ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಬೆಳೆ ಹಾನಿ.ಪರಿಹಾರ ಸಿಗದಿದ್ದರೆ ಸೋಮವಾರ ಉಪವಾಸ ಸತ್ಯಾಗ್ರಹ ಎಚ್ಚರಿಕೆ

ರಾಯಚೂರು

ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ರೈತರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಭಾರೀ ಮಳೆ, ಅನಿಯಂತ್ರಿತ ಹವಾಮಾನ ಮತ್ತು ಇತರ ಕಾರಣಗಳಿಂದ ರೈತರ ಜಮೀನಿನ ಬೆಳೆಗಳು ಹಾನಿಗೊಳಗಾದರೂ, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇನ್ನೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತರು ದೂರಿದ್ದಾರೆ. ಈ ಸಂಬಂಧ, ಸ್ಥಳೀಯ ರೈತರು ತಮ್ಮ ಸಮಸ್ಯೆಯನ್ನು ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರ ಗಮನಕ್ಕೂ ತಂದಿದ್ದಾರೆ. ಆದರೂ, ಇಂದಿಗೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಪರವಾಗಿ ಮಾತನಾಡಿದ ದೇವದುರ್ಗ ತಾಲೂಕು ಅಧ್ಯಕ್ಷರಾದ ಮರಿಲಿಂಗ ಪಾಟೀಲ್, ಯುವ ಘಟಕ ಜಿಲ್ಲಾಧ್ಯಕ್ಷರಾದ ಮಲ್ಲೇಶ್ ನಾಯಕ (ಗೌರಂಪೇಟೆ), ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ ಹಾಗೂ ನಾಗರಾಜ್ ತ್ಯಾಗ್ಗಹಾಳ್ (ಗೌರಂಪೇಟೆ) ಅವರು, “ನೊಂದ ಗ್ರಾಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಬೇಕು. ಬೆಳೆ ಹಾನಿಯಾದ ರೈತರಿಗೆ ಸರಿಯಾದ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.

ಇನ್ನು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ಸೋಮವಾರವೇ ಸಂಬಂಧಿಸಿದ ಗ್ರಾಮಗಳ ಮಧ್ಯ ರಸ್ತೆಯಲ್ಲಿ ರೈತರ ಒಪ್ಪಿಗೆ ಪಡೆದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ರೈತರು “ನಾವು ನಮ್ಮ ಬದುಕಿಗಾಗಿ ಕೃಷಿ ಮಾಡುತ್ತಿದ್ದೇವೆ. ಆದರೆ ನಮ್ಮ ಸಂಕಷ್ಟದ ಸಮಯದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ನಮ್ಮ ಜೊತೆ ನಿಲ್ಲಬೇಕು. ಇಲ್ಲದಿದ್ದರೆ ಹೋರಾಟವೇ ಮಾರ್ಗ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬ ಒತ್ತಾಯ ಜೋರಾಗಿದೆ.

 

Advertisement
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
“ಜನರ ಜೀವಕ್ಕೆ ಬೆಲೆ ಇಲ್ವಾ..? 8 ವರ್ಷಗಳಿಂದ ನರಳುತ್ತಿರುವ ತಡಕಲ್ ಗ್ರಾಮ!”ಸಾವಿನ ದವಡೆಯಿಂದ ತಾಯಿ-ಮಗುವಿಗೆ ಮರುಜನ್ಮ ನೀಡಿದ ಸಿಂಧನೂರು MCH ವೈದ್ಯರ ಸಾಹಸಸಿಂಧನೂರಿನಲ್ಲಿ ಭೀಕರ ಅಪಘಾತ : ಒಬ್ಬ ವಿದ್ಯಾರ್ಥಿನಿ ದುರ್ಮರಣ – ಮೂವರು ಗಂಭೀರಡೊನೇಷನ್ ಹಾವಳಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ“ಸಿಂಧನೂರಿಗೆ ಒಳ್ಳೆ ಟೈಮ್” – ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸಾ..?ಹಸಿರು ಹೋರಾಟ vs ಜಾಹೀರಾತು ಮಾಫಿಯಾ – ಸಿಂಧನೂರಿನಲ್ಲಿ ಏನಾಗುತ್ತಿದೆ?ಗಾಂಧಿ ಸರ್ಕಲ್ ಗಂಧದ ಸರ್ಕಲ್ ಆಯ್ತು!ವರ್ಷಗಳ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿತ: ಯಾದಗಿರಿಯಲ್ಲಿ ವಿವಾದಕ್ಕೆ ತಿರುವುರಾಯಚೂರು ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ನೇಮಕದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು, ಸಮರ್ಥ್ ಶಾಮನೂರ್ ವಿಜಯಿಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು, ಬಿಜೆಪಿಗೆ ಹಿನ್ನಡೆಗದಗ ಜಾತ್ರೆಯಲ್ಲಿ ಅವಘಡ: ಡಾನ್ಸಿಂಗ್ ಪ್ಲೇಟ್ ಮುರಿದು 18 ಮಂದಿಗೆ ಗಾಯಖಾಸಗಿ ಶಾಲೆಗಳ ಡೊನೇಷನ್ ದಂಧೆಗೆ ಕಡಿವಾಣ ಹಾಕಿ: ಎಸ್‌ಎಫ್‌ಐ ಆಗ್ರಹಕಣ್ಣಿಗೆ ಕಾಣದ ಅಪಾಯ: ಅತಿ ಹೆಚ್ಚಿನ ಯುವಿ ಕಿರಣಗಳಿಂದ ಆರೋಗ್ಯಕ್ಕೆ ಭೀತಿ