ಏಪ್ರಿಲ್ 14. ಸಿಂಧನೂರು ವಿಧಾನಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಲು ಮತ್ತು ಮತದಾರರನ್ನು ಸೆಳೆಯಲು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ ಇತ್ತೀಚಿಗೆ ಅಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಕೆ ಕರಿಯಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ ಹಿನ್ನೆಲೆ KRPP ಪಕ್ಷ ತೊರೆದು
ನಿನ್ನೆ ದಿನ KRPP ಪಕ್ಷದ ಯುವ ಘಟಕದ ಅಧ್ಯಕ್ಷರಾದ ಹನುಮನಗೌಡ ಹಟ್ಟಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು ಈ ದಿನ ಅವರು ತಮ್ಮ ಆತ್ಮೀಯ ಸ್ನೇಹಿತರಾದ ಶಿವು ಹಿರೇಮಠ ಸೇರಿಕೊಂಡು KRPP ಪಕ್ಷವನ್ನು ತೊರೆದು ನೂರಾರು ಯುವಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
KRPP ಪಕ್ಷ ತೊರೆದು ಸುಮಾರು 100ಕ್ಕೂ ಹೆಚ್ಚು ಯುವಕರು ಇಂದು ಭಾರತೀಯ ಜನತಾ ಪಾರ್ಟಿಯ ಪಕ್ಷ ಸಿದ್ಧಾಂತ ಮೆಚ್ಚಿ ನಾಯಕರಾದ ಕೊಲ್ಲಾ ಶೇಷಗಿರಿ ರಾವ್ ತುಂಗಭದ್ರಾ ಕಾಡಾ ಅಧ್ಯಕ್ಷರು, ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಕೆ.ಕರಿಯಪ್ಪ, ಮಧ್ವರಾಜ್ ಆಚಾರ್ಯ ಎಂ.ದೊಡ್ಡ ಬಸವರಾಜ್,ಪರಮೇಶಪ್ಪ ಹಾದಿಮನಿ ಶಿವಬಸನಗೌಡ ಗೊರೆಬಾಳ್ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ ಹಾಗೂ ನಿರುಪಾದಪ್ಪ ಜೋಳದರಾಶಿ ಶಿವು ಹಿರೇಮಠ ಹನುಮೇಶ್ KMS ಪ್ರಶಾಂತ ಕೆ. ರವಿ ಕುಂಭರ ಇನ್ನು ಮುಂತಾದ ಮುಖಂಡರು ಭಾಗವಹಿಸಿದ್ದರು