೆ ಇರುವುದಿಲ್ಲ.)
2).ಮಸ್ಕಿ ಕಡೆಯಿಂದ ಸಿರುಗುಪ್ಪ ಮತ್ತು ಗಂಗಾವತಿಗೆ ಸಂಚರಿಸುವ ವಾಹನಗಳು ಸಿಂಧನೂರು ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮುಖಾಂತರ ಒಳಬಳ್ಳಾರಿ ಕ್ರಾಸ್, ಗೋಮರ್ಸಿ, ಮಾಡಿಸಿರವಾರ ಸಿರುಗುಪ್ಪ ಮಾರ್ಗವಾಗಿ ಸಂಚರಿಸುವುದು.
3). ಕುಷ್ಟಗಿ ಕಡೆಯಿಂದ ಗಂಗಾವತಿಗೆ ಸಂಚರಿಸುವ ವಾಹನಗಳು ಗುಂಜಳ್ಳಿ ಕ್ಯಾಂಪನಿಂದ ಕೆ. ಹೊಸಳ್ಳಿ ವೆಂಕಟೇಶ್ವರ ಕ್ಯಾಂಪ್, ಜಂಬುನಾಥನಹಳ್ಳಿ ಜಾಲಹಳ್ಳಿ ಮಾರ್ಗವಾಗಿ ಸಂಚರಿಸುವುದು.
4). ಸಿರುಗುಪ್ಪ ದಿಂದ ಗಂಗಾವತಿಗೆ ಹೋಗುವಂತ ವಾಹನಗಳು ವೆಂಕಟೇಶ್ವರ ಕ್ಯಾಂಪ್ ಅಂಬಾಮಠ ಕಮಾನು ಸೋಮ್ಲಾಪುರ-ರೌಡಕುಂದ ಮಾರ್ಗವಾಗಿ ಸಂಚರಿಸುವುದು.
5)ಸಿರುಗುಪ್ಪ ದಿಂದ ಗಂಗಾವತಿಗೆ ಮತ್ತು ರಾಯಚೂರು ಕಡೆಗೆ ಸಂಚರಿಸುವ ವಾಹನಗಳು ಅಲುಬನೂರ ಕ್ರಾಸ್, ಬೆಳಗುರ್ಕಿ ಮಾಡಿಸಿರವಾರ ಮಾರ್ಗವಾಗಿ ಸಂಚರಿಸುವುದು.
6)ಗಂಗಾವತಿ ದಿಂದ ಸಿಂಧನೂರು ಮತ್ತು ಕುಷ್ಟಗಿ ಕಡೆಗೆ ಹೋಗುವಂತಹ ವಾಹನಗಳು ಗೊರೇಬಾಳ ಕ್ಯಾಂಪ್, ಗಾಂಧಿನಗರ ಕ್ರಾಸ್-ಸತ್ಯವತಿ ಕ್ಯಾಂಪ್ ಗಾಂಧಿನಗರ-ವೆಂಕಟೇಶ್ವರ ಕ್ಯಾಂಪ್ ,ಕೆ. ಹೊಸಳ್ಳಿ ಗುಂಜಳ್ಳಿ ಕ್ಯಾಂಪ್ ಮಾರ್ಗವಾಗಿ ಸಂಚರಿಸುವುದು