ರಾಯಚೂರು,ಆ.20,(ಕರ್ನಾಟಕ ವಾರ್ತೆ):- ಬ್ರಹ್ಮ ಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಪ್ರತಿಪಾದಿಸಿ ಸಮಾನತೆ ಎತ್ತಿ ಹಿಡಿದಿದ್ದು, ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು. ಅವರು ಆ.20ರ ಮಂಗಳವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ನಾರಾಯಣ ಗುರುಗಳು ಸಾಮಾಜಿಕ ಕಳಕಳಿ ಅನನ್ಯ. ಶ್ರೀಗಳು ಊರು, ಕುಟುಂಬ ತ್ಯಜಿಸಿ ಕೆಳಜಾತಿಯವರ ಏಳ್ಗೆಗೆ ಶ್ರಮಿಸಿದರು. ಜಾತಿವಾದ, ಮೂಢನಂಬಿಕೆ ವಿರುದ್ಧ ಹೋರಾಡಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯಬೇಕೆಂದರು. ಈಡಿಗ ಸಮಾಜವು ವ್ಯಾಪರ ಸೇರಿದಂತೆ ಹಲವು ಕೆಲಸಗಳನ್ನು= ನಿರ್ವಹಿಸುವವರಾಗಿದ್ದು, ಶಾಂತಿ ಮತ್ತು ಸೌಮ್ಯ ಪ್ರೀಯರಾಗಿದ್ದಾರೆ. ಬ್ರಹ್ಮ ಶ್ರೀ ನಾರಾಯಣ ಗುರುಗಳು ಜಾತಿ ವ್ಯವಸ್ಥೆಯಲ್ಲಿ ಸಮಾನತೆಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದವರು.
ಇದೆ ಸಮಾಜದಿಂದ ಬಂದ ಬಂಗಾರಪ್ಪ ಅವರ ಕೊಡುಗೆ ಸಹ ರಾಜ್ಯಕ್ಕೆ ಅಪಾರವಾಗಿದೆ ಎಂದು ಹೇಳಿದರು. ಈ ವೇಳೆ ರಾಯಚೂರು ಲೋಕಸಭೆ ಕ್ಷೇತ್ರದ ಸಂಸದರಾದ ಜಿ.ಕುಮಾರ ನಾಯಕ ಅವರು ಮಾತನಾಡಿ, ಹಿರಿಯ ಸಮಾಜಸುಧಾರಕರು, ಸಂತರು ಬ್ರಹ್ಮ ಶ್ರೀನಾರಾಯಣ ಗುರುಗಳು ತಮ್ಮ ಆತ್ಮೋದ್ಧಾರಕ್ಕಾಗಿ ಶ್ರಮಿಸದೆ ಸಮಾಜದ ಏಳಿಗೆಗಾಗಿ, ಸಮಾಜದಲ್ಲಿನ ಮೇಲು-ಕೀಳು ವ್ಯವಸ್ಥೆಯನ್ನು ತೊಲಗಿಸುವ ಕೆಲಸಕ್ಕೆ ಕೈ ಹಾಕಿದವರು ನಾರಯಣಗುರುಗಳು. ಇವರು ಕಾರ್ಯ ಕೇವಲ ಕೇರಳಕ್ಕೆ ಮಾತ್ರ ಸೀಮೀತವಾಗದೆ ದೇಶದದ್ಯಾಂತ ಪ್ರಚಾರವನ್ನು ಪಡೆದರು. ಕನ್ನಡ ಕಂಪು ಹಬ್ಬಿಸಿದ ಡಾ. ರಾಜಕುಮಾರ್, ಪತ್ರಿಕಾ ಕ್ಷೇತ್ರದ ನೆಟಗಲ್ಪ್ಪ ಹಾಗೂ ಬಂಗಾರಪ್ಪ ಸಹ ಇದೆ ಸಮಾಜದವರು ಎಂದರು. ವಿಶೇಷ ಉಪನ್ಯಾಸಕರಾದ ನಾಗರಾಜ ಗಂಗಾವತಿ ಅವರು ಮಾತನಾಡಿ, ಬ್ರಹ್ಮ ಶ್ರೀ ನಾರಾಯಣಗುರುಗಳ ಜೀವನ, ವ್ಯಕ್ತಿತ್ವವನ್ನು ಪರಿಚಯಿಸಿ ಜಯಂತಿಗಳನ್ನು ಕುಣಿತಕ್ಕೆ ಸೀಮಿತಮಾಡದೆ ಅವರ ವಿಚಾರಗಳನ್ನು ತಿಳಿದುಕೊಳ್ಳುವ ಮತ್ತು ಪಾಲಿಸುವ ಕೆಲಸವಾಗಬೇಕೆಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಸುರೇಶ ವರ್ಮಾ, ವಿವಿಧ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರಾದ ಎನ್.ಬಸವರಾಜ ಗೌಡ, ಎಮ್. ನರಸಣ್ಣ ಗೌಡ ಇದ್ದರು.