ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಭಗವಾನ್ ಮಹಾವೀರರ ಶಾಂತಿ, ಸೌಹಾರ್ಧತೆ ಸಂದೇಶಗಳು ಇಂದಿಗೂ ಪ್ರಸ್ತುತ: ಡಾ. ಹಂಪಣ್ಣ ಸಜ್ಜನ್

ಮಹಾವೀರ ಜಯಂತಿ ಅಂಗವಾಗಿ ರಾಯಚೂರಿನಲ್ಲಿ ಭಾವಚಿತ್ರ ಮೆರವಣಿಗೆ, ಅಹಿಂಸಾ ಸಂದೇಶ ಸಾರಿದ ಜನತೆ

ರಾಯಚೂರು, ಮಾರ್ಚ್ 31:
ಭಗವಾನ್ ಮಹಾವೀರರು ಬೋಧಿಸಿದ ಶಾಂತಿ, ಸೌಹಾರ್ಧತೆ ಹಾಗೂ ಸಹೋದರತೆ ಸಂದೇಶಗಳು ಇಂದಿನ ಸಮಾಜದಲ್ಲೂ ಅತ್ಯಂತ ಪ್ರಸ್ತುತವಾಗಿವೆ ಎಂದು ರಾಯಚೂರು ಸಹಾಯಕ ಆಯುಕ್ತರಾದ ಡಾ. ಹಂಪಣ್ಣ ಸಜ್ಜನ್ ತಿಳಿಸಿದ್ದಾರೆ. ನಗರದ ಸುಮತಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಆರಾಧನಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

news_1775019685_4_290.webp

 

ಮಹಾವೀರರು ಪ್ರತಿಪಾದಿಸಿದ ಅಹಿಂಸಾ ತತ್ವವು ಮಾನವಕುಲಕ್ಕೆ ದಾರಿದೀಪವಾಗಿದ್ದು, ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ ಮಾತನಾಡಿ, ಕರುಣೆ, ಅಹಿಂಸೆ ಮತ್ತು ಸಮಾನತೆ ಎಂಬ ಮಹಾವೀರರ ಬೋಧನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. “ನಾವು ಬದುಕಬೇಕು, ಇತರರನ್ನು ಬದುಕಲು ಬಿಡಬೇಕು” ಎಂಬ ಸಂದೇಶವನ್ನು ಪಾಲಿಸುವುದು ಅತ್ಯಂತ ಅಗತ್ಯವೆಂದು ಹೇಳಿದರು. ಮಹಾವೀರರ ಉಪದೇಶಗಳು ಜೈನ ಧರ್ಮಕ್ಕೆ ಮಾತ್ರ ಸೀಮಿತವಲ್ಲದೆ, ಇಡೀ ಮನುಕುಲದ ಕಲ್ಯಾಣಕ್ಕೆ ಮಾರ್ಗದರ್ಶಕವಾಗಿವೆ ಎಂದರು.

news_1775019686_5_895.webp

 

ಉಪನ್ಯಾಸಕರಾಗಿ ಮಾತನಾಡಿದ ಪ್ರೇಮಲತಾ ಅವರು, ಮಹಾವೀರರು ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಮಹಾನ್ ವ್ಯಕ್ತಿಯಾಗಿದ್ದು, ತಮ್ಮ ಜೀವನವನ್ನೇ ಮಾನವಕಲ್ಯಾಣಕ್ಕೆ ಮುಡುಪಾಗಿಟ್ಟಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

news_1775019684_2_208.webp

 

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಜೈನ್ ಭವನದಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡು ಶಾಂತಿ, ಸಹಿಷ್ಣುತೆ ಹಾಗೂ ಅಹಿಂಸೆಯ ಸಂದೇಶವನ್ನು ಸಾರಿದರು.

news_1775019685_3_457.webp

 

news_1775019683_0_571.webp

 

news_1775019684_1_367.webp

 

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ತಹಶೀಲ್ದಾರ್ ಸುರೇಶ್ ವರ್ಮ, ಮಹಾನಗರ ಪಾಲಿಕೆ ಸಮಿತಿ ಕಾರ್ಯದರ್ಶಿ ಕೃಷ್ಣಾ ಶಾವಂತಗೇರಾ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.  ದಂಡಪ್ಪ ಬಿರಾದಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಶೋಕ ಕುಮಾರ್ ಜೈನ್ ವಂದಿಸಿದರು.

Advertisement
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
“ಜನರ ಜೀವಕ್ಕೆ ಬೆಲೆ ಇಲ್ವಾ..? 8 ವರ್ಷಗಳಿಂದ ನರಳುತ್ತಿರುವ ತಡಕಲ್ ಗ್ರಾಮ!”ಸಾವಿನ ದವಡೆಯಿಂದ ತಾಯಿ-ಮಗುವಿಗೆ ಮರುಜನ್ಮ ನೀಡಿದ ಸಿಂಧನೂರು MCH ವೈದ್ಯರ ಸಾಹಸಸಿಂಧನೂರಿನಲ್ಲಿ ಭೀಕರ ಅಪಘಾತ : ಒಬ್ಬ ವಿದ್ಯಾರ್ಥಿನಿ ದುರ್ಮರಣ – ಮೂವರು ಗಂಭೀರಡೊನೇಷನ್ ಹಾವಳಿ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ“ಸಿಂಧನೂರಿಗೆ ಒಳ್ಳೆ ಟೈಮ್” – ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸಾ..?ಹಸಿರು ಹೋರಾಟ vs ಜಾಹೀರಾತು ಮಾಫಿಯಾ – ಸಿಂಧನೂರಿನಲ್ಲಿ ಏನಾಗುತ್ತಿದೆ?ಗಾಂಧಿ ಸರ್ಕಲ್ ಗಂಧದ ಸರ್ಕಲ್ ಆಯ್ತು!ವರ್ಷಗಳ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿತ: ಯಾದಗಿರಿಯಲ್ಲಿ ವಿವಾದಕ್ಕೆ ತಿರುವುರಾಯಚೂರು ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ನೇಮಕದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು, ಸಮರ್ಥ್ ಶಾಮನೂರ್ ವಿಜಯಿಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲುವು, ಬಿಜೆಪಿಗೆ ಹಿನ್ನಡೆಗದಗ ಜಾತ್ರೆಯಲ್ಲಿ ಅವಘಡ: ಡಾನ್ಸಿಂಗ್ ಪ್ಲೇಟ್ ಮುರಿದು 18 ಮಂದಿಗೆ ಗಾಯಖಾಸಗಿ ಶಾಲೆಗಳ ಡೊನೇಷನ್ ದಂಧೆಗೆ ಕಡಿವಾಣ ಹಾಕಿ: ಎಸ್‌ಎಫ್‌ಐ ಆಗ್ರಹಕಣ್ಣಿಗೆ ಕಾಣದ ಅಪಾಯ: ಅತಿ ಹೆಚ್ಚಿನ ಯುವಿ ಕಿರಣಗಳಿಂದ ಆರೋಗ್ಯಕ್ಕೆ ಭೀತಿ