ಸಿಂಧನೂರು-25 ಕಾ.ನಿ.ಪ.ಧ್ವನಿ ರಾಯಚೂರು ಹಾಗೂ ತಾಲೂಕ ಘಟಕ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಪದಾಧಿಕಾರಿಗಳ ಪದಗ್ರಹಣ. ಹಾಗೂ ವಿಶ್ವ ಪತ್ರಿಕ ದಿನಾಚರಣೆ ಮತ್ತು ಕ್ರಾಂತಿ ಜ್ಯೋತಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಿಂಧನೂರಿನ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಡಾ!! ಶ್ರೀ ಸಿದ್ದರಾಮೇಶ್ವರ ಶರಣರು ರೌಡಕುಂದಾ. ಹಾಗೂ ಗಣ್ಯ ಮಾನ್ಯರಿಂದ ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ನಂತರ ಸಿಂಧನೂರು ತಾಲೂಕ್ ಅಧ್ಯಕ್ಷರಾದ ಎಸ್ ಎಸ್ ಜೀನೂರ್ ಹಾಗೂ ಜಿಲ್ಲಾಧ್ಯಕ್ಷರಾದ ಹನುಮಂತ ನಂದಿಹಾಳ ಅವರ ನೇತೃತ್ವದಲ್ಲಿ ಸಿಂಧನೂರು ತಾಲೂಕಿನ ಹಲವು ಪತ್ರಕರ್ತರು ಕರ್ನಾಟಕ ಕಾರ್ಯಕರ್ತರ ಧ್ವನಿ ಸಂಘಟನೆಯಲ್ಲಿ ಸೇರ್ಪಡೆಯಾದರು ಅದೇ ರೀತಿ ಆತ್ಮೀಯ ಸ್ನೇಹಿತರಾದ ಶಂಕರ್ ನಾಯಕ್ ತುರುವಿಹಾಳ ಇವರ ಸಾರಥ್ಯದಲ್ಲಿ ಕ್ರಾಂತಿ ಜ್ಯೋತಿ ಪತ್ರಿಕೆಯನ್ನು ವೇದಿಕೆ ಮೇಲೆ ಉಪಸ್ಥಿತರಿರುವ ಪೂಜ್ಯರು ಹಾಗೂ ಗಣ್ಯರಿಂದ ಕ್ರಾಂತಿ ಜ್ಯೋತಿ ಪತ್ರಿಕೆ ಲೋಕಾರ್ಪಣೆ ಮಾಡಲಾಯಿತು. ಪ್ರಾಸ್ತಾವಕವಾಗಿ ಮಾತನಾಡಿದ ರಾಜ್ಯದ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ವಿಶ್ವ ಪತ್ರಿಕ ದಿನಾಚರಣೆ ಹಾಗೂ ಸಿಂಧನೂರು ತಾಲೂಕು ಪದಾಧಿಕಾರಿಗಳ ಪದಗ್ರಹಣ ಮತ್ತು ಕ್ರಾಂತಿ ಜ್ಯೋತಿ ಪತ್ರಿಕ ಬಿಡುಗಡೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಅದೇ ರೀತಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯ ಕಾರ್ಯದರ್ಶಿ ಎಂ ಇಸಾಕ್ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಾಗೂ ರಾಯಚೂರು ಜಿಲ್ಲಾ ಘಟಕ ಹಾಗೂ ಸಿಂಧನೂರು ತಾಲೂಕ ಘಟಕ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ದಂಪತಿಗಳ 26ನೇ ವಾರ್ಷಿಕ ವಿವಾಹ ಮಹೋತ್ಸವವನ್ನು ಲಿಂಗಸಗೂರು ತಾಲೂಕು ಅಧ್ಯಕ್ಷರಾದ ಶ್ರೀನಿವಾಸ್ ಮಧುಶ್ರೀ. ವಿಘ್ನೇಶ್ ಹಿರೇನಗನೂರು. ಯೋಗಪ್ಪ ದೊಡ್ಮನಿ. ಹಾಗೂ ಮಾನ್ವಿ. ಸಿರಿವಾರ.ಮಸ್ಕಿ. ಸಿಂಧನೂರು. ಪದಾಧಿಕಾರಿಗಳು ಕೇಕ್ ಶಾಲ್ ಶಾಲು ಹಾರ ಹಾಗೂ ಉಡುಗೊರೆ ಕೊಡುವ ಮೂಲಕ ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು.
ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ ಡಾ!! ಶ್ರೀ ಸಿದ್ದರಾಮೇಶ್ವರ ಶರಣರು ಮಾತನಾಡಿ ಮಾಧ್ಯಮದವರು ಆಯ ಒಂದು ಪಕ್ಷಗಳಿಗೆ ಒತ್ತಿ ಬಿದ್ದು. ತಮ್ಮ ಒಂದು ಪ್ರವೃತ್ತಿಯನ್ನು ಮರೆತು ಏನೇನೋ ಮಾಡುತ್ತಾ ಇದ್ದಾರೆ. ದಯವಿಟ್ಟು ಪತ್ರಿಕ ಮಾಧ್ಯಮದವರು ಒಳ್ಳೆಯ ವರದಿಗಾರನಾಗಬೇಕು. ತಮ್ಮ ಲೇಖನ ಅರಿತವಾಗಿರಬೇಕು.
ಈ ಸಮಾಜದಲ್ಲಿ ನಡೆಯುತ್ತಿರುವಂತ ಓರೆ ಕೋರೆಗಳನ್ನು ತಿದ್ದುವಂತ ಶಕ್ತಿ ಗುರುವಿಗೆ ಮೊದಲನೇ ಸ್ಥಾನ ಇದ್ದರೆ. ಎರಡನೆಯ ಸ್ಥಾನ ಮಾಧ್ಯಮದವರು ಇರುತ್ತಾರೆ. ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವಂತ ಶಕ್ತಿ ನಿಮ್ಮದಾಗಿದ್ದಾಗ. ನೀವು ಯಾವುದೇ ಒಂದು ಆಮಿಷಕ್ಕೆ ಒಳಗಾಗದೆ. ನಿಷ್ಟೂರವಾದಿಗಳಾಗಿ. ನೇರವಾಗಿ. ದಿಟ್ಟತನದಿಂದ. ಧೈರ್ಯವಾಗಿ. ನೀವು ಮುನ್ನುಗ್ಗಿದ್ದೆ ಆದರೆ. ನಿಮ್ಮ ಪತ್ರಿಕೆಗಳ ಸಂಪಾದಕರಿಗೂ. ವರದಿಗಾರರಾದ ನಿಮಗೂ. ಒಳ್ಳೆಯ ಕೀರ್ತಿ ಬರುತ್ತದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಮಾತನಾಡಿದ ಡಾ. ದೇವರಾಜ್ ಮುಖ್ಯ ದಂತ ವೈದ್ಯರು ಸರ್ಕಾರ ಆಸ್ಪತ್ರೆ ಸಿಂಧನೂರು ಅವರು ಅತ್ಯಂತ ತುಂಬಾ ಒಳ್ಳೆಯ ಕಾರ್ಯಕ್ರಮವನ್ನು ನಮ್ಮ ಪತ್ರಿಕೆ ಸ್ನೇಹಿತರು ಹಮ್ಮಿಕೊಂಡಿದ್ದಾರೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಪತ್ರಕರ್ತರ ನೋವು ನಲಿವುಗಳು ಕೂಡ ನಮ್ಮಂತವರಿಗೆ ಅರ್ಥವಾಗುತ್ತದೆ ಸಮಾಜಕ್ಕೆ ಕೂಡ ಪತ್ರಕರ್ತರು ಏನು ಎಂದರೆ ಗೊತ್ತಾಗುತ್ತದೆ ಇಲ್ಲಿ ಯಾವ ಸಮಾಜಸೇವಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಕೂಡ ಸಂತೋಷದ ಸಂಗತಿ ಮುಂದಿನ ದಿನಗಳಲ್ಲಿ ಪತ್ರಕರ್ತರ ಬಾಳು ಬೆಳಕಾಗಲಿ ನಿಮ್ಮೆಲ್ಲರಿಗೂ ಆ ದೇವರು ಸುಖ ಶಾಂತಿ ನೆಮ್ಮದಿ ಅಷ್ಟೈಶ್ವರ್ಯಗಳನ್ನು ಕೊಟ್ಟು ಕಾಪಾಡಲಿ ಮತ್ತು ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದಕ್ಕೆ ತಮ್ಮೆಲ್ಲರಿಗೂ ಕೂಡ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಗ್ಲೆ ಮಲ್ಲಿಕಾರ್ಜುನ್ ರಾಜ್ಯಾಧ್ಯಕ್ಷರು ಕಾರ್ಯದರ್ಶಿ ಎಂ ಇಸಾಕ್. ರಾಯಚೂರು ಜಿಲ್ಲೆಯ ಕಾ.ನಿ.ಪ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರುಗಳು. ಎಲ್ಲಾ ಪದಾಧಿಕಾರಿಗಳು ಸಿಂಧನೂರಿನ ಅನೇಕ ಗಣ್ಯ ಮಾನ್ಯರು ವಿದ್ಯಾರ್ಥಿಗಳು ನಿರೂಪಕರಾದ ಸಂಗೀತ ಸಾರಂಗಮಠ ಸ್ವಾಗತಕಾರರಾದ ಅಮೃತ ಅಮರೇಶ ಅಂಗಡಿ ಸಿಂಧನೂರು ಭಾಗವಹಿಸಿದ್ದರು.