ಏಪ್ರಿಲ್ 18. ಸಿರುಗುಪ್ಪ ನಗರದ ತಾಲೂಕು ಕ್ರೀಡಾಂಗಣದಿಂದ ತಾಲೂಕು ಕಛೇರಿಯ ಆವರಣದವರೆಗೂ ಸಹಸ್ರಾರು ಜನಸಂಖ್ಯೆಯ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಬಳಗದೊಂದಿಗೆ ಪ್ರಮುಖ ಬೀದಿಯಲ್ಲಿನ ಶ್ರೀ ಕನಕದಾಸ ವೃತ್ತ, ಶ್ರೀ ವಾಲ್ಮೀಕಿ ವೃತ್ತ, ಹಾಗೂ ಮಹಾತ್ಮ ಗಾಂಧೀಜಿ ವೃತ್ತಗಳ ಮೂಲಕ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಅಪಾರ ಜನಸ್ತೋಮದೊಂದಿಗೆ ಕೇಸರಿ ಪಡೆಯ ಶಕ್ತಿ ಪ್ರದರ್ಶನ ನಡೆಯಿತು.
ದಾರಿಯುದ್ದಕ್ಕೂ ಕಾರ್ಯಕರ್ತರು ವಾದ್ಯಗಳು ಹಾಗೂ ದ್ವನಿವರ್ಧಕಗಳ ಹಾಡಿಗೆ ಕುಣಿದು ಸಂಭ್ರಮಿಸಿದರು. ಡಬಲ್ ಇಂಜಿನ್ ಸರ್ಕಾರದ ಘೋಷಣೆಗಳು, ಅಭ್ಯರ್ಥಿಯ ಪರವಾದ ಜಯ ಘೋಷಗಳು ಮಾರ್ಧನಿಸಿದವು.
ಅದ್ದೂರಿ ಮೆರವಣಿಗೆಯ ಮೂಲಕ ಆಗಮಿಸಿದ ಶಾಸಕ ಎಂ.ಎಸ್.ಸೋಮಲಿಂಗಪ್ಪ ತಂದೆ ಎಂ.ಸಿದ್ದಪ್ಪ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮದ್ಯಾಹ್ನ ಚುನಾವಣಾಧಿಕಾರಿ ಸತೀಶ್ ಅವರಿಗೆ ನಾಮಪತ್ರ ಸಲ್ಲಿಸಿದರು