ರಾಯಚೂರು.ಅ.೦೬ ಹೆಣ್ಣು ಮಕ್ಕಳು ಋತುಮತಿಯಾದಾಗ ಬಟ್ಟೆ, ಸ್ಯಾನಿಟರಿ ಪ್ಯಾಡ್ ಬಳಸುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಕಪ್ನ್ನು ಪ್ರತಿಯೊಬ್ಬ ಮಹಿಳೆಯರು ಸದುಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಹೇಳಿದರು.
ಅವರು ಅ.೦೬ರ(ಶುಕ್ರವಾರ) ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಟಾಟಾ ಎಲ್ಕಿ÷್ಸ ಲಿಮಿಟೆಡ್ ಸಿಎಸ್ಆರ್ ಇವರು ಆಯೋಜಿಸಿದ ಥಿಂಕಲ್ ನವೀನ್ ಯೋಜನೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯ ಮುಟ್ಟಿನ ಚಕ್ರವು ೨೮ ದಿನಗಳಿಗೊಮ್ಮೆ ಹಾಗೂ ತಿಂಗಳಲ್ಲಿ ಸಾಮಾನ್ಯವಾಗಿ ಐದು ದಿನಗಳ ಕಾಲ ರಕ್ತಸ್ರಾವ ಉಂಟಾಗುತ್ತದೆ, ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸುಮಾರು ಆರು ವರ್ಷಗಳಷ್ಟು ಅವಧಿ ಋತುಚಕ್ರದಲ್ಲಿಯೇ ಕಳೆಯುತ್ತಾಳೆ ಎಂದರು.
ಋತುಮತಿಯಾದಾಗ ಕಡಿಮೆ ಎಂದರೂ ದಿನಕ್ಕೆ ಮೂರು ಪ್ಯಾಡ್ಗಳನ್ನು ಉಪಯೋಗಿಸುವುದರಿಂದ ತನ್ನ ಜೀವಿತಾವಧಿಯಲ್ಲಿ ೧೦ ರಿಂದ ೧೨ ಸಾವಿರ ಪ್ಯಾಡ್ಗಳನ್ನು ಬಳಸುತ್ತಾರೆ. ಪೊಲೀಸ್ ಸಿಬ್ಬಂದಿಗೆ ನಿಗದಿತ ಸಮಯ ಇರುವುದಿಲ್ಲ. ಟ್ರಾಫಿಕ್ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಪೀರಿಯಡ್ಸ್ ಆದರೆ ಕಷ್ಟವಾಗುತ್ತದೆ ಅವಾಗ ಕಪ್ ಬಳಸುವುದರಿಂದ ತೊಂದರೆ ಇರುವುದಿಲ್ಲ ಎಂದರು.
ಕಪ್ ಬಳಕೆ ಮಾಡುವಂತೆ ಸಲಹೆ ನೀಡಿದರು. ಋತುಚಕ್ರದ ಕಾರಣಕ್ಕೆ ಹೆಣ್ಣುಮಕ್ಕಳು ಚಟುವಟಿಕೆಯಿಂದ ಹಿಂದೆ ಸರಿಯುವುದನ್ನು ತಡೆಯಲು ಮುಟ್ಟಿನ ಕಪ್ ಸಹಕಾರಿ, ನನ್ನ ವೈಯಕ್ತಿಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ಕಪ್ಗಳನ್ನು ಬಳಸುವುದರಿಂದ ಮಹಿಳೆಯರಲ್ಲಿ ಅವರ ದೇಹದ ಬಗ್ಗೆ ಮೂಡಿಸುತ್ತದೆ. ನಿರ್ಬಂಧಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಅತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು. ದೂರ ಪ್ರಯಾಣದ ಸಂದರ್ಭದಲ್ಲಿ ಮುಟ್ಟಿನ ಕಪ್ ಮಹಿಳೆಯರಿಗೆ ಸಹಕಾರಿಯಾಗಲಿದೆ. ಮುಟ್ಟಿನ ಮಹಿಳೆಯರಲ್ಲಿ ಭೇದ ಎಂ-ಕಪ್ಗಳ ಬಳಕೆಯನ್ನು ಉತ್ತೇಜಿಸುವುದು ಕಡಿಮೆ ಘನ ತ್ಯಾಜ್ಯ ಉತ್ಪಾದನೆ, ಸಾರ್ವಜನಿಕ ಆರೋಗ್ಯದ ನಮ್ಮ ಅಪಾಯವನ್ನು ಕಡಿಮೆ ಮಾಡುವುದು, ಸುಧಾರಿತ ಮುಟ್ಟಿನ ಆರೋಗ್ಯ, ಸುರಕ್ಷತೆ, ಅನುಕೂಲತೆ ಮತ್ತು ಸಾಧ್ಯ ಮಹಿಳೆಯರಿಗೆ ಸ್ವಾತಂತ್ರ ದಂತಹ ಶಾಶ್ವತ ಪರಿಣಾಮ ಬೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಅಸೋಸಿಯೇಟ್ ಮ್ಯಾನೇಜರ್ ಸಂದೀಪ್ ಚೌವ್ಹಾಣ, ಐಎಎಸ್ ಅಧಿಕಾರಿ ಸಾಹಿತ್ಯ, ಜಿಲ್ಲಾ ಯೋಜನಾ ನಿರ್ದೇಶಕರಾದ ಪ್ರಕಾಶ ವಿ, ಎಚ್ಎಲ್ಎಲ್ ಲೈಫ್ ಕೇರ್ ಲಿಮಿಟೇಡ್ ಸಿನಿಯರ್ ಮ್ಯಾನೇಜರ್ ಮನೋಜ, ಜಿಲ್ಲಾ ಆರ್.ಸಿ ಎಚ್ ಅಧಿಕಾರಿ ಡಾ.ನಂದಿತಾ, ಸ್ತಿ ರೋಗ ತಜ್ಞರು ಡಾ.ಶ್ರೀಲತಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು.