ಸಿಂಧನೂರು ಅ.14-ತಾಲೂಕ ದಲಿತ ಸಾಹಿತ್ಯ ಪರಿಷತ್ ಯುವ ಘಟಕದ ವತಿಯಿಂದ ದಿನಾಂಕ ಅಕ್ಟೋಬರ್ 31ರಂದು ಸಿಂಧನೂರು ತಾಲೂಕ ದಲಿತ ಸಾಹಿತ್ಯ ಪರಿಷತ್ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ, ಜಿಲ್ಲಾ ಯುವ ಕವಿಗೋಷ್ಠಿ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಬಿ. ಮಂಜಮ್ಮ ಜೋಗತಿ ಅವರ ಜೀವನಾಧಾರಿತ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಬೆಂಗಳೂರಿನ ಕಾಜಾಣ ಕಲಾವಿದರಿಂದ ಸಿಂಧನೂರಿನ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕದ ಸಾಹಿತ್ಯಿಕ ಸಲಹೆಗಾರರಾದ ಹೆಚ್.ಕೆ ದಿದ್ದಿಗಿ ಮತ್ತು ತಾಯಪ್ಪ ತಿಡಿಗೋಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಗದಗನ 30 ವರ್ಷ ತುಂಬಿದ ಸಂಭ್ರಮದ ನೆನಪಿಗಾಗಿ 30 ಜನ ಯುವ ಕವಿಗಳ ಕವಿಗೋಷ್ಠಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ 40 ವರ್ಷದ ಒಳಗಿನ ರಾಯಚೂರು ಜಿಲ್ಲೆಯ ಯುವ ಕವಿಗಳು ಭಾವೈಕ್ಯತೆಯ ಭಾರತ ಎಂಬ ಆಶಯಗಳನ್ನು ಒಳಗೊಂಡ ಕವಿತೆಗಳನ್ನು ವಾಚಿಸಲು ಅಕ್ಟೋಬರ್ 21ರ ಒಳಗಾಗಿ ತಮ್ಮ ಹೆಸರನ್ನು ಹೆಚ್.ಕೆ ದಿದ್ದಿಗಿ (98444 01222) ತಾಯಪ್ಪ ತಿಡಿಗೋಳ (97312 66979) ಇವರಲ್ಲಿ ನೋಂದಾಯಿಸಲು ತಿಳಿಸಲಾಗಿದೆ.