ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅತಿಥಿ ಉಪನ್ಯಾಸಕರ ಬಿಡುಗಡೆಗೆ ಆಕ್ರೋಶ: ಮೇ 25 ರಿಂದ ಪರೀಕ್ಷಾ ಕಾರ್ಯ ಬಹಿಷ್ಕಾರದ ಎಚ್ಚರಿಕೆ

ಸರ್ಕಾರದ ನಿರ್ಧಾರಕ್ಕೆ ಅತಿಥಿ ಉಪನ್ಯಾಸಕರ ತೀವ್ರ ವಿರೋಧ

Advertisement

news_1778048979_0_441.webp

Advertisement

BB NEWS KANNADA 

ಸಿಂಧನೂರು, ಮೇ 14 : ಸಿಂಧನೂರು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮೇ 15 ರಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಮುಂದಾಗಿರುವ ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಅವೈಜ್ಞಾನಿಕ ಕ್ರಮವನ್ನು ಖಂಡಿಸಿರುವ ಅತಿಥಿ ಉಪನ್ಯಾಸಕರ ಸಂಘವು, ಕೂಡಲೇ ಆದೇಶ ಹಿಂಪಡೆಯದಿದ್ದರೆ ಮೇ 25 ರಿಂದ ಆರಂಭವಾಗಲಿರುವ ಪರೀಕ್ಷಾ ಕಾರ್ಯಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದೆ.

news_1777986272.webp

ಗುರುವಾರ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಸರ್ಕಾರದ ಈ ಹಠಾತ್ ನಿರ್ಧಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.

ಪೂರ್ವ ಮಾಹಿತಿ ಇಲ್ಲದ ನಿರ್ಧಾರ: 2025-26ನೇ ಸಾಲಿನ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಡಿಸೆಂಬರ್ 9 ರಿಂದ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರನ್ನು, ದಿನಾಂಕ:15-05-2026 ರಿಂದ ಬಿಡುಗಡೆಗೊಳಿಸುತ್ತಿರುವುದು ಅಮಾನವೀಯ ಮತ್ತು ಅತಿಥಿ ಉಪನ್ಯಾಸಕರ ಶೋಷಣೆ ಎಂದು ದೂರಿದ್ದಾರೆ.

news_1778142080_0_556.webp

news_1777986246_0_709.webp

ಆರ್ಥಿಕ ಸಂಕಷ್ಟ: ಪ್ರತಿವರ್ಷ 10 ತಿಂಗಳ ಕಾಲ ಸೇವೆಗೆ ಅವಕಾಶವಿರುತ್ತಿತ್ತು. ಆದರೆ ಈ ಬಾರಿ ಅವಧಿಗೂ ಮುನ್ನವೇ ಕೈಬಿಡುತ್ತಿರುವುದರಿಂದ ನೂರಾರು ಕುಟುಂಬಗಳು ಬೀದಿಗೆ ಬೀಳುವ ಭೀತಿ ಎದುರಾಗಿದೆ.

ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆ: ಅನುಭವವಿರುವ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಬಿಡುಗಡೆ ಮಾಡುವುದರಿಂದ ವಿದ್ಯಾರ್ಥಿನಿಯರ ವ್ಯಾಸಂಗ ಹಾಗೂ ಮುಂಬರುವ ಪರೀಕ್ಷಾ ಸಿದ್ಧತೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕ ವೃತ್ತಿಯನ್ನೇ ನಂಬಿ ನಾವು ಜೀವನ ಸಾಗಿಸುತ್ತಿದ್ದೇವೆ. ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣದ ಹೊಣೆ ಹೊತ್ತಿರುವ ನಮಗೆ ಈ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ತಕ್ಷಣವೇ ಈ ಆದೇಶವನ್ನು ತಡೆಹಿಡಿಯಬೇಕು.ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ, ಸಿಂಧನೂರು.

ಹೋರಾಟದ ಎಚ್ಚರಿಕೆ:

ಒಂದು ವೇಳೆ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ತನ್ನ ನಿರ್ಧಾರವನ್ನು ಬದಲಿಸದಿದ್ದರೆ, ಅನಿವಾರ್ಯವಾಗಿ ಮೇ 25 ರಿಂದ ನಡೆಯಲಿರುವ ಕಾಲೇಜು ಪರೀಕ್ಷೆಗಳ ಎಲ್ಲಾ ಕಾರ್ಯಗಳಿಂದ ದೂರ ಉಳಿಯುವುದಾಗಿ ಮತ್ತು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಂಘದ ಗೌರವಾಧ್ಯಕ್ಷರು ಡಾ.ಮುದುಕಪ್ಪ ,ಅಧ್ಯಕ್ಷರು ಡಾ. ಮದಗಪ್ಪ, ಕಾರ್ಯಧ್ಯಕ್ಷರು ಶಂಕರ ವಾಲೇಕರ್ ಕಾರ್ಯದರ್ಶಿಗಳು ಡಾ.ಬಸವರಾಜ ಬಳೆಗಾರ ಮತ್ತು ವೀರೇಶ ಕನ್ನಾರಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
100 ಬೀದಿ ಹಸುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಿದ ವಕೀಲರುಸಿಂಧನೂರು ದಸರಾ ಉತ್ಸವ–2026ಕ್ಕೆ ಸಕಲ ಸಿದ್ಧತೆ: 11 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮಮಸ್ಕಿ ರಾಜಕೀಯ ವಲಯದಲ್ಲಿ ಯುವ ನಾಯಕ ಬಸವರಾಜ್ ಗಲಗಿನ ಹೆಸರು ಚರ್ಚೆಯಲ್ಲಿ!ರಾಯಚೂರು ಜಿಲ್ಲಾ ಪಂಚಾಯಿತಿಗೆ 39 ಸ್ಥಾನಗಳು; ಮಹಿಳೆಯರಿಗೆ 20 ಸ್ಥಾನ ಮೀಸಲುಬದುಕು ಎಂದರೆ… ಒಂದು ಕ್ಷಣದ ಅತಿಥಿಅಕ್ಟೋಬರ್ 04ರಂದು ರಾಯಚೂರಿಗೆ ಕೇಂದ್ರ ಬರ ಅಧ್ಯಯನ ತಂಡನೀರಾವರಿ ಸಮಸ್ಯೆ ಪರಿಹಾರಕ್ಕೆ ಅ.7ರಂದು ಸಭೆಅರಗಿನಮರ ಕ್ಯಾಂಪ್‌ನಲ್ಲಿ ಮೂಲಸೌಕರ್ಯ ಕೊರತೆಖಾಸಗಿ ಕಾಲೇಜುಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪರಶುರಾಮ ಮಲ್ಲಾಪುರ ಆಯ್ಕೆಹಾಸ್ಟೆಲ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಗೌರವಪೂರ್ವಕ ಆಹ್ವಾನಅಕ್ಟೋಬರ್ 4ರಂದು ರಾಯಚೂರಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ಸಾಧ್ಯತೆ!“ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಸ್ವಾಮೀಜಿ!”ಸಿಂಧನೂರಿನಲ್ಲಿ ಸೆ.23ರಿಂದ ಉದ್ಯಮಶೀಲತಾ ತರಬೇತಿಮನೋರೋಗ ತಜ್ಞರು, ಸಾಮಾಜಿಕ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ